ವಿಶ್ವ ಹಿರಿಯ ನಾಗರಿಕ ದಿನಾಚರಣೆ
ಯರಗಟ್ಟಿ 03: ಹಿರಿಯ ನಾಗರಿಕರನ್ನು ಗೌರವಿಸುವದು ರಕ್ಷಿಸುವದು, ಪ್ರೀತಿ ವಾತ್ಸಲ್ಯ ತೋರುವ ಮೂಲಕ ಅವರ ಆಶೀರ್ವಾದ ಪಡೆಯುವದು ನಮ್ಮ ನಾಡಿನ ಸಂಸ್ಕೃತಿಯಾಗಿದೆ ಎಂದು ಗ್ರಾಪಂ ಅಧ್ಯಕ್ಷ ಕವಿತಾ ಬಾಲರೆಡ್ಡಿ ಹೇಳಿದರು.ಸಮೀಪದ ಜೀವಾಪೂರ ಗ್ರಾಮದಲ್ಲಿ ಸೋಮವಾರ ಚುನಾವಣಾ ಆಯೋಗ ಹಾಗೂ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ತಲ್ಲೂರ ಗ್ರಾಮ ಪಂಚಾಯತದಿಂದ ಮಹತ್ಮಾ ಗಾಂಧಿ ಜಯಂತಿ ಹಾಗೂ ವಿಶ್ವ ಹಿರಿಯ ನಾಗರಿಕ ದಿನಾಚರಣೆ ಅಂಗವಾಗಿ ಶತಾಯುಷಿ ರುಕ್ಕಮ್ಮ ಅರಳಿಕಟ್ಟಿ ಅವರಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಿ ಮಾತನಾಡಿದ ಅವರು, ಹಿರಿಯರು ಒಂದು ರೀತಿ ಆಲದಮರ ಇದ್ದಂತೆ ಅವರು ಎಲ್ಲರಿಗೂ ನೆರಳಾಗುತ್ತಾರೆ. ನಮಗೆ ಎಷ್ಟೇ ಕಷ್ಟ ಬಂದರು ತಮ್ಮ ಮಕ್ಕಳು ಮತ್ತು ಮೊಮ್ಮಕ್ಕಳು ಚನ್ನಾಗಿರಲಿ ಎಂದು ಆಶಿಸುತ್ತಾರೆ ಎಂದರು.
ಸವದತ್ತಿ ಬಿಜೆಪಿ ಮುಖಂಡ ವಿರುಪಾಕ್ಷ ಮಾಮನಿ ಮಾತನಾಡಿ, ಹಿರಿಯ ನಾಗರಿಕರ ಬದುಕು ಸದಾ ಸಂತೋಷವಾಗಿರಬೇಕು ಭಗವಂತ ಇನ್ನೂ ಹೇಚ್ಚಿನ ಆಯುಷ್ಯವನ್ನು ಕರುಣಿಸಲಿ ಎಂದು ಹಾರೈಸಿದರು. ಇದೇ ಸಂದರ್ಭದಲ್ಲಿ ಗ್ರಾಮಸ್ಥರ ಒತ್ತಾಯದ ಮೇರೆಗೆ ಶತಾಯುಷಿ ಅಜ್ಜಿ ರುಕ್ಕಮ್ಮ ಸೊಗಲೆಂಬ ಊರಿಲ್ಲ ಸಮುದ್ರಕ್ಕೆ ನೆಲೆಯಿಲ್ಲ ಜಾತ ಮುತ್ತಿಗೆ ಬೆಲೆಯಿಲ್ಲ ಚಂದ್ರಾಮನಂತ ಮಗನಿಲ್ಲ ಎಂಬ ಹಾಡು ಹಾಡಿ ಜನರನ್ನು ರಂಜಿಸಿದಳು.ಗ್ರಾಪಂ ಪಿಡಿಒ ಎ.ಬಿ.ಬಂಗಾರಿ, ಕಾರ್ಯದರ್ಶಿ ಸತೀಶ ಬಡಿಗೇರ, ಸದಸ್ಯ ಬಸವರಾಜ ಕಡಬಿ, ಕಸ್ತೂರಿ ನರಿ, ಸಚೀನ ಹೋಳಿ, ಪ್ರಕಾಶ ನರಿ, ಮುದಕಪ್ಪ ಯರಡ್ಡಿ, ಗೌಡಪ್ಪ ನಾಯ್ಕರ, ನೀಲಕಂಠ ಶಿವಪೂಜಿ, ಸುರೇಶ ಅರಳಿಕಟ್ಟಿ, ಜಗದೀಶ ಶಿಂತ್ರಿ, ರಾಜಶೇಖರ ಅಣ್ಣಿಗೇರಿ, ವಿಠ್ಠಲ ಬಡಿಗೇರ, ಸುಭಾನಿ ಕುದರಿ, ಲಕ್ಷ??ಣ ಅರಳಿಕಟ್ಟಿ, ಬಿ.ಎಫ್.ಯರಡ್ಡಿ, ಬಸವರಾಜ ನರಿ, ಕಲ್ಮೇಶ ಬಾಲರೆಡ್ಡಿ, ಬಸವರಾಜ ಉಗರಗೋಳ, ಮಹೇಶ ಇಟ್ನಾಳ ಸೇರಿದಂತೆ ಮುಖಂಡರು ಗ್ರಾಮಸ್ಥರು ಇದ್ದರು.