ಮಹಿಳಾ ಕೋ ಕೋ ಚಾಂಪಿಯನಶಿಪ್ ಹಾಗೂ ಯುನಿವರ್ಸಿಟಿ ಬ್ಲೂ ಆಯ್ಕೆ
ಶಿಗ್ಗಾವಿ 12: ಪಾಠ ಪ್ರವಚನದೊಂದಿಗೆ ಪಠ್ಯೇತರ ಚಟುವಟಿಕೆಯಾದ ಕ್ರೀಡೆಯನ್ನು ಕಾಲೇಜಿನ ಎಲ್ಲ ವಿದ್ಯಾರ್ಥಿಗಳು ಪ್ರತಿ ವರ್ಷ ತಮ್ಮ ಕ್ರೀಡಾ ಆಸಕ್ತಿಯೊಂದಿಗೆ ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸುವುದರ ಮೂಲಕ ಕಾಲೇಜಿಗೆ ಚಾಂಪಿಯನ್ ಶಿಪ್ ತಂದುಕೊಡ ಬೇಕೆಂದು ಸಂಗನಬಸವ ಮಹಾಸ್ವಾಮಿಗಳು ವಿರಕ್ತಮಠಹೇಳಿದರು.
ಪಟ್ಟಣದ ಗೌರಮ್ಮ ಬ ಅಂಕಲ ಕೋಟಿ ಸರ್ಕಾರಿ ಪ್ರಥಮದರ್ಜೆ ಕಾಲೇಜು ಶಿಗ್ಗಾವ. 2023 - 24 ನೇ ಸಾಲಿನ ಕರ್ನಾಟಕ ವಿಶ್ವವಿದ್ಯಾಲಯ ಮಟ್ಟದ ಮಹಿಳಾ ಕೋ ಕೋ ಚಾಂಪಿಯನಶಿಫ ಹಾಗೂ ಯುನಿವರ್ಸಿಟಿ ಬ್ಲೂಅನ್ನು ಸತತವಾಗಿ ಎರಡನೆಯ ಬಾರಿ ಪಡೆದ ವಿಧ್ಯಾರ್ಥಿಗಳಿಗೆ ಪ್ರಸಸ್ತಿ ಪತ್ರವನ್ನು ನೀಡಿ ಆರ್ಶಿವದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ಡಾ. ಚನಬಸಪ್ಪ ಎಸ್ ಕುಮ್ಮೂರ ಪ್ರಾಂಶುಪಾಲರು ಮಾತನಾಡಿ ಚಾಂಪಿಯನ್ ಶಿಪ್ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಇನ್ನುಳಿದ ವಿದ್ಯಾರ್ಥಿಗಳಿಗೂ ಸಹ ಕ್ರೀಡಾ ಮನೋಭಾವನೆಯನ್ನು ಬೆಳೆಸಲಾಗುತ್ತದೆಂದು ಹೇಳಿದರು.
ಕಾಲೇಜಿನ ಎಲ್ಲ ಉಪನ್ಯಾಸಕರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಡಾ ಸುರೇಶ್ ವಾಲ್ಮೀಕಿ ಸ್ವಾಗತಿಸಿದರು. ಪ್ರೊ. ಆನಂದ ಇಂದೂರು ಕಾರ್ಯಕ್ರಮ ನಿರೂಪಿಸಿದರು.