ಶಿಗ್ಗಾವ್

ಸಕರಾತ್ಮಾಕ ,ನಕಾರಾತ್ಮಕ ಭಾವನೆಗಳ ಜಾಗೃತಿಯಾದಾಗ ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ: ಶಕುಂತಲಾ

ಸಕರಾತ್ಮಾಕ ,ನಕಾರಾತ್ಮಕ ಭಾವನೆಗಳ ಜಾಗೃತಿಯಾದಾಗ ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ: ಶಕುಂತಲಾ

ಶಿಗ್ಗಾವಿ 06: ಮಕ್ಕಳಿಗೆ ಸಕರಾತ್ಮಾಕ ಮತ್ತು ನಕಾರಾತ್ಮಕ ಎರಡು ಗುಣಗಳ ಸೂಕ್ತ ಭಾವನೆಯನ್ನು ಜಾಗೃತ ಮಾಡಬೇಕು ಅಂದಾಗ ಮಾತ್ರ ಮಕ್ಕಳ ಸರ್ವಾಂಗೀನ ಅಭಿವೃದ್ಧಿ ಸಾಧ್ಯ ಎಂದು ಶಕುಂತಲಾ ಕೋಣನವರ ಹೇಳಿದರು.

ಪಟ್ಟಣದ ವಿರಕ್ತಮಠ ಶರಣ ಸಂಸ್ಕೃತಿ ಉತ್ಸವ 2021  ಲಿಂ.ಸಂಗನಬಸವ ಮಹಾಸ್ವಾಮಿಗಳ 3ನೇ ದಿನದ ಪುಣ್ಯಾರಾಧನೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. 

ತಂದೆ ತಾಯಿಗಳು ಮಕ್ಕಳಿಗೆ ಸಮಯವನ್ನು ಮೀಸಲಿಟ್ಟು ಮಕ್ಕಳ ಜೊತೆ ಅನ್ಯೋನ್ಯತೆಯಿಂದ ಬೇರೆಯಬೇಕು ವಿನಹ: ಮಕ್ಕಳಿಂದ ದೂರವಿರಬಾರದು ಅಲ್ಲದೇ ಮಕ್ಕಳಿಗೆ ಸೋಲು ಗೆಲುವುಗಳ ವ್ಯತ್ಯಾಸವನ್ನು ತಿಳಿಸಬೇಕಾದಾಗ ಮಿತ್ರನಂತೆ ವರ್ತಿಸಬೇಕು ಎಂದರು.

ಮಕ್ಕಳಿಗೆ ಮನೆಯಲ್ಲಿಯೇ ಸಂಸ್ಕಾರವನ್ನು ನೀಡಿ ಮಕ್ಕಳ ವ್ಯಕ್ತಿತ್ವವನ್ನು ರೂಪಿಸುವುದು ತಂದೆ ತಾಯಿಗಳ ಕರ್ತವ್ಯ ಹಾಗೂ ತಂದೆ ತಾಯಿಗಳ ಏನೇ ಸಮಸ್ಯೆಯಿದ್ದರೂ ಸಹಿತ ಮಕ್ಕಳ ಮುಂದೆ ಅವುಗಳನ್ನು ಪ್ರಸ್ತಾಪ ಮಾಡಬಾರದು ಮತ್ತು ಇಂದಿನ ದಿನಗಳಲ್ಲಿ ಮಕ್ಕಳಿಗೆ ಮುಖ್ಯವಾಗಿ ಒತ್ತಡ ನಿರ್ವಹಣೆ ಹೇಗೆ ಮಾಡಬೇಕು ಎಂಬುದನ್ನು ತಿಳಿಸಬೇಕು ಅಲ್ಲದೇ ಭಾರತ ದೇಶದ ಆಹಾರ ಪದ್ಧತಿಯನ್ನು ಮಕ್ಕಳಿಗೆ ರೂಢಿ ಮಾಡಬೇಕು ಎಂದು ಮಾರ್ಮಿಕವಾಗಿ ಹೇಳಿದರು.

ಧರ್ಮ ಕಾರ್ಯದ ದಾನಿಗಳಾದ ಸೋಮಶೇಖರ ಮೂಲಿಮನಿ, ಶಿವಯೋಗಿ ಜವಳಿ ಹಾಗೂ ನಟರಾಜ ನಾಟ್ಯ ಸಂಘದ ಶಿಕ್ಷಕ ಸಾಯಿಬಾಬಾ ಕಾಮನಹಳ್ಳಿ ಇವರನ್ನು ಶ್ರೀಗಳು ಗೌರವಿಸಿದರು. ನಾಟ್ಯ ಕಲಾವಿರಾದ ಜಾಹ್ನವಿ ಎಸ್.ಕೆ, ಸ್ಮೀತಾರಾಣಿ, ಕೋನಿಕಾ,ರಂಜೀತಾ, ಸುಮಂಗಳಾ, ಸಂದ್ಯಾ, ವೈಷ್ಣವಿಯವರಿಂದ ಭರತ ನಾಟ್ಯ ಪ್ರದರ್ಶನ ನೀಡಿದರು.

ಸಾನಿಧ್ಯವನ್ನು ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ವಹಿಸಿ ಆರ್ಶಿವದಿಸಿದರು. ಇಂದಿನ ಪ್ರವಚನವನ್ನು ಡಾ. ಬಸವಾನಂದ ಸ್ವಾಮಿಗಳು ವಿರಕ್ತಮಠ ಮಮ್ಮಿಗಟ್ಟಿ, ಧರ್ಮದ ಕುರಿತಾಗಿ ಶರಣ ಶರಣೆಯರನ್ನು ಜಾಗೃತ ಗೋಳಿಸಿದರು. ಬಸವಲಿಂಗ ದೇವರು ಉಪಸ್ಥಿತಿ,  ಸಂಗೀತವನ್ನು ಹನುಮಂತ ಪಾದಗಟ್ಟಿ, ತಬಲಾ ಪ್ರಕಾಶ ನೇರವೇರಿಸಿದರು, ಕಾರ್ಯಕ್ರಮವನ್ನು ಶರೀಫ ಮಾಕಪ್ಪನವರ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು. ಪ್ರಸಾದ ಸೇವೆಯನ್ನು ದಿ ಚಂದ್ರಶೇಖರ.ವಿ. ಪತ್ತಾರ ಇವರ ಸ್ಮರಣಾರ್ಥ ಇವರ ಕುಟುಂಬ ವರ್ಗದಿಂದ ನೇರವೇರಿತು.

ಸುದ್ದಿ ಓದಿ