ಶಿಗ್ಗಾವ್

ತಂದೆ- ತಾಯಿಗಳನ್ನೇ ದೇವರೆಂದು ಪೂಜಿಸಿ: ಸಂಗನಬಸವ ಶ್ರೀ

ತಂದೆ- ತಾಯಿಗಳನ್ನೇ ದೇವರೆಂದು ಪೂಜಿಸಿ: ಸಂಗನಬಸವ ಶ್ರೀ

ಶಿಗ್ಗಾವಿ: ಇಲ್ಲದ ದೇವರ ಹುಡುಕುವದನ್ನು ಬಿಟ್ಟು ಕಣ್ಮೂಂದೆ ಇರುವ ತಂದೆ ತಾಯಿಂದಿರೆ, ಗುರುಗಳೇ ದೇವರು ಎಂದು ಪೂಜಿಸಿ, ಮಕ್ಕಳು ಸಂಸ್ಕಾರವಂತರಾಗಬೇಕು, ಸಮಾಜದಲ್ಲಿ ನೈತಿಕತೆ ನೆಲಸಬೇಕು ಎಂದು ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಹೇಳಿದರು.

ಪಟ್ಟಣದ ಸಂಗನಬಸವ ಮಂಗಲ ಭವನದಲ್ಲಿ ದಿ. ಡಾ. ಹನುಮಂತಗೌಡ ಪಾಟೀಲ್ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದ ಸಾನಿದ್ಯ ವಹಿಸಿ ಆಶಿರ್ವಚಿಸಿ ಮಾತನಾಡಿದ ಅವರು, ಜೀವನದಲ್ಲಿ ಅನುಭವ ದೊಡ್ಡದು, ಅಂತ ಮಕ್ಕಳಿಗೆ ಡಾ ಎಚ್ ಜಿ ಪಾಟೀಲ್ ಜನ್ಮ ನೀಡಿದ್ದಾರೆ, ತಂದೆ ತಾಯಿಯರನ್ನು ಸ್ಮರಿಸುವಂತ ಕೆಲಸಗಳು ಮಾಡಬೇಕು ಇದರಿಂದ ಜೀವನ ಸಾರ್ಥಕವಾಗುತ್ತದೆ ಎಂದರು.

ಮುಖಂಡ ರವಿ ಕೂಡವಕ್ಕಲಿಗೇರ ಮಾತನಾಡಿ ಡಾ ಎಚ್ ಜಿ ಪಾಟೀಲ್ ಅವರು ಬಡ ಜನರ ಹೃದಯ ಗೆದ್ದ ವೈದ್ಯರು, ನಿಷ್ಠುರವಾದಿಗಳು ಎಂದರು.

ಬೆಂಗಳೂರಿನ ಅಪೇಕ್ಸ ಬ್ಯಾಂಕ ನಿರ್ದೇಶಕ ಲಿಂಗರಾಜ ಚಪ್ಪರದಳ್ಳಿ ಮಾತನಾಡಿ ಡಾ ಎಚ್ ಜಿ ಪಾಟೀಲ್ ಅವರು ನೇರ ನಿಷ್ಠುರ ಸರಳ ವ್ಯಕ್ತಿತ್ವ ವ್ಯಕ್ತಿ, ಒಳ್ಳೆಯ ವ್ಯಕ್ತಿ ಒಳ್ಳೆಯದನ್ನೆ ಬಯಸುವವರು, ವೈದ್ಯಕೀಯ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿದವರು ಎಂದರು. 

ಕಾರ್ಯಕ್ರಮದಲ್ಲಿ ರಾಜ್ಯ ಚಲನ ಚಿತ್ರ ಮಂಡಳಿಯ ರಾಜ್ಯ ಉಪಾಧ್ಯಕ್ಷ ಉಮೇಶ ಬಣಕಾರ, ಡಾ. ಪ್ರಭು ಪಾಟೀಲ್, ಮುಖಂಡರಾದ ಶಿವಾನಂದ ರಾಮಗೇರಿ, ಮಾತನಾಡಿದವರು, 

ಕಾರ್ಯಕ್ರಮದಲ್ಲಿ ಜಿಲ್ಲಾ ಆಯುಷ ಅಧಿಕಾರಿ ಡಾ. ಶಂಕರಗೌಡ ಶಿವನಗೌಡ್ರ, ಶಸ್ತ್ರ ಚಿಕಿತ್ಸಕ ಎಲ್ ಎಸ್ ಪಾಟೀಲ್, ಪುರಸಭೆ ಸದಸ್ಯ ಸಿದ್ದಾರ್ಥಗೌಡ ಪಾಟೀಲ್, ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಬಸವರಾಜ ಅರಬಗೊಂಡ, ಗಣಿ ಉದ್ಯಮಿ ಚನ್ನು ಜತ್ತಿ, ಡಾ. ಆರ್ ಎಫ್ ಪಾಟೀಲ್, ಕಲ್ಲಪ್ಪ ಮಾರಂಬಿಡ, ಗದಿಗೆಪ್ಪ ಹರಿಗೊಂಡ, ಪಾರ್ವತಿ ಪಾಟೀಲ್, ಉಮೇಶಗೌಡ ಪಾಟೀಲ್, ಡಾ. ಕುಮಾರಗೌಡ ಪಾಟೀಲ್, ಸೇರಿದಂತೆ ಡಾ, ಎಚ್ ಜಿ ಪಾಟೀಲ್ ಕುಟುಂಬಸ್ಥರು, ಅಭಿಮಾನಿ ಭಳಗದವರು ಇದ್ದರು.

ಶಿಕ್ಷಕ ಕೆ ಬಿ ಚನ್ನಪ್ಪ ಹಾಗೂ ರೇಖಾ ಜವಳಿ ಕಾರ್ಯಕ್ರಮ ನಿರ್ವಹಿಸಿದರು.

ಸುದ್ದಿ ಓದಿ