ಯರಗಟ್ಟಿ

ವಿಶ್ವ ಯೋಗ ದಿನ: ಯೋಗಪಟು ಪವಿತ್ರಾಗೆ ಸನ್ಮಾನ

ವಿಶ್ವ ಯೋಗ ದಿನ: ಯೋಗಪಟು ಪವಿತ್ರಾಗೆ ಸನ್ಮಾನ

ಯರಗಟ್ಟಿ : ಸಮೀಪದ ಮುನವಳ್ಳಿ ಪಟ್ಟಣದ ಜೈಂಟ್ಸ್ ಗ್ರೂಪ್ ವತಿಯಿಂದ 9ನೇ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಬಿ. ಸಿ. ಎಂ. ಹಾಸ್ಟೇಲ್ ಆವರಣದಲ್ಲಿ ಶ್ರೀ ಸಾಯಿ ಯೋಗ ವಿದ್ಯಾ ಕೇಂದ್ರದ ಯೋಗ ಪಟುಗಳಿಂದ ಯೋಗ ಪ್ರದರ್ಶನ ಜರುಗಿತು. ಯೋಗಪಟು ಪವಿತ್ರಾ ಪರಕನಟ್ಟಿ (ಚಿಕ್ಕನಗೌಡ್ರ) ಅವರಿಗೆ ಸನ್ಮಾನ ಜರುಗಿತು. ಅಧ್ಯಕ್ಷ ಶಿವಾಜಿ ಮಾನೆ ಅಧ್ಯಕ್ಷತೆ ವಹಿಸಿದ್ದರು. ಅನಿಲ ಕಿತ್ತೂರ, ಅಶೋಕ ಪಟ್ಟಣಶೆಟ್ಟಿ, ಯಲ್ಲಪ್ಪ ಪೂಜೇರ, ವೀರಣ್ಣ ಕೊಳಕಿ, ಶಿವು, ಬಾಳು ಹೊಸಮನಿ, ಎಸ್.ಬಿ.ಗಂಗಾವತಿ, ಉದಯ ಶೆಟ್ಟಿ, ಶಿವಾನಂದ ಬಡೆಮ್ಮಿ, ಗಣೇಶ ಶೆಟ್ಟಿ, ವಿರಾಜ ಕೊಳಕಿ, ಬಿ.ಬಿ.ಹುಲಿಗೊಪ್ಪ, ಪ್ರಭಾಕರ ಶೆಟ್ಟಿ,  ಶಿವು, ಸಂಗೀತಾ, ಬಡೆಮ್ಮಿ ಸೇರಿದಂತೆ ಇತರರು ಇದ್ದರು.


ಸುದ್ದಿ ಓದಿ