ತಾಳಿಕೋಟಿ

ಆಜಾದಿ ಕಾ ಅಮೃತಮಹೋತ್ಸವ ಅಂಗವಾಗಿ ಮಹಿಳಾ ಜಾಗೃತಿ ಜಾಥಾ

ಆಜಾದಿ ಕಾ ಅಮೃತಮಹೋತ್ಸವ ಅಂಗವಾಗಿ ಮಹಿಳಾ ಜಾಗೃತಿ ಜಾಥಾ

ತಾಳಿಕೋಟೆ17: ಆಜಾದಿ ಕಾ ಅಮೃತಮಹೋತ್ಸವ ಅಂಗವಾಗಿ ಶುಕ್ರವಾರ ಪಟ್ಟಣದಲ್ಲಿ ಮಾತೃ ಶಕ್ತಿ ಪ್ರದರ್ಶನ ಅಂಗವಾಗಿ ಬೃಹತ್ ಮಹಿಳಾ ಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು. 

ಪಟ್ಟಣದ ರಾಜವಾಡೆಯಿಂದ ಆರಂಭವಾದ ಮಹಿಳಾ ಜಾಗೃತಿ ಜಾಥಾವು ಕತ್ರಿ ಬಜಾರ್, ಶಿವಾಜಿ ವೃತ್ತ, ಮಹಾರಾಣಾ ಪ್ರತಾತ್ ವೃತ್ತ, ಸ್ ನಿಲ್ದಾಣ, ಬಸವೇಶ್ವರ ವೃತ್ತದ ಮೂಲಕ ಹಾಯ್ದು ಎಸ್‌.ಕೆ.ಪದವಿ ಕಾಲೇಜಿನಲ್ಲಿ ಅಂತ್ಯವಾಯಿತು. "ಮಾತೃ ಶಕ್ತಿ ಪ್ರದರ್ಶನದ ಅಂಗವಾಗಿ ನಡೆದ ಪಥ ಸಂಚಲನದಲ್ಲಿ ಆಯ್ದ ಸ್ಮೃತಿ ಚಿತ್ರಗಳು ಸ್ವಾತಂತ್ರ-್ಯಕ್ಕಾಗಿ ಪ್ರಾಣ ಬಲಿದಾನ ಮಾಡಿದ ವೀರರ ಭಾವಚಿತ್ರಗಳನ್ನು ಪ್ರದರ್ಶನ ಮಾಡಲಾಯಿತು. ಜಾಥಾದಲ್ಲಿ ಭಾಗವಹಿಸಿದ ಪ್ರತಿ ಮಹಿಳೆಯೂ ಸಹ ಒಂದೇ ಬಣ್ಣದ ಸಿರೆಯನ್ನುಟ್ಟುಕೊಂಡು ಭಾಗವಹಿಸಿ ಗಮನ ಸೆಳೆದರು. 

ಸ್ವಾತಂತ್ರದ ಅಮೃತ ಮಹೋತ್ಸವದ ಸರಣಿ ಕಾರ್ಯಕ್ರಮದಡಿಯಲ್ಲಿ ಮೂರನೆ ಬೃಹತ್ ಕಾರ್ಯಕ್ರಮ ಇದಾಗಿದೆ. ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಸಾಹಿತಿ ಅಶೋಕ ಹಂಚಲಿ, ಸ್ವಾತಂತ್ರ-್ಯ ಹೋರಾಟದಲ್ಲಿ ವೀರಮಾತೆಯರ ಪಾತ್ರ ದೊಡ್ಡದು. ಅವರು ವೀರಪುತ್ರರತ್ನರನ್ನು ನೀಡಿದ್ದರಿಂದಲೇ ಸ್ವಾತಂತ್ರ-್ಯದ ಸವಿಗೆ ಕಾರಣವಾಗಿದೆ. ಸಮಾಜದಲ್ಲಿ ಪುರುಷ-ಮಹಿಳೆ ಸಮನಾಗಿದ್ದು ಜೊತೆಯಾಗಿ ಸಂಘಟಿತರಾದಾಗ ಮಾತ್ರ ದೇಶದ ಸ್ವಾತಂತ್ರ-್ಯಕ್ಕೊಂದು ಅರ್ಥವಿದೆ ಎಂದರು. 

ಪಥ ಸಂಚಲನದಲ್ಲಿ ನಗರದ ವಿವಿಧ ಮಹಿಳಾ ಸಂಘಟನೆಗಳಿಂದ ಮೂನ್ನೂರಕ್ಕೂ ಅಧಿಕ ಮಹಿಳೆಯರು ಭಾಗವಹಿಸಿದ್ದರು.  ಭಾಗವಹಿಸಿದ್ದ ಪ್ರತಿ ಮಹಿಳೆಗೂ  ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ, ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಅವರ ವತಿಯಿಂದ ತವರುಮನೆ ಕೊಡುಗೆಯಾಗಿ ಸೀರೆಯೊಂದನ್ನು ಕೊಡುಗೆಯಾಗಿ ನೀಡಲ್ಪಟ್ಟಿತು. ಜಾಥಾದಲ್ಲಿ ಸ್ವಾತಂತ್ರ-್ಯ ಅಮೃತಮಹೋತ್ಸವ ಸಮಿತಿಯ ಸದಸ್ಯರು ಭಾಗವಹಿಸಿದ್ದರು. 


ಸುದ್ದಿ ಓದಿ