ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನಾಚರಣೆ
ಶಿಗ್ಗಾವಿ 04: ಎಲೆಮರೆ ಕಾಯಿಯಂತಹ ಪತ್ರಿಕಾ ವಿತರಕರ ತೆರೆ ಮರೆಯ ಕಾರ್ಯವನ್ನು ಸರಕಾರ ಗುರುತಿಸಬೇಕಾಗಿದೆ ಎಂದು ಸಾಮಾಜಿಕ ಹೋರಾಟಗಾರ ಮಂಜುನಾಥ ಮಣ್ಣಣ್ಣವರ ಹೇಳಿದರು.ಸೋಮವಾರ ಪಟ್ಟಣದ ಕನರ್ಾಟಕ ಪತ್ರಕರ್ತರ ಸಂಘದ ಕಾಯರ್ಾಲಯದಲ್ಲಿ ಕನರ್ಾಟಕ ಪತ್ರಕರ್ತರ ಸಂಘ ಶಿಗ್ಗಾವಿ, ಕಾರ್ಯನಿರತ ಪತ್ರಕರ್ತರ ಸಂಘ ಶಿಗ್ಗಾವಿ ಮತ್ತು ಪತ್ರಿಕಾ ವಿತರಕರ ಸಂಘದ ಆಶ್ರಯದಲ್ಲಿ ನಡೆದ ಸರಳ ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಮಾತನಾಡಿದರು.
ಸಮಾಜದ ಬೆಳವಣಿಗೆಗಳನ್ನು ಜನರ ಮಧ್ಯ ತರುವ ಕಾರ್ಯವನ್ನು ವಿತರಕರು ಮಾಡುತ್ತಾರೆ ಅವರಿಗೆ ಗೌರವ ಸಲ್ಲಿಸಬೇಕಾಗಿತ್ತು ಆದರೆ ಈ ಕೋವಿಡ್ ಮಾರ್ಗಸೂಚಿಯಲ್ಲಿ ಜನ ಸೇರಬಾರದೆಂಬುದೂ ಸಹಿತ ತಿಳಿದಿದ್ದು ವಿತರಕರೂ ಸಹಿತ ಕಾಮರ್ಿಕರ ಅಡಿಯಲ್ಲಿ ಬರುವುದರಿಂದ ಅವರಿಗೆ ಕಾಮರ್ಿಕರ ಕಾಡರ್್ಗಳನ್ನು ಮಾಡಲು ತಗಲುವ ವೆಚ್ಚವನ್ನು ನಾನು ಮತ್ತು ನೂರಹ್ಮದ್ ಮಾಳಗಿ ಅವರು ಕೊಟ್ಟು ಅವರಿಗೆ ಗೌರವ ಸೂಚಿಸುವ ಕಾರ್ಯ ಮಾಡುತ್ತೇವೆ ಅವರಿಗೆ ಮುಂದಿನ ದಿನಗಳಲ್ಲಿ ಕಾಮರ್ಿಕರಿಗೆ ಬರುವ ಎಲ್ಲ ಸೌಲಭ್ಯಗಳನ್ನು ಪಡೆಯುವಂತಾಗಲಿ ಎಂದು ಆಶಿಸಿದರು.
ಕನರ್ಾಟಕ ಪತ್ರಕರ್ತರ ಸಂಘದ ಶಿಗ್ಗಾವಿ ಅಧ್ಯಕ್ಷ ವಿಶ್ವನಾಥ ಬಂಡಿವಡ್ಡರ ಅಧ್ಯಕ್ಷತೆ ವಹಿಸಿ ಮಾತನಾಡಿ ಕೊರೋನಾ ಸಂದರ್ಭದಲ್ಲಿ ಪತ್ರಿಕಾ ವಿತರಕರ ಕಾರ್ಯ ಶ್ಲಾಘನೀಯವಾಗಿದ್ದು ಮಳೆ, ಚಳಿ ಲೆಕ್ಕಿಸದೇ ನಿತ್ಯ ಬೆಳಿಗ್ಗೆ ಪತ್ರಿಕೆಗಳನ್ನು ತಲುಪಿಸುವ ಕಾರ್ಯ ಮಾಡುತ್ತಾರೆ ಇದೀಗ ಜಗತ್ತನ್ನೇ ತಲ್ಲಣಗೊಳಿಸುತ್ತಿರುವ ಕೊರೋನಾ ಸಂದರ್ಭದಲ್ಲಿಯೂ ತಮ್ಮ ಜೀವದ ಹಂಗು ತೊರೆದು ಸುದ್ದಿ ಸಮಾಚಾರಗಳನ್ನು ಹೊತ್ತ ಪತ್ರಿಕೆಗಳನ್ನು ಮನೆ ಮನೆ ಮುಟ್ಟಿಸುವ ಮೂಲಕ ಕೊರೋನಾ ವಾರಿಯರ್ಸ್ ಗಳಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.ಹಿರಿಯ ವರದಿಗಾರ ಬಿ ಎಸ್ ಹಿರೇಮಠ, ಎಂವಿ ಗಾಡದ, ಬಸವರಾಜ ಹೊನ್ನಣ್ಣವರ, ಸದಾಶಿವಸ್ವಾಮಿ ಹಿರೇಮಠ ಮಾತನಾಡಿದರು.ಇದಕ್ಕೂ ಮೊದಲು ಪಟ್ಟಣದ ಕನರ್ಾಟಕ ಪತ್ರಕರ್ತರ ಸಂಘದ ಕಾಯರ್ಾಲಯದ ಎದುರು ಸಸಿ ನೆಟ್ಟು ಅರ್ಥಪೂರ್ಣವಾಗಿ ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.ಮುಖಂಡ ನೂರಹ್ಮದ್ ಮಾಳಗಿ, ವರದಿಗಾರ ರವಿ ಉಡುಪಿ, ಬಸವರಾಜ ಹಡಪದ, ಸುರೇಶ ಯಲಿಗಾರ, ಸಿದ್ದರಾಮಗೌಡ ಮೆಳ್ಳೇಗಟ್ಟಿ ಮತ್ತು ವಿತರಕರಾದ ಸತೀಶ ಹೂಗಾರ ಸೇರಿದಂತೆ ಇತರ ವಿತರಕರು ಇದ್ದರು.
ಪಟ್ಟಣದ ಕನರ್ಾಟಕ ಪತ್ರಕರ್ತರ ಸಂಘದ ಕಾಯರ್ಾಲಯದ ಎದುರು ಸಸಿ ನೆಟ್ಟು ಅರ್ಥಪೂರ್ಣವಾಗಿ ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.