ಗಂಗಾವತಿ

ವಿಶ್ವ ಮಾನಸಿಕ ಆರೋಗ್ಯ ದಿನ ಕಾರ್ಯಕ್ರಮ

ವಿಶ್ವ ಮಾನಸಿಕ ಆರೋಗ್ಯ ದಿನ ಕಾರ್ಯಕ್ರಮ

ಗಂಗಾವತಿ.19ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಇಲಾಖೆ ಹಾಗೂ ರಾಷ್ಟ್ರೀಯ ಕ್ಷಯ ನಿರ್ಮೂಲನ ಕಾರ್ಯಕ್ರಮ ಹಾಗೂ ಉಪ ವಿಭಾಗ ಆಸ್ಪತ್ರೆ  ಕ್ಷಯ ರೋಗ ವಿಭಾಗ ಹಾಗೂ ಕರ್ನಾಟಕ ಆರೋಗ್ಯ ಸಂವರ್ಧನಾ ಪ್ರತಿಷ್ಠಾನ ಸಂಸ್ಥೆಯ ಸಹಯೋಗದೊಂದಿಗೆ "ಇಂದು ವಿಶ್ವ ಮಾನಸಿಕ ಆರೋಗ್ಯ ದಿನ" ಕಾರ್ಯಕ್ರಮವನ್ನು ಮಾಡಲಾಯಿತು.  

ಈ ಕಾರ್ಯಕ್ರಮದಲ್ಲಿ ಕೆ ಎಚ್ ಪಿ ಟಿ ಸಮುದಾಯ  ಸಂಯೋಜಕ ಹನುಮಂತಪ್ಪ ಮಾತನಾಡಿ ಮಾನಸಿಕ ಖಾಯಿಲೆಗಳ ಕುರಿತಾಗಿ ಶರೀರದ ವಿವಿಧ ರೀತಿಯ ಕಾಯಿಲೆಗಳು ಇರುವಂತೆ, ಮಾನಸಿಕ ಖಾಯಿಲೆಗಳಲ್ಲೂ ವಿವಿಧ ರೀತಿಯ ಬಗೆಗಳಿವೆ. ಅದರಲ್ಲಿ ಚಿತ್ತ ಚಂಚಲತೆ ಹಾಗೂ ಚಿತ್ತ ವಿಕಲತೆಯಿಂದ ಖಿನ್ನತೆಗೆ ಒಳಗಾಗುತ್ತಾನೆ. ಮತ್ತು ಮನಸ್ಸಿನ ಖಾಯಿಲೆಗಳನ್ನು ಮರೆಯುವುದಕ್ಕೆ ಮಧ್ಯವ್ಯಸನಿ ಯಾಗುತ್ತಾನೆ. ಬುದ್ಧಿಮಾಂದ್ಯತೆಯಾಗುತ್ತಾನೆ, ಮಕ್ಕಳಲ್ಲಿ ಕಂಡುಬರುವ ನಡವಳಿಕೆ ಹಾಗೂ ಮನಸ್ಸಿನ ದೋಷಗಳು, ಮನೋ ದೈಹಿಕ ಖಾಯಿಲೆಗಳು, ವ್ಯಕ್ತಿ ದೋಷಗಳು, ಮೆದುಳಿನ ಅಂದದೋಷದ ಖಾಯಿಲೆಗಳು ಹೀಗೆ ಹಲವಾರು ರೀತಿಯಲ್ಲಿ ಮನಸ್ಸಿಗೆ ಖಾಯಿಲೆಗಳು ಬರುತ್ತವೆ. ಆದರೆ ಮಾನಸಿಕ ಖಾಯಿಲೆಗೆ ಹಲವಾರು ರೀತಿಯ ಕಾರಣಗಳಿವೆ ಅವು ಕೌಟುಂಬಿಕ ಜೀವನ ಸಮಸ್ಯೆ, ಆರ್ಥಿಕ ಸಮಸ್ಯೆ, ಬಡತನ, ನಿರುದ್ಯೋಗ ಸಮಸ್ಯೆ, ಸಾಮಾಜಿಕ ಸಮಸ್ಯೆ ಹೀಗೆ ಹಲವಾರು ಸಮಸ್ಯೆಗಳಿಂದ ಖಿನ್ನತೆಗೆ ಒಳಗಾಗುತ್ತಾನೆ. ಮತ್ತು ಯಾವುದೇ ವ್ಯಕ್ತಿಗಳು ತಮಗಿರುವ ಸಮಸ್ಯೆಗಳಿಂದ ಹೊರ ಬರಬೇಕಾದರೆ, ಮನೆಯ ಸದಸ್ಯರಿಗೆ ಹಾಗೂ ಸ್ನೇಹಿತರಿಗೆ ತಮ್ಮ ಸಮಸ್ಯೆಗಳನ್ನು ತಿಳಿಸಬೇಕು. ಮತ್ತು ಆಸ್ಪತ್ರೆಗೆ ಭೇಟಿ ಮಾಡಿ ಆಪ್ತಸಮಾಲೋಚಕರಿಗೆ ಹಾಗೂ ಮನೋರೋಗ ತಜ್ಞರ ಅಥವಾ ಮಾನಸಿಕ ಆರೋಗ್ಯ ವೃತ್ತಿಪರರಿಂದ ಚಿಕಿತ್ಸೆ, ಮಾರ್ಗದರ್ಶನ ಪಡೆಯಲು ಸಹಾಯ ಪಡಬೇಕು. 

 ವೈದ್ಯರಿಗೆ ತಮ್ಮ ಮನಸಿನ ಸಮಸ್ಯೆಗಳನ್ನು ತಿಳಿಸುವುದು ಹಾಗೂ ಚಿಕಿತ್ಸೆಯನ್ನು ಪಡೆಯುವುದರ ಬಗ್ಗೆ ಮಾಹಿತಿ ಇರಬೇಕು. ಮತ್ತು ಯಾವುದೇ ವ್ಯಕ್ತಿಗಳು ತಮ್ಮ ಬದುಕಿನಲ್ಲಿ ಅತಿಯಾದ ಖಿನ್ನತೆಗಳು ಇದ್ದರೆ ಊಟ ಸೇರುವುದಿಲ್ಲ, ನಿದ್ರೆ ಬರೋದಿಲ್ಲ, ಅತಿಯಾದ ಚಿಂತೆ, ಅನಾರೋಗ್ಯ ಹಾಗೂ ಬುದ್ಧಿಮಾಂದ್ಯನಾಗಿ ಸಾಯುವಂತ ಪರಿಸ್ಥಿತಿಗಳು ಬರುತ್ತವೆ. ಹೀಗೆ ನಾನಾ ರೀತಿಯ ಸಮಸ್ಯೆಗಳು ಬರುತ್ತವೆ. ಮಾನಸಿಕ ಖಾಯಿಲೆಗಳಿಗೆ ಅಥವಾ ಖಿನ್ನತೆಗೆ ಒಳಗಾಗಿರುವ ವ್ಯಕ್ತಿಗಳನ್ನು ಗುರುತಿಸಬೇಕು. ಅವರಿಗೆ ಸಾಧ್ಯವಾದಷ್ಟು ಧೈರ್ಯ ನೀಡಬೇಕು, ನಂಬಿಕೆ, ವಿಶ್ವಾಸ ಮತ್ತು ಆರೋಗ್ಯದ ಬಗ್ಗೆ ತಿಳಿಸಬೇಕು ಎಂದು ತಿಳಿಸಿದರು. ಮತ್ತು ಈ ಕಾರ್ಯಕ್ರಮದಲ್ಲಿ ಹನುಮಂತಪ್ಪ, ಸೇವಾ ಪ್ರತಿನಿಧಿ ರಾಜೇಶ್ವರಿ, ಸ್ವಯಂಸೇವಕರಾದ ಸೈನಾಜ್, ಪ್ಯಾರಿ ಬೇಗಂ, ರೇಷ್ಮಾ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು. 


ಸುದ್ದಿ ಓದಿ