ಬಾಲಾಜಿ ಪ್ರೌಢ ಶಾಲೆಯಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ
ಯರಗಟ್ಟಿ 15: ಪಟ್ಟಣದ ಬಾಲಾಜಿ ಪ್ರೌಢ ಶಾಲೆಯಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಆಚರಿಸಲಾಯಿತು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಆಯ್. ಆರ್. ಗಂಜಿ ಜಗತ್ತಿನ ಜನಸಂಖ್ಯೆ 1987 ಜುಲೈ 11ರಂದು 500 ಕೋಟಿ ದಾಟಿದ್ದರಿಂದ ಪ್ರತಿ ವರ್ಷ ಜುಲೈ 11ರಂದು ಜನಸಂಖ್ಯಾ ಹೆಚ್ಚಳದಿಂದಾಗುವ ಸಮಸ್ಯೆಗಳು ಮತ್ತು ಪರಿಹಾರದ ಬಗ್ಗೆ ಅರಿವು ಮೂಡಿಸಲು "ಅಭಿವೃದ್ಧಿ ಹೊಂದಿದ ಭಾರತ ಹೊಸ ಗುರುತಿಗಾಗಿ ಕುಟುಂಬ ಯೋಜನೆ ಅಳವಡಿಕೆ ಪ್ರತಿ ದಂಪತಿಗಳ ಹೆಮ್ಮೆ" ಎಂಬ ಘೋಷಣೆ ಯೊಂದಿಗೆ ಆಚರಿಸಲಾಗುತ್ತಿದೆ.
ಜನಸಂಖ್ಯಾ ಹೆಚ್ಚಳದಿಂದ ನೀರು ಆಹಾರ ವಸತಿ ಸಮಸ್ಯೆ ವಾಯುಮಾಲಿನ್ಯ ಜಲಮಾಲಿನ್ಯ ಶಬ್ದ ಮಾಲಿನ್ಯ ಸಮಸ್ಯೆಗಳಾಗುತ್ತಲಿವೆ. ಇದನ್ನು ನಿಯಂತ್ರಣ ಮಾಡಲು ಚಿಕ್ಕ ಕುಟುಂಬ ಹೊಂದಲು ಕುಟುಂಬ ಯೋಜನೆ ಬಳಸುವುದು ಇದರ ವ್ಯಾಪಕ ಪ್ರಚಾರ. ಬಾಲ್ಯ ವಿವಾಹ ನಿಷೇಧ,ಹದಿಹರೆಯದವರ ಆರೋಗ್ಯ ದ ತಿಳುವಳಿಕೆ ಅವಶ್ಯಕತೆ ಇದೆ ಎಂದು ಹೇಳಿದರು. ಕಾರ್ಯಕ್ರಮ ಅದ್ಯಕ್ಷತೆ ವಹಿಸಿದ ಪ್ರಧಾನ ಗುರುಗಳಾದ ಆನಂದ ವಜ್ರಮಟ್ಟಿ ಮಾತನಾಡಿ ಸದರಿ ವಿಷಯವನ್ನು ಮನೆ ಮನೆಗೆ ತಲುಪಿಸಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಸದರಿ ಕಾರ್ಯಕ್ರಮದಲ್ಲಿ ಎಂ. ಡಿ. ಸುತಗಟ್ಟಿ, ವಿ. ಎಂ. ರಡ್ಡಿ, ಎಸ್. ಆರ್. ಇಟ್ನಾಳ ವಿದ್ಯಾರ್ಥಿಗಳು ಹಾಜರಿದ್ದರು.