ವಿಶ್ವ ಮಹಿಳಾ ದಿನಾಚರಣೆ
ಶಿಗ್ಗಾವಿ 10: ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಪುರಸಭೆ ಸದಸ್ಯ ನಸರಿನಬಾನು ತಿಮ್ಮಾಪುರ, ಮಮತಾಜ ಗೋಟಗೋಡಿ, ವಸಂತ ಬಾಗೂರ ಇವರನ್ನು ಮಂಜುನಾಥ ಮಣ್ಣಣ್ಣವರ ನೇತೃತ್ವದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪುರಸಭೆ ಸದಸ್ಯೆ ವಸಂತ ಬಾಗೂರ ಸ್ವಾತಂತ್ರ್ಯ ದೇಶಕ್ಕೆ ಸಿಕ್ಕಿದೇ ಹೊರತು ಇನ್ನೂ ಮಹಿಳೆಯರಿಗೆ ಸಿಕ್ಕಿಲ್ಲ ಎಲ್ಲವೂ ಹೆಸರಿಗೆ ಮಾತ್ರ ಯೋಚಿಸುವ ದುಸ್ಥಿತಿ ನಿರ್ಮಾಣವಾಗಿದೆ ಆದ್ದರಿಂದ ಮಹಿಳೆಯರು ಶೈಕ್ಷಣಿಕವಾಗಿ ಅಭಿವೃದ್ದಿ ಹೊಂದಬೇಕು ಎಂದರು.
ಪುರಸಭೆ ಸದಸ್ಯೆ ನಸರಿನಬಾನು ತಿಮ್ಮಾಪುರ ಮಾತನಾಡಿ ಮಹಿಳೆಯರು ಸಾಮಾಜಿಕವಾಗಿ ಪ್ರಗತಿ ಸಾಧಿಸ ಬೇಕಾದರೆ ಸ್ವಾವಲಂಬಿ ಬದುಕು ಕಟ್ಟಿಕೊಂಡಾಗ ಮಾತ್ರ ಮಹಿಳೆಯರ ಯಶಸ್ಸು ಸಾಧ್ಯ ಎಂದರು.
ಪುರಸಭೆ ಸದಸ್ಯೆ ಮಮತಾಜ ಗೋಟಗೋಡಿ ಮಾತನಾಡಿ ಹೆಣ್ಣು ತನ್ನ ಇಡಿ ಜೀವನವನ್ನು ಕುಟುಂಬಕ್ಕಾಗಿ ತ್ಯಾಗ ಮಾಡಿ ಕುಟುಂಬದ ಆಧಾರ ಸ್ಥಂಭವಾಗಿ ಎಲ್ಲ ರಂಗಗಳಲ್ಲಿ ಕಾರ್ಯನಿರ್ವಹಿಸುತ್ತಾಳೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹನುಮಂತ ಬಂಡಿವಡ್ಡರ, ಕಾಂಗ್ರೇಸ ಮುಖಂಡರಾದ ಮುಕ್ತಿಯಾರ ತಿಮ್ಮಾಪೂರ, ರಶೀದ ಗೋಟಗೋಡಿ ಉಪಸ್ಥಿತರಿದ್ದರು.