ಬ್ಯಾಡ್ಗಿ

ವಿಶ್ವ ಏಡ್ಸ್‌ ದಿನಾಚರಣೆ: ಜನಜಾಗೃತಿ ಜಾಥಾ

ವಿಶ್ವ ಏಡ್ಸ್‌ ದಿನಾಚರಣೆ: ಜನಜಾಗೃತಿ ಜಾಥಾ

ಬ್ಯಾಡಿಗಿ 03:‘ವಿಶ್ವ ಏಡ್ಸ್‌ ದಿನಾಚರಣೆ’ ಅಂಗವಾಗಿ ಪಟ್ಟಣದ ಸ್ನೇಹ-ಸದನ ಸಮಗ್ರ ಸಮಾಜ ಕಾರ‌್ಯ ನಿರ್ವಹಣಾ ಕೇಂದ್ರ ಎಸ್‌. ಎಸ್‌.ಪಿ.ಎನ್‌. ಪ್ರೌಢಶಾಲೆ, ಎಸ್‌ಜೆಜೆಎಂ ಪದವಿ ಪೂರ್ವ ಕಾಲೇಜು ಎನ್‌ಸಿಸಿ (ಸೀನಿಯರ್) ವಿಭಾಗ ಮತ್ತು ತಾಲೂಕು ಆರೋಗ್ಯ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಜನಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.  

 ಎಸ್‌.ಎಸ್‌.ಪಿ.ಎನ್‌. ಪ್ರೌಢಶಾಲೆಯಿಂದ ಪ್ರಾರಂಭವಾದ ಜಾಥಾ ದುಷ್ಟರಿಣಾಮಗಳ ಕುರಿತು ಬಳಿ ಘೋಷಣೆಗಳೊಂದಿಗೆ ಪಟ್ಟಣದ ಮುಖ್ಯರಸ್ತೆಯಲ್ಲಿ ಸಾಗಿ ಬಸ್ ನಿಲ್ದಾಣದ ಬಳಿ ಸಭೆಯಾಗಿ ಮಾರ​‍್ಪಟಟಿತು.  

ಶಿಕ್ಷೆ ಬದಲು ಅಪ್ಪಿಕೊಳ್ಳೋಣ: ಜಾಥಾ ಕಾರ‌್ಯಕ್ರಮ ಉದ್ಘಾಟಿಸಿ ಆರೋಗ್ಯ ಇಲಾಖೆ ಮಾಹಿತಿ ಶಿಕ್ಷಣಾಧಿಕಾರಿ ಮಮತಾ ಮಾತನಾಡಿ, ಅಸುರಕ್ಷಿತ ಲೈಂಗಿಕಕ್ರಿಯೆ ಇದಕ್ಕೆ ಮೂಲ ಕಾರಣವಾಗಿದ್ದು ಹದಿ ಹರೆಯ ಯುವತಿಯರಲ್ಲಿ ಇದು ಹೆಚ್ಚಾಗಿ ಕಾಣುತ್ತಿದೆ, ಪ್ರಸಕ್ತ ಸನ್ನಿವೇಶದಲ್ಲಿ ಶೋಷಿತರಿಗೆ ತಿರಸ್ಕೃತರಿಗೆ ಆಶ್ರಯ ನೀಡಬೇಕಾಗಿದೆ, ತಿಳಿದೋ ತಿಳಿಯದೆಯೋ ಮಾಡಿದ ತಪ್ಪುಗಳಿಗೆ ಶಿಕ್ಷೆ ನೀಡುವುದಕ್ಕಿಂತ ಅವರನ್ನು ಅಪ್ಪಿಕೊಳ್ಳುವಂತಹ ಕೆಲಸವಾಗಬೇಕಾಗಿದೆ ಎಂದರು. 

ಇಂದಿನಿಂದಲೇ ಜಾಗೃತಿ ನಡೆಸಿ: ಆರೋಗ್ಯ ಇಲಾಖೆ ಏಡ್ಸನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ, ಇದರಲ್ಲಿ ಸಾರ್ವಜನಿಕರ ಪಾತ್ರ ತುಂಬಾ ಮುಖ್ಯವಾಗಿದೆ ಏಡ್ಸ್‌ ಮುಕ್ತ ಸಮಾಜವನ್ನು ಎಲ್ಲರೂ ಸೇರಿ ನಿರ್ಮಿಸೋಣ ಅದರಲ್ಲೂ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು 

ಬದುಕನ್ನು ಕಟ್ಟಿಕೊಳ್ಳಲಿ:ಸಂಸ್ಥೆಯ ನಿರ್ದೇಶಕಿ ಸಿಸ್ಟರ್ ಗ್ಲೋರಿಯಾ ತೆರೆಸಿಟಾ ಮಾತನಾಡಿ, ಏಡ್ಸ್‌ ಸೋಂಕಿತ ಮಹಿಳೆಯರು ಬದುಕನ್ನು ಕಟ್ಟಿಕೊಳ್ಳಲು ನಾವೆಲ್ಲರೂ ಕೈಜೋಡಿಸಬೇಕಾಗಿದೆ, ಈ ನಿಟ್ಟಿನಲ್ಲಿ ನಮ್ಮ ಸ್ನೇಹ ಸದನ ಸಮಗ್ರ ಸಮಾಜ ಕಾರ್ಯ ನಿರ್ವಹಣಾ ಕೇಂದ್ರ ಸೋಂಕಿತರ ಜೀವನಕ್ಕೆ ಭರವಸೆ ನೀಡುತ್ತಿದೆ, ನಿರಾಶ್ರಿತರ ಶಿಬಿರದಲ್ಲಿ ಅವರು ಅತ್ಯುತ್ತಮವಾಗಿ ಜೀವನ ನಡೆಸುತ್ತಿರುವುದು ಸಂತಸದ ಸಂಗತಿ ಎಂದರು. ಈ ವೇಳೆ ಎನ್‌ಸಿಸಿ ಲೆಫ್ಟಿನೆಂಟ್ ಡಿ.ಬಿ.ಕುಸಗೂರ, ಸಂಸ್ಥೆಯ ವ್ಯವಸ್ಥಾಪಕಿ ಸಿಸ್ಟರ್ ರೂಪಾ, ಆರೋಗ್ಯ ವಿಭಾಗದ ಸಂಯೋಜಕಿ ಸಿಸ್ಟರ್ ಅಚಲಾ, ಸಂಯೋಜಕರಾದ ಈರಣ್ಣ ಮಾಸಣಗಿ, ಸುವರ್ಣಾ ಎಸ್‌.ಎಸ್‌.ಪಿ.ಎನ್‌.ಪ್ರೌಢಶಾಲೆಯ ಶಿಕ್ಷಕ ವೃಂದ ಹಾಗೂ ಎನ್‌ಸಿಸಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ