ಸೌಂದತ್ತಿ

ಹತ್ತಿ ಬೆಳೆ ಸಮಗ್ರ ನಿರ್ವಹಣೆ ಕಾರ್ಯಾಗಾರ

ಹತ್ತಿ ಬೆಳೆ ಸಮಗ್ರ ನಿರ್ವಹಣೆ ಕಾರ್ಯಾಗಾರ

ಸವದತ್ತಿ 19: ಹತ್ತಿ ಬೆಳೆ ನಿರ್ವಹಣೆಯಲ್ಲಿ ರೈತರು ವಿಶೇಷ ಕಾಳಜಿವಹಿಸಬೇಕಿದ್ದು, ಉತ್ತಮ ಇಳುವರಿಗೆ ಇಲಾಖೆಯಿಂದ ನೀಡಲಾಗುತ್ತಿರುವ ವಿಶೇಷ ಮಾಹಿತಿಗಳ ಪ್ರಯೋಜನ ಪಡೆದುಕೊಳ್ಳಬೇಕೆಂದು ಸಹಾಯಕ ಕೃಷಿ ನಿರ್ದೇಶಕ ಶಿವಪ್ರಕಾಶ ಪಾಟೀಲ ಹೇಳಿದರು. 

ತಾಲೂಕಿನ ಹಿರೇಕುಂಬಿ ಗ್ರಾಮದಲ್ಲಿ 2023-24ನೇ ಸಾಲಿನ ಆತ್ಮಾ ಯೋಜನೆಯಡಿ ಹತ್ತಿ ಬೆಳೆ ಸಮಗ್ರ ನಿರ್ವಹಣೆ ಕುರಿತು ಹಮ್ಮಿಕೊಂಡ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ರೈತರು ಹತ್ತಿ ಬೆಳೆಯಲ್ಲಿ ಬರುವ ರೋಗಗಳನ್ನು ಹಾಗೂ ಕೀಟಗಳನ್ನು ಸರಿಯಾದ ಸಮಯದಲ್ಲಿ ತಜ್ಞರ ಮಾಹಿತಿಯನ್ನು ಪಡೆದು ನಿರ್ವಹಿಸಿದಲ್ಲಿ ಉತ್ತಮ ಇಳುವರಿಯನ್ನು ಪಡೆಯಬಹುದಾಗಿದೆ ಎಂದರು. 

ಬೋಲ್‌ಗಾರ್ಡ ಕಂಪನಿಯ ವ್ಯವಸ್ಥಾಪಕ ಶಂಬಣ್ಣ ಹಾದಿಮನಿ ಮಾತನಾಡಿ, ಹತ್ತಿ ಬೆಳೆಯಲ್ಲಿ ಬರುವು ಗುಲಾಬಿ ಕಾಯಕೊರಕ ಹುಳಭಾದೆ ಹಾಗೂ ನಿಯಂತ್ರಣ ಕುರಿತು ರೈತರಿಗೆ ವಿವರವಾದ ಮಾಹಿತಿ ನೀಡಿದರು. 

ಗ್ರಾಂ.ಪಂ ಉಪಾಧ್ಯಕ್ಷ ಫಕ್ಕೀರವ್ವ ಕೊಳ್ಳಿ, ಕೃಷಿ ಇಲಾಖೆ ತಾಂತ್ರಿಕ ವ್ಯವಸ್ಥಾಪಕ ಬಸವರಾಜ ಬಿರುಕಲ್, ಬೀರ​‍್ಪ ಪೂಜಾರಿ, ಸಿ.ಜಿ.ಬಂಗೆಣ್ಣವರ, ಸಿದ್ದಲಿಂಗ ಬೆಟಗೇರಿ, ಮಹೇಶ ಜೈನರ ಇತರರು ಉಪಸ್ಥಿತರಿದ್ದರು. 


ಸುದ್ದಿ ಓದಿ