ಯರಗಟ್ಟಿ

ಎಚ್‌ಐವಿ ರೋಗವನ್ನು ದೂರವಿಡಬೇಕು ಹೊರತು ರೋಗಿಯನ್ನಲ್ಲ: ಐ.ಆರ್‌.ಗಂಜಿ

ಎಚ್‌ಐವಿ ರೋಗವನ್ನು ದೂರವಿಡಬೇಕು ಹೊರತು ರೋಗಿಯನ್ನಲ್ಲ: ಐ.ಆರ್‌.ಗಂಜಿ

ಯರಗಟ್ಟಿ 06: ಎಚ್‌ಐವಿ ಎಡ್ಸ್‌ ರೋಗಿಗಳನ್ನು ಸಮಾಜದಿಂದ ದೂರವಿಡುವ ವ್ಯವಸ್ಥೆ ಹೊಗಿ ಸಾಮಾನ್ಯರಂತೆ ಅವರಿಗೂ ಮೂಲ ಅವಶ್ಯಕತೆಗಳನ್ನು ಒದಗಿಸಿಕೊಡಬೇಕು. ರೋಗವನ್ನು ದೂರವಿಡಬೇಕು ಹೊರತು ರೋಗಿಯನ್ನಲ್ಲ ಎಂದು ಯರಗಟ್ಟಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಐ.ಆರ್‌.ಗಂಜಿ ಹೇಳಿದರು. 

ಸಮೀಪದ ತಲ್ಲೂರ ಗ್ರಾಮದ ಬಸವೇಶ್ವರ ಯುವಕ ಮಂಡಳ ಪ್ರೌಡ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಎಡ್ಸ ದಿನಾಚರಣೆಯ ಜಾಗೃತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನ ಉದ್ದೇಶಿಸಿ ಮಾತನಾಡಿದ ಅವರು, ಎಡ್ಸ್‌ ರೋಗವು ಮನುಷ್ಯನ ದೇಹದಲ್ಲಿನ ರೋಗ ನಿರೋಧಕ ಶಕ್ತಿ ಕುಗ್ಗುವಂತೆ ಮಾಡುವದರಿಂದ ಎಡ್ಸ ಬಂದ ವ್ಯಕ್ತಿಗೆ ವಿವಿಧ ಕಾಯಿಲೆಗಳು ಬರುತ್ತವೆ.ಎಡ್ಸ ರೋಗ ತಡೆಗಟ್ಟಲು ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಮಕ್ಕಳು ಎಡ್ಸ್‌ ರೋಗ ನಿಯಂತ್ರಣದ ಬಗ್ಗೆ ಸರಿಯಾಗಿ ಓದಿಕೊಂಡು ನಿಮ್ಮ ಕುಟುಂಬ ಹಾಗೂ ಗ್ರಾಮಸ್ಥರಿಗೆ ತಿಳಿಹೇಳಬೇಕು ಎಂದರು. ಆರೋಗ್ಯ ಅಧಿಕಾರಿ ಜಿ.ಪಿ.ಹೊಂಗಲ ಮಾತನಾಡಿ, ಯುವಜನತೆ ಎಚ್‌ಐವಿ ಹಾಗೂ ಎಡ್ಸ ರೋಗಕ್ಕೆ ಬಲಿಯಾಗುತ್ತಿದ್ದು, ಜಾಗೃತಿಯಿಂದ ಮಾತ್ರ ಈ ಮಾರಕ ಕಾಯಿಲೆಯನ್ನು ನಿಯಂತ್ರಿಸಬಹುದು ಎಂದರು.  

ಜಾಗೃತಿ ಸಮಿತಿ ಸದಸ್ಯ ಆರ್‌.ಬಿ.ಅಣ್ಣಿಗೇರಿ, ಶಿಕ್ಷಕ ಎಸ್‌.ಎಫ್‌.ಬಡಿಗೇರ,ಅರ್ಪಣಾ ಕಾಂಬಳೆ, ಆಶಾ ಕುದರಿ, ಜಿ.ಎ.ಕೊಟ್ರಶೆಟ್ಟಿ, ಎಸ್‌.ಎಮ್‌. ಸಾಲಿ, ಚನ್ನಮ್ಮ ತುಪ್ಪದ, ಎನ್‌.ಜಿ.ಕತ್ತಿ, ಎ.ಎಂ.ಅತ್ತಾರ, ಎಸ್‌.ಎಂ.ಜಮಾದಾರ ಸೇರಿದಂತೆ ಆಶಾ ಅಂಗನವಾಡಿ ಕಾರ್ಯಕರ್ತೆಯರು ಇದ್ದರು.  


ಸುದ್ದಿ ಓದಿ