ಶಿಗ್ಗಾವ್

ವಿಶ್ವ ಕ್ಷಯರೋಗ ದಿನಾಚರಣೆ ಕಾರ್ಯಕ್ರಮ

ವಿಶ್ವ ಕ್ಷಯರೋಗ ದಿನಾಚರಣೆ ಕಾರ್ಯಕ್ರಮ

ಶಿಗ್ಗಾವಿ 25 : ಭಾರತ ಸರಕಾರ, ಕರ್ನಾಟಕ ಸರಕಾರ, ಜಿಲ್ಲಾಡಳಿತ ಇವರೆಲ್ಲರ ಸಂಕಲ್ಪ 2025 ರ ವೇಳೆಗೆ ಕ್ಷಯಮುಕ್ತ ದೇಶ, ರಾಜ್ಯ, ಜಿಲ್ಲೆ ಮಾಡುವುದು ಆ ನಿಟ್ಟಿನಲ್ಲಿ ನಾವು ನಿವೆಲ್ಲರೂ ಕಾರ್ಯಕ್ರಮ ಹಮ್ಮಿಕೊಂಡು ಕ್ಷಯಮುಕ್ತ ಮಾಡಲು ಕಂಕಣ ಬದ್ದರಾಗೋಣ ಎಂದು ತಹಶೀಲ್ದಾರ ಮಂಜುನಾಥ ಮುನೋಳಿ ಹೇಳಿದರು.

ಪಟ್ಟಣದ ಪುರಸಭೆಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಆರೋಗ್ಯ ಇಲಾಖೆ, ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕೇಂದ್ರ, ತಾಲೂಕಾಡಳಿತ, ತಾಲೂಕ ಆರೋಗ್ಯಾಧಿಕಾರಿ ಕಾರ್ಯಾಲಯ, ತಾಲೂಕ ಆಸ್ಪತ್ರೆ, ಪುರಸಭೆ ಶಿಗ್ಗಾವಿ ಇವರ ಸಹಯೋಗದಲ್ಲಿ ನಡೆದ ವಿಶ್ವ ಕ್ಷಯರೋಗ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ರೋಗ ಬಂದ ನಂತರ ಚಿಕಿತ್ಸೆ ಪಡೆಯುವ ಮುನ್ನ ರೋಗ ಬರದಂತೆ ಮುನ್ನೆಚ್ಚರಿಕೆ ವಹಿಸುವುದು ಬಹುಮುಖ್ಯ ಅಲ್ಲದೇ ಆರೋಗ್ಯದಾಯಕ ವಾತಾವರಣ ನಿರ್ಮಾಣ ಮಾಡುವ ಉದ್ದೇಶ ನಮ್ಮದಾಗಿದೆ ಎಂದರು.

ತಾಲೂಕ ಆಸ್ಪತ್ರೆ ಆಡಳಿತ ವೈದ್ಯಾದಿಕಾರಿ ಡಾ. ಹನುಮಂತಪ್ಪ ಪಿಹೆಚ್ ಮಾತನಾಡಿ ನಾವು ಈಗಾಗಲೇ ಅನೇಕ ಪೋಲಿಯೋದಂತಹ ಕಾಯಿಲೆಗಳನ್ನು ನಿರ್ಮೂಲನೆ ಮಾಡಿದ್ದು ಅದಕ್ಕೆ ಜನರ ಸಹಕಾರ ಮತ್ತು ಭಾಗವಹಿಸುವಿಕೆ ಅವಶ್ಯವಾಗಿದೆ ಅಲ್ಲದೇ ಎರಡು ವಾರಕ್ಕಿಂತ ಹೆಚ್ಚು, ಕೆಮ್ಮು, ಕಫ, ಕಫದಲ್ಲಿ ರಕ್ತ ಬೀಳುವುದು, ಸಾಯಂಕಾಲ ವೇಳೆ ಜ್ವರ, ರಾತ್ರಿ ವೇಳೆ ಬೆವರು, ದಿನದಿಂದ ದಿನಕ್ಕೆ ತೂಕ ಕಡಿಮೆ, ದೇಹದ ಬೇರೆ ಬೇರೆ ಅಂಗಾಂಗಗಳಲ್ಲಿ ಗಡ್ಡೆಗಳಾದರೆ ಹತ್ತಿರದ ಸರಕಾರಿ ಆಸ್ಪತ್ರೆಗೆ ಬಂದು ಕಫ ಪರೀಕ್ಷೆ ಮಾಡಿಸಿ ಸೂಕ್ತ ಚಿಕಿತ್ಸೆ ಪಡೆಯ ಬೇಕು ಎಂದರು.

ತಾಲೂಕ ಆರೋಗ್ಯಾಧಿಕಾರಿ ಡಾ. ಹನುಮಂತಪ್ಪ ಕುಡಚಿ, ಪುರಸಭೆ ಅಧ್ಯಕ್ಷ ಶ್ರೀಕಾಂತ ಬುಳ್ಳಕ್ಕನವರ, ಉಪಾಧ್ಯಕ್ಷ ಮಂಜುನಾಥ ಬ್ಯಾಹಟ್ಟಿ, ಮುಖ್ಯಾದಿಕಾರಿ ಮಲ್ಲಯ್ಯ ಹಿರೇಮಠ, ಭಾ.ಜ.ಪ ಅಧ್ಯಕ್ಷ ಶಿವಾನಂದ ಮ್ಯಾಗೇರಿ, ಪುರಸಭೆ ಸದಸ್ಯ ಗೌಸಖಾನ ಮುನಶಿ ಸೇರಿದಂತೆ ಎಲ್ಲ ಸದಸ್ಯರು ಹಾಗೂ ಆರೋಗ್ಯ ಇಲಾಖೆಯ ಶ್ರೀಕಾಂತ ಸರ್ಜಾಪೂರ, ಮಲ್ಲಿಕಾರ್ಜುನಸ್ವಾಮಿ, ಸರೋಜಾ ಹರಿಜನ, ಕಟ್ಟಿಮನಿ ಇತರರು ಇದ್ದರು.

ಸುದ್ದಿ ಓದಿ