ಶಿಗ್ಗಾವ್

ಮನುಷ್ಯನಿಗೆ ಪ್ರಾಣಾಯಾಮ ದಿವ್ಯ ಸಂಜೀವಿನಿ: ಮಲ್ಲಿಕಾರ್ಜುನ

ಮನುಷ್ಯನಿಗೆ ಪ್ರಾಣಾಯಾಮ ದಿವ್ಯ ಸಂಜೀವಿನಿ: ಮಲ್ಲಿಕಾರ್ಜುನ

ಶಿಗ್ಗಾವಿ 22: ಮನುಷ್ಯನಿಗೆ ಪ್ರಾಣಾಯಾಮ ದಿವ್ಯ ಸಂಜೀವಿನಿಯಾಗಿದ್ದು, ಪ್ರತಿದಿನ ನಿಯಮಿತ ಕಾಲ ವ್ಯಾಯಾಮ ಮಾಡುವ ಮೂಲಕ ಆರೋಗ್ಯಯುತ ಜೀವನ ನಡೆಸಬಹುದಾಗಿದೆ ಎಂದು ಬಿಸನಳ್ಳಿ ಕಾಶಿ ವೇದಪಾಠ ಶಾಲೆಯ ಮುಖ್ಯ ಶಿಕ್ಷಕ ಮಲ್ಲಿಕಾರ್ಜುನ ಶಾಸ್ತ್ರೀಜಿ ಹೇಳಿದರು. 

ತಾಲೂಕಿನ ಬಿಸನಳ್ಳಿ ವೇದ ಪಾಠಶಾಲೆಯ ಆವರಣದಲ್ಲಿ ವಿಶ್ವ ಯೋಗದಿನಾಚರಣೆ ಅಂಗವಾಗಿ ಜಿಲ್ಲಾ ಕ್ರೀಡಾ ಇಲಾಖೆ ಅಧಿಕಾರಿ ಪ್ರವೀಣಕುಮಾರ ರವರಿಂದ ಆನ್ ಲೈನ್ ಮೂಲಕ ಯೋಗ ತರಬೇತಿಯನ್ನು ಪಡೆದು ಮಾತನಾಡಿದ ಅವರು, ಯೋಗದಲ್ಲಿ ಮನುಷ್ಯನ ರೋಗಗಳನ್ನು ದೂರಮಾಡುವ ಶಕ್ತಿ ಅಡಗಿದೆ. ಮನುಷ್ಯ ಆಧ್ಯಾತ್ಮದೋಂದಿಗೆ ಯೋಗವನ್ನು ಮೈಗೂಡಿಸಿಕೋಂಡಾಗ ಧಿರ್ಘಾಯುಷ್ಯು ಪಡೆಯಬಹುದಾಗಿದೆ ಎಂದು ಹೇಳಿದರು. 

ಕಾಶಿ ಶಾಖಾಮಠದ ಮುಖ್ಯ ವ್ಯವಸ್ಥಾಪಕ ಗುರುಶಾಂತಪ್ಪ ನರೇಗಲ್ ಮಾತನಾಡಿ, ನಮ್ಮ ಯೋಗ ಪ್ರತಿದಿನ ಸೂರ್ಯ ನಮಸ್ಕಾರದಿಂದ ಪ್ರಾರಂಭವಾಗಬೇಕು. ಇದರಿಂದ ಸೂರ್ಯನ ಕಿರಣಗಳು ಮೈಮೇಲೆ ಆವರಿಸುವುದರಿಂದ ಮನುಷ್ಯ ಪ್ರತಿದಿನ ನವ ಉಲ್ಲಾಸ, ಚೈತನ್ಯದೊಂದಿಗೆ, ಲವಲವಿಕೆಯಿಂದ ದಿನವಿಡಿ ಆಯಾಸವಿಲ್ಲದೇ ಕಾರ್ಯ ನಿರ್ವಹಿಸಬಲ್ಲ. ಇದು ಯೋಗದಿಂದ ಮನುಷ್ಯನಿಗೆ ಹಣ ಕಳೆದುಕೊಳ್ಳದೇ ಲಭಿಸುವ ಧಿವ್ಯ ಓಷಧಿಯಾಗಿದೆ ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ಪಾಠಶಾಲೆಯ ವಟುಗಳು, ಸಿಬ್ಬಂದಿ, ವ್ಯವಸ್ಥಾಪಕರು ಉಪಸ್ಥಿತರಿದ್ದರು. 


ಸುದ್ದಿ ಓದಿ