ಕಾರವಾರ

ಭತ್ತದ ಗದ್ದೆಯಲ್ಲಿ ದುಷ್ಕಮರ್ಿಗಳಿಂದ ವಾಮಾಚಾರ

ಭತ್ತದ ಗದ್ದೆಯಲ್ಲಿ ದುಷ್ಕಮರ್ಿಗಳಿಂದ ವಾಮಾಚಾರ

ಬನವಾಸಿ 04: ಸಮೀಪದ ರಾಮಾಪುರ ಮಜರೆ ಹೆಬ್ಬತ್ತಿ ಗ್ರಾಮದ ರೈತರೊಬ್ಬರ ಹೊಲದಲ್ಲಿ ದುಷ್ಕಮರ್ಿಗಳು ವಾಮಾಚಾರ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಗ್ರಾಮದ ರೈತ ಪ್ರತೀಕ ಕೃಷ್ಣಪ್ಪ ಕುರುಬರ ಇವರ ಗ್ರಾಮದಲ್ಲಿರುವ ಭತ್ತದ ಹೊಲದ ಮಧ್ಯದಲ್ಲಿ ಮಣ್ಣಿನ ಮಡಿಕೆಯಿಂದ ಕಳಶ ಮಾಡಿ, ಅದರ ಮೇಲೆ ಹಸಿರು ವಸ್ತ್ರ ಉಡಿಸಿ, ಹೂವು ಮುಡಿಸಿದ್ದಾರೆ. ತೋಟದಲ್ಲಿಯೇ ಇದ್ದ ಸಿಂಗಾರು ಅಡಿಕೆಯನ್ನು ಪೂಜೆಗೆ ಬಳಸಿ, ಕುಂಕುಮ, ಅರಿಶಿಣ, ಅಕ್ಕಿ, ಒಣ ಕೊಬ್ರಿ ಹಾಗೂ ಬಿಳಿ ಬೂದಿ ಈ ಕಾರ್ಯಕ್ಕೆ ಬಳಸಿದ್ದಾರೆ. ಬೆಳಿಗ್ಗೆ ಗದ್ದೆಗೆ ಹೋದಾಗ ಈ ಘಟನೆ ಬೆಳಕಿಗೆ ಬಂದಿದೆ. ಕಳೆದ ಮೂರ್ನಾಲ್ಕು ತಿಂಗಳಿನಿಂದ ಪ್ರತಿ ಅಮವಾಸ್ಯೆ ಮತ್ತು ಹುಣ್ಣಿಮೆಗೆ ಈ ರೀತಿಯ ಕೃತ್ಯ ತಮ್ಮ ಹೊಲದಲ್ಲಿ ನಡೆಯುತ್ತಿದೆ ಎನ್ನುತ್ತಾರೆ ರೈತ ಪ್ರತೀಕ ಕುರುಬರ.

ಇದರಿಂದ ಆತಂಕ, ಭಯ ಸೃಷ್ಟಿಯಾಗಿದೆ. ನಮ್ಮ ಹೊಲದ ಅಕ್ಕಪಕ್ಕದ ರೈತರಲ್ಲೂ ಇದೇ ಭಾವನೆ ಮೂಡಿದೆ ಎಂದಿದ್ದಾರೆ.

ಸುದ್ದಿ ಓದಿ