ಆಜಾದಿಕಾ ಅಮೃತ ಮಹೋತ್ಸವದ ನಿಮಿತ್ಯ ವಿಶ್ವ ಜನಸಂಖ್ಯಾ ದಿನಾಚರಣೆ
ಯರಗಟ್ಟಿ 29: ಪಟ್ಟಣದ ಸಮುದಾಯ ಆರೊಗ್ಯ ಕೇಂದ್ರದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ- ಕುರಿತು ಕಾರ್ಯಕ್ರಮ ಏರಿ್ಡಸಲಾಗಿತ್ತು.
ಯರಗಟ್ಟಿಯ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಯಾದ ಐ. ಆಯ್. ಗಂಜಿ ಕಾರ್ಯಕ್ರದ ಕುರಿತು ಮಾತನಾಡಿ ವಿಶ್ವ ಜನಸಂಖ್ಯಾ ದಿನಾಚರಣೆ ಅಂಗವಾಗಿ ಈ ವರ್ಷದ ಘೋಷಣೆಯ ಪ್ರಕಾರ “ಆಜಾದಿಕಾ ಅಮೃತ ಮಹೋತ್ಸವದ ಅಂಗವಾಗಿ ಕುಟುಂಬ ಯೋಜನೆಯನ್ನು ಅಳವಡಿಸಿಕೊಂಡು ಸಂತೋಷ ಮತ್ತು ಸಮೃದ್ದಿಯ ಜೀವನವನ್ನು ಆಯ್ಕೆ ಮಾಡಿಕೊಳ್ಳುತ್ತೆವೆಂದು ಪ್ರತಿಜ್ಞೆಯನ್ನು ಮಾಡೋಣ : ಎಂಬುದಾಗಿದೆ 1987 ಕ್ಕೆ ಜಗತ್ತಿನ ಜನಸಂಖ್ಯೆ 500 ಕೋಟಿ ದಾಟಿದ್ದರಿಂದ ಮತ್ತು ಜನಸಂಖ್ಯಾ ನಾಗಾಲೋಟದಿಂದ ಓಡುತ್ತಿರುವದರಿಂದ ಇದರ ಅರಿವು ಆಗಲೆಂದು ಪ್ರತಿ ವರ್ಷ ಜುಲೈ 11 ರಂದು ವಿಶ್ವ ಜನಸಂಖ್ಯಾ ದಿನಾಚರಣೆ ಆಚರಿಸಲಾಗುತ್ತಿದೆ, ಕ್ಷಾಮ ಡಾಮರಗಳ ಕೊರತೆ ನಿಗಿಸಲು ಸಾರಿಗೆ ಸೌಲಭ್ಯವಿದೆ.
ವಿಜ್ಞಾನದಲ್ಲಿ ಪ್ರಗತಿಯಾಗಿದ್ದರಿಂದ ಜೀವನಮಟ್ಟ ಸುಧಾರಿಸಿದೆ, ಗರ್ಭದಿಂದ ಗೋರಿಯವರೆಗೆ ಎಂಬಂತೆ ಆರೋಗ್ಯ ಇಲಾಖೆಯ ಸೇವೆಯಾಗಿದ್ದು, ಆರೋಗ್ಯ ಸೇವೆಗಳು ಉನ್ನತ ಮಟ್ಟದಲ್ಲಿವೆ, ಇವೆಲ್ಲ ಕಾರಣಗಳಿಂದ ಜನಸಂಖ್ಯೆ ಹೆಚ್ಚಾಗಿದೆ, ಜಗತ್ತಿನ ಜನಸಂಖ್ಯೆ 700 ಕೋಟಿಗಿಂತ ಹೆಚ್ಚಾಗಿದೆ, ಭಾರತದ ಜನಸಂಖ್ಯೆ 130 ಕೋಟಿ, ಕರ್ಣಾಟಕದ ಜನಸಂಖ್ಯೆ 6.ಕೋಟಿ 5 ಲಕ್ಷವಾಗಿದೆ, ಹೀಗೆ ಜನಸಂಖ್ಯೆ ನಾಗಾಲೋಟದಿಂದ ಓಡುತ್ತಿದೆ.
ಇದನ್ನು ನಿಯಂತ್ರಣ ಮಾಡದಿದ್ದಲ್ಲಿ ಆಹಾರ ,ವಸತಿ, ನೀರು, ಬಟ್ಟೆ, ಅರಣ್ಯ ನಾಶ ಪರಿಸರ ನೈರ್ಮಲ್ಯ ಮುಂತಾದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗೂ ಜನಸಂಖ್ಯೆನಿಯಂತ್ರಣದಲ್ಲಿಡಲು ಚಿಕ್ಕ ಕುಟುಂಬ ಹೊಂದುವದು, ಮತ್ತು ಆರೋಗ್ಯ ಇಲಾಖೆಯಿಂದ ಲಭ್ಯವಿರುವ ಕುಟುಂಬ ಯೋಜನೆಗಳನ್ನು ತಿಳಿದುಕೊಳ್ಳುವಂತೆ ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ ಮುಖ್ಯ ವೈಧ್ಯಾಧಿಕಾರಿಯಾದ ಡಾ ಬಿ. ಎಸ್. ಬಳ್ಳೂರ ಮಾತನಾಡಿ ಸ್ತ್ರೀಯರು-ಪುರುಷರು ಬಾಲ್ಯ ವಿವಾಹ ನಿಷೇಧಿಸುವದು, ಅಂತರದ ಹೆರಿಗೆಯ ಸಲುವಾಗಿ ನುಂಗುವ ಮಾತ್ರೆ, ಮಾಲಾ ಎನ್, ಛಾಯಾ, ಅಂತರಾ ಇಂಜೆಕ್ಷನ್, ಹೊಸದಾಗಿ ಬಂದಿರುವ 380 ಎ ಕಾಪರ್ ಟಿ ಬಳಸುವದು, ಶಾಶ್ವತ ವಿಧಾನಗಳಾದ ಲೆಪ್ರೊಸ್ಕೊಪಿಕ ಟುಬೆಕ್ಟಮಿ ಬಳಸುವದು, ಪುರುಷರು ನಿರೋಧ ಬಳಸುವದು, ಶಾಶ್ವತ ವಿಧಾನವಾದ ಎನ್. ಎಸ್. ವಿ. ಮಾಡಿಸಿಕೊಳ್ಳುವದಾಗಿದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಎಸ್. ಎಂ. ಹಾರೂಗೊಪ್ಪ, ಎಸ್. ಬಿ. ಬೆಂಡಿಗೇರಿ, ಮಂಜುಳಾ ಈರಗಾರ, ಆಸಮಾ ಮುಲ್ಲಾ ಆಶಾಕಾರ್ಯಕರ್ತೆಯರು, ತಾಯಂದಿರು ಸಾರ್ವಜನಿಕರು ಹಾಜರಿದ್ದರು. ಮಂಜುಳಾ ಈರಗಾರ ಕಾರ್ಯಕ್ರಮದ ನಿರೂಪಣೆ ಮಾಡಿ ಎನ್ ಎಂ ಹಾರೂಗೊಪ್ಪ ಸ್ವಾಗತಿಸಿ ರೇಖಾ ಗಿರಿಯವ್ವಗೋಳ ವಂದಿಸಿದರು,