ಶಿಗ್ಗಾವ್

ಮಹಿಳಾ ದಿನಾಚರಣೆ ಕಾರ್ಯಕ್ರಮ

ಮಹಿಳಾ ದಿನಾಚರಣೆ ಕಾರ್ಯಕ್ರಮ

ಶಿಗ್ಗಾವಿ 09: ಪಟ್ಟಣದ ವಿರಕ್ತಮಠದಲ್ಲಿ ನಡೆಯುತ್ತಿರುವ ಶರಣ ಸಂಸ್ಕೃತಿ ಉತ್ಸವ-2021 ಲಿಂ.ಮನಿಪ್ರ ಸಂಗನಬಸವ ಮಹಾಸ್ವಾಮಿಗಳ ಪುಣ್ಯಾರಾಧನೆಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ತಾಲೂಕಿನ ಮಾದರಿ ಮಹಿಳಾ ಸಂಘ ಎಂದು ಪ್ರಖ್ಯಾತಿ ಪಡೆದ ವಚನ ನಿಧಿ ವನಿತಾ ಸಂಘದ ಸದಸ್ಯರಾದ ಡಾ.ಲತಾ ನಿಡಗುಂದಿ, ಶಿಕ್ಷಕಿ ಪ್ರತಿಭಾ ನಿಜಗುಳಿ, ಗಿರಿಜಾ ಹೆಸರೂರ, ಶಕುಂತಲಾ ಕೋಣನವರ, ವಿಜಯಲಕ್ಷ್ಮೀ ಗೋಟಗೋಡಿ, ಸುಜಾತಾ ಬಳಿಗಾರ, ಸ್ನೇಹಾ ಬುಳ್ಳಕ್ಕನವರ, ಅನ್ನಪೂರ್ಣಾ ಬುಳ್ಳಕ್ಕನವರ, ಶೋಭಾ ಡಾಂಗೆ ಎಲ್ಲರೂ ಸೇರಿ ಬಸವ ತತ್ವದ ರೂಪಕವನ್ನು ಪ್ರದರ್ಶಿಸಿ ಶರಣ ಶರಣೆಯರ ಪ್ರೀತಿಗೆ ಪಾತ್ರರಾದರು. ಈ ಸಂದರ್ಭದಲ್ಲಿ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಮತ್ತು  ಬಸವ ದೇವರು, ಸಾಮಾಜಿಕ ಕಾರ್ಯಕರ್ತೆ ರಾಜೇಶ್ವರಿ ಹಿರೇಮಠ ಉಪಸ್ಥಿತರಿದ್ದರು.

ಸುದ್ದಿ ಓದಿ