ಹೂವಿನ ಹಡಗಲಿ

ಹೊಳಗುಂದಿಯಲ್ಲಿ ವಿಶ್ವ ಮಹಿಳಾ ದಿನಾಚರಣೆ

ಹೊಳಗುಂದಿಯಲ್ಲಿ ವಿಶ್ವ ಮಹಿಳಾ ದಿನಾಚರಣೆ

ಲೋಕದರ್ಶನ ವರದಿ 

ಹೂವಿನಹಡಗಲಿ 08: ತಾಲೂಕಿನ ಹೊಳಗುಂದಿ ಗ್ರಾಮ ಪಂಚಾಯ್ತಿಯಲ್ಲಿ ಮಂಗಳವಾರ ವಿಶ್ವ ಮಹಿಳಾ ದಿನಾಚರಣೆಯನ್ನು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸಿದ್ದಮ್ಮ ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಲಾಯಿತು.  

 

ಗ್ರಾಮ ಪಂಚಾಯ್ತಿ ಸದಸ್ಯೆ ಹಾವನೂರು ವೀರಮ್ಮ ಅಜ್ಜಪ್ಪ ಮಾತನಾಡಿ ಸಮಾಜದ ಕಣ್ಣಿನಲ್ಲಿ ಮಹಿಳೆ ಎಷ್ಟೇ ತುಳಿತಕ್ಕೆ ಒಳಗಾಗದರೂ ಹೆಣ್ಣು ಇನ್ನಷ್ಟು ಸಬಲಗೊಳ್ಳತ್ತಲೇ ಇದ್ದಾಳೆ, ಎಲ್ಲಾ ಕ್ಷೇತ್ರದಲ್ಲೂ ಸಾಧನೆ ಮಾಡುತ್ತಿದ್ದಾಳೆ ಎಂದರು. 

ಅಂಗನವಾಡಿ ಕಾರ‌್ಯಕರ್ತೆ ಅಮೃತಶ್ವೇರಿ ಮಾತನಾಡಿ ಹಿಂದಿನ ಕಾಲದಲ್ಲಿ ಬೆರಳೆಣಿಕೆಯಷ್ಟು ಮಹಿಳೆಯರು ಮಾತ್ರ ಮನೆಯಿಂದ ಹೊರಗೆ ಬಂದು ದುಡಿಯುತ್ತಿದ್ದರು. ಇದೀಗ ಕಾಲ ಬದಲಾಗಿದೆ. ಪುರುಷರ ಸಮಾನವಾಗಿ ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ದುಡಿಯುತ್ತಿದ್ದಾಳೆ ಆದರೆ ಮಹಿಳೆಯರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮಹಿಳೆಯರಿಗೆ ಸದಾ ಆತ್ಮರಕ್ಷಣೆ ಸಿದ್ದವಾಗಿರಬೇಕು.ಸ್ವಲ್ಪ ಎಚ್ಚರ ತಪ್ಪಿದ್ರೂ ಅಪಾಯ ಎದುರಿಸಬೇಕಾಗುತ್ತದೆ ಎಂದರು. 

ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಜಿ.ಎಸ್‌.ಪರಮೇಶ ಮಾತನಾಡಿ ಉದ್ಯೋಗ ಖಾತ್ರಿ ಯೋಜನೆ ಕಾರ್ಮಿಕರು,ಸಾಮಾನ್ಯ ಜನರು ಪ್ರಧಾನ ಮಂತ್ರಿ ಸುರಕ್ಷಾ ಭೀಮ ಯೋಜನೆ, ಜೀವನ ಜ್ಯೋತಿಯಂತಹ ಆರೋಗ್ಯ, ಅಪಘಾತ ವಿಮೆಯನ್ನು ನೋಂದಾಯಿಸಿಕೊಳ್ಳಿ ಎಂದ ಅವರು ಸ್ನೇಹಿ ಗ್ರಾಮ ಪಂಚಾಯ್ತಿ ಅಭಿಯಾನ ಕಾರ‌್ಯಕ್ರಮವನ್ನು ಮಾರ್ಚ್‌ 8ರಿಂದ ಜೂನ್ ರವರೆಗೆ ಇದ್ದು ಸಂಜೀವಿನಿ ಒಕ್ಕೂಟದಲ್ಲಿ 54 ಸ್ತ್ರೀಶಕ್ತಿ ಸಂಘಗಳಿಂದ ಮಹಿಳೆಯರು ಭಾಗವಹಿಸಿ ಆರೋಗ್ಯ, ಶಿಕ್ಷಣ,ಸಾರ್ವಜನಿಕ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳಿ ಎಂದು ಮಹಿಳೆಯರಿಗೆ ಸಲಹೆ ನೀಡಿದರು. 

ಗ್ರಾ.ಪಂ.ಉಪಾಧ್ಯಕ್ಷ ಎ.ರಮೇಶ, ಸದಸ್ಯರಾದ ಹನುಮಕ್ಕ, ದಡಾರ​‍್ಪ,ಗುರುಬಸವರಾಜ,ಧನರಾಜ, ಅಂಗನವಾಡಿ ಕಾರ‌್ಯಕರ್ತೆಯರು, ಪಂಚಾಯ್ತಿ ಸಿಬ್ಬಂದಿಗಳು ಭಾಗವಹಿಸಿದ್ದರು. 


ಸುದ್ದಿ ಓದಿ