ಮಹಿಳೆ ಅಬಲೆಯಲ್ಲ ಸಬಲೆ ಎಂದು ನಿರೂಪಿಸಿದ್ದಾಳೆ: ಹಂಚಿನಮನಿ
ಶಿಗ್ಗಾವಿ 09: ಮಹಿಳೆ ತಾಯಿಯಾಗಿ, ಹೆಂಡತಿಯಾಗಿ, ಸಹೋದರಿಯಾಗಿ ಸಹನೆ, ಶಾಂತಿ, ಕರುಣೆ, ತ್ಯಾಗ ಮನೋಬಾವನೆಯನ್ನು ಮೈಗೂಡಿಸಿಕೊಂಡು ಯಶಸ್ವೀಯಾಗಿ ಕಾರ್ಯ ನಿರ್ವಹಿಸುವ ಮೂಲಕ ನಾನು ಅಬಲೆಯಲ್ಲ, ಸಬಲೆ ಎಂದು ನಿರೂಪಿಸಿದ್ದಾಳೆ ಎಂದು ಕಿ.ರಾ.ಚೆನ್ನಮ್ಮ ವಸತಿ ಶಾಲೆಯ ಶಿಕ್ಷಕ ವಿರೇಶ ಹಂಚಿನಮನಿ ಹೇಳಿದರು.
ಶಿವಪುರ ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನುದ್ದೇಸಿಸಿ ಮಾತನಾಡಿ ಹೆಣ್ಣು ಮಕ್ಕಳಿಗೆ ಸರಿ ಸಮಾನವಾದ ಸ್ಥಾನ ಮಾನ ನೀಡುವ ಉದ್ದೇಶದಿಂದ ಸರಕಾರ 1975 ರಲ್ಲಿ ಮಾರ್ಚ 8 ನ್ನು ಅಂತರಾಷ್ಟ್ರೀಯ ಮಹಿಳಾ ದಿನವನ್ನಾಗಿ ಘೋಸಿಸಿದೆ. ಇಂದಿನ ಕಾಲದಲ್ಲಿ ಮಹಿಳೆ ಸಶಕ್ತಳಾಗುತ್ತಿರುವುದು ಪುರುಷರ ಪತನಕ್ಕಾಗಿ ಅಲ್ಲ ಅದು ಒಂದು ಕುಟುಂಬದ ಏಳಿಗೆಗಾಗಿ ಎಂಬುದನ್ನು ಯಾರು ಮರೆಯುವಂತಿಲ್ಲ ಎಂದು ಹೇಳಿದರು.
ತಾ.ಪ.ಮಾಜಿ ಸದಸ್ಯ ಉಷಾ ಬಿಳೆಕುದರಿ ಮಾತನಾಡಿ, ಹೆಣ್ಣು ಕೀಳು, ಗಂಡು ಮೇಲು ಎಂಬ ಬಾವನೆಯನ್ನು ತೋರೆದು ಇಬ್ಬರು ಕೂಡಿ ಸರಿಸಮಾನವಾಗಿ ಸಹ ಬಾಳ್ವೆ ನಡೆಸಿದಾಗ ಮಾತ್ರ ಸುಂದರ ಸಮಾಜವನ್ನು ನಿರ್ಮಾಣಮಾಡಲು ಸಾದ್ಯವಿದೆ. ಹಿಂದಿನ ಕಾಲದಲ್ಲಿ ಹೆಣ್ಣು ಮಕ್ಕಳನ್ನು ಕೀಳರೀಮೆಯಿಂದ ನೋಡಲಾಗುತ್ತಿತ್ತು. ಆದರೆ ಇಂದಿನ ವಿದ್ಯಾರ್ಥಿನಿಯರು ಶೈಕ್ಷಣಿಕವಾಗಿ ಮುಂದೆ ಬಂದು ಸರಕಾರ ನೀಡಿದ ಸವಲತ್ತುಗಳನ್ನು ಸದುಪಯೋಗ ಪಡೆಸಿಕೋಂಡು, ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಸಭಲರಾಗುವಂತೆ ವಿದ್ಯಾರ್ಥಿನಿಯರಿಗೆ ಕರೆ ನೀಡಿದರು.
ಕಾರ್ಯಕ್ರಮಕ್ಕೂ ಪೂರ್ವ ಕಿತ್ತೂರ ರಾಣಿ ಚೆನ್ನಮ್ಮನ ಬಾವ ಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ಹಿರಿಯ ಪತ್ರಕರ್ತ ಎಂ.ವಿ.ಗಾಡದ, ವಿದ್ಯಾರ್ಥಿಗಳಾದ ಸಂಜನಾ, ಎಶಸ್ವೀನಿ ಮಾತನಾಡಿದರು. ಶತಾಯುಷಿ ಬಸವಣ್ಣೇಮ್ಮ ಹೊಸಪೇಟೆ ಹಾಗೂ ತಾ.ಪ.ಮಾಜಿ ಸದಸ್ಯೆ ಉಷಾ ಬಿಳೆಕುದರಿಯವರನ್ನು ಮಹಿಳಾ ದಿನಾಚರಣೆ ಅಂಗವಾಗಿ ಸನ್ಮಾನಿಸಲಾಯಿತು.
ಪ್ರಾಚಾರ್ಯರಾದ ಸುಮಂಗಲಾ ದುರ್ಗದ, ಶಿಕ್ಷಕರಾದ ಸಂತೋಷ ತಿರಕಣ್ಣವರ, ವಿದ್ಯಾ ಅರಳಿಕಟ್ಟಿ, ನಾಗರಾಜ, ಪ್ರಭು, ಜ್ಯೋತಿ ಕಂಬಳಿ, ಕೀರ್ತಿ, ದಾನಿಗಳಾದ ನಿಂಗಪ್ಪ ಹೊಸಪೇಟೆ ಸೇರಿದಂತೆ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಸಂಜನಾ, ದಾಮಿನಿ, ವಿಶಾಲಾ ಪ್ರಾರ್ಥಿಸಿದರು. ಶಿಕ್ಷಕ ಪಿ.ಜೆ.ಹಿರೂಲಾಲ್ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ರೇವತಿ, ಅಶ್ವೀನಿ ನಿರೂಪಿಸಿದರು.