ವಿಶ್ವ ಜನಸಂಖ್ಯಾ ದಿನ; ಜನಜಾಗೃತಿ ಜಾಥಾ
ಹೊಸಪೇಟೆ ಜು.21: ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಡಿ ವಿಶ್ವ ಜನಸಂಖ್ಯಾ ದಿನಾಚರಣೆ ಅಂಗವಾಗಿ ವಿಶೇಷ ಜನಜಾಗೃತಿ ಜಾಥಾವನ್ನು ಶುಕ್ರವಾರ ಕೈಗೊಳ್ಳಲಾಯಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಆಯೋಜಿಸಲಾದ ವಿಶ್ವ ಜನಸಂಖ್ಯಾ ದಿನಾಚರಣೆ ಅಭಿಯಾನದ ಭಾಗವಾಗಿ ಜಾಗೃತಿ ಜಾಥಾಗೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಸವರಾಜ್ ಚಾಲನೆ ನೀಡಿ ಅಭಿಯಾನದ ಭಾಗವಾಗಿ ಈಗಾಗಲೇ ಸಮುದಾಯ ಜಾಗೃತಿಕರಣ ಪಾಕ್ಷಿಕ ಪೂರ್ಣಗೊಳಿಸಲಾಗಿದೆ. ಜು.24 ರವರೆಗೆ ಜನಸಂಖ್ಯೆ ಸ್ಥಿರೀಕರಣ ಪಾಕ್ಷಿಕ ಮುಂದುವರೆಯಲಿದೆ ಎಂದರು. ಜನಸಂಖ್ಯೆ ನಿಯಂತ್ರಣದ ಜೊತೆಗೆ ಲಿಂಗಾನುಪಾತ ವ್ಯತ್ಯಾಸವಾಗದಂತೆ ಜಾಗೃತವಹಿಸಲು ಜಾಗೃತಿ ಅವಶ್ಯವಾಗಿದೆ ಎಂದರು.
ನಗರದ ಪ್ರಮುಖ ಸ್ಥಳಗಳಲ್ಲಿ ಜನಸಂಖ್ಯೆ ನಿಯಂತ್ರಣ ಕುರಿತು ಜಾಥಾ ಮೂಲಕ ಜಾಗೃತಿ ಮೂಡಿಸಲಾಯಿತು. ಈ ಸಂದರ್ಭದಲ್ಲಿ ವೈದ್ಯಾಧಿಕಾರಿ ಡಾ.ಭರಮನಗೌಡ, ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ.ದೊಡ್ಡಮನಿ, ಅಫೀಜ್ ಖಾನ್ ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಮತ್ತು ಪ್ಯಾರಾಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.