ಮಹಿಳೆಯರು ಕಾನೂನುಗಳ ಬಗ್ಗೆ ಜಾಗೃತರಾಗಬೇಕು : ನ್ಯಾ. ಉಕ್ಕಲಿ
ಶಿಗ್ಗಾವಿ 01: ಮಹಿಳೆಯರಿಗೆ ಕಾನೂನುಗಳ ಬಗ್ಗೆ ಅರಿವು ಇಲ್ಲದಿದ್ದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಆದ್ದರಿಂದ ಕಾನೂನ ಬಗ್ಗೆ ಮಹಿಳೆಯರು ಜಾಗೃತರಾಗಬೇಕು ಎಂದು ಹಿರಿಯ ನ್ಯಾಯಾಧೀಶೆ ಪೈರೋಜಾ ಉಕ್ಕಲಿ ಹೇಳಿದರು.
ತಾಲೂಕಿನ ಗಂಜಿಗಟ್ಟಿ ಗ್ರಾಮದಲ್ಲಿ ಮಹಿಳಾ ಜ್ಞಾನವಿಕಾಸ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಸರಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ ಅವುಗಳ ಸದುಪಯೋಗ ಪಡೆದುಕೊಂಡು ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಬೇಕು ಎಂದರು.
ಮುಖ್ಯ ಅತಿಥಿ ಯೋಜನಾ ಅಧಿಕಾರಿ ಉಮಾ ಮಾತನಾಡಿ ಜ್ಞಾನ ವಿಕಾಸ ಕಾರ್ಯಕ್ರಮ ಸ್ವಉದ್ಯೋಗದ ವಾತ್ಸಲ್ಯ ಮಹಿಳೆಯರು ಯೋಜನೆಗೆ ಸೇರಿಕೊಂಡು ಆರ್ಥಿಕವಾಗಿ ಬದಲಾವಣೆ ಹೊಂದಿರುವ ಬಗ್ಗೆ ಪ್ರತಿ ತಿಂಗಳು ಕೇಂದ್ರದಲ್ಲಿ ಹೊಸ ಹೊಸ ವಿಚಾರಗಳನ್ನು ತಿಳಿದುಕೊಂಡು ಕುಟುಂಬದಲ್ಲಿ ಸಾಮರಸ್ಯದಿಂದ ಜೀವನವನ್ನು ನಿರ್ವಹಣೆ ಮಾಡಲು ಉತ್ಸುಹಕರಾಗಿದ್ದಾರೆಂದರು.
ನ್ಯಾಯವಾದಿ ಚನ್ನಮ್ಮ ಬಡ್ಡಿ ಮಾತನಾಡಿ ಕೇಂದ್ರದ ಸದಸ್ಯರಿಗೆ ಮಹಿಳೆಯರಲ್ಲಿ ಕಾನೂನಿನ ಅರಿವು ನೆರವು ಕುರಿತು ಮಹಿಳೆಯರು ಸಮಾಜದಲ್ಲಿ ಗೌರವದಿಂದ ಸೂಕ್ಷ್ಮತೆಯಿಂದ ಧೈರ್ಯದಿಂದ ಜಾಗರೂಕತೆಯಿಂದ ಬದುಕನ್ನು ನಡೆಸಬೇಕು ಕುಟುಂಬದಲ್ಲಿ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಂಡು ಸುಖ ಸಂಸಾರವನ್ನು ಮಾಡಬೇಕು ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕಲಿಸುವುದು ಮಹಿಳೆಯರ ಆದ್ಯತೆ ಎಂದರು.
ಶಿಕ್ಷಕಿ ಕಸ್ತೂರಮ್ಮ ಗೌರಿಹಳ್ಳಿ ಮಾತನಾಡಿ ಮಕ್ಕಳ ನೈತಿಕ ಶಿಕ್ಷಣದಲ್ಲಿ ಹೆತ್ತವರ ಪಾತ್ರ ಮುಖ್ಯವಾಗಿದ್ದು ,ಮಹಿಳೆಯರು ಇಂತಹ ಸಂಘಟನೆ ಯಿಂದ ಇವತ್ತಿನ ಸಮಾಜದಲ್ಲಿ ತಲೆ ಎತ್ತಿಕೊಂಡು ನಡೆಯುವಂತಾಗಿದೆ ಎಂದರು.
ಸಾನಿಧ್ಯವನ್ನು ಗಂಜೀಗಟ್ಟಿ ಶಿವಾಚಾರ್ಯ ಶ್ರೀಗಳುವಹಿಸಿ ಆರ್ಶಿವದಿಸಿದರು. ದಿವಾಣಿ ನ್ಯಾಯದೀಶ ಸುರೇಶ ವಗ್ಗಣ್ಣವರ, ಅಧ್ಯಕ್ಷತೆಯನ್ನು ರಾಮನಗೌಡ ವಹಿಸಿದ್ದರು, ನ್ಯಾಯವಾದಿಗಳಾದ ಪಿ.ಆರ್.ಕಲ್ಯಾಣಿ, ಬಿ.ಪಿ.ಗುಂಡಣ್ಣವರ, ಸಿ.ಎಮ್.ಹರಕುಣಿ,ಎಂ.ಐ.ಗೋಣೆಪ್ಪನವರ, ತಾಲೂಕಿನ ಕೃಷಿ ಅಧಿಕಾರಿ ಪ್ರಶಾಂತ ಹುಬ್ಬಳ್ಳಿ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ರಾಧಿಕಾ, ಭೀಮಾಕ್ಷಿ ವಲಯ ಮೇಲ್ವಿಚಾರಕರು 25 ಕೇಂದ್ರದ ಜ್ಞಾನ ವಿಕಾಸ ಸಂಯೋಜಕೀಯರು ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು.