ರಾಣೆಬೆನ್ನೂರ

ವನ್ಯ ಪ್ರಾಣಿಗಳು ದೇಶದ ಸಂಪತ್ತು ಸಂರಕ್ಷಣೆ ನಮ್ಮೆಲ್ಲರ ಹೊಣೆ: ಪವನ್ ಕುಮಾರ್

ವನ್ಯ ಪ್ರಾಣಿಗಳು ದೇಶದ ಸಂಪತ್ತು ಸಂರಕ್ಷಣೆ ನಮ್ಮೆಲ್ಲರ ಹೊಣೆ: ಪವನ್ ಕುಮಾರ್

ಲೋಕದರ್ಶನ ವರದಿ 


ರಾಣೀಬೆನ್ನೂರ 24: ವನ್ಯ ಪ್ರಾಣಿಗಳು ಈ ದೇಶದ ಸಂಪತ್ತು. ಅವುಗಳು ಸಹ ಬದುಕುವ ಹಕ್ಕನ್ನು ಪಡೆದುಕೊಂಡಿದೆ. ಮಾನವನಿಗೆ ಮಾತನಾಡಲು ಬಾಯಿ ಇದೆ. ವನ್ಯ ಪ್ರಾಣಿಗಳಿಗೆ ಬಾಯಿ ಯಿಲ್ಲ ಅಷ್ಟೇ ವ್ಯತ್ಯಾಸ. ಅದಕ್ಕಾಗಿ ಸಮಾಜದಲ್ಲಿ ಬದುಕುವ ಪ್ರತಿಯೊಬ್ಬರೂ ನಮ್ಮ ದೇಶದ ಸಂಪತ್ತು. ವನ್ಯ ಪ್ರಾಣಿಗಳನ್ನು ರಕ್ಷಣೆ ಮಾಡುವಲ್ಲಿ ಸಹಕರಿಸಬೇಕಾದ ಇಂದಿನ ಬಹು ಅಗತ್ಯವಿದೆ ಎಂದು ಉಪ ವಲಯ ಅರಣ್ಯಾಧಿಕಾರಿ ಪವನ್‌ಕುಮಾರ್ ಹೇಳಿದರು.  

      ಅವರು ತಾಲೂಕಿನ ಗುಡ್ಡದಹಾನ್ವೇರಿ ದತ್ತು ಗ್ರಾಮದಲ್ಲಿ ಸ್ಥಳೀಯ ಕೆಎಲ್‌ಇ ಸಂಸ್ಥೆಯ ರಾಜ-ರಾಜೇಶ್ವರಿ ಕಲಾ ವಾಣಿಜ್ಯ ಮಹಿಳಾ ಮಹಾವಿದ್ಯಾಲಯವು ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನಾ ಶಿಬಿರದಲ್ಲಿ ಅರಣ್ಯ ಮತ್ತು ವನ್ಯ ಜೀವಿಗಳ ಸಂರಕ್ಷಣೆ ವಿಷಯ ಕುರಿತು ಮಾತನಾಡಿದರು.  

    ಹಾವೇರಿ ಜಿಲ್ಲೆಯ ರಾಣೇಬೆನ್ನೂರು ವ್ಯಾಪ್ತಿಯಲ್ಲಿ ಕೃಷ್ಣಮೃಗ ಅಭಯಾರಣ್ಯವು ಅತಿ ಪ್ರಸಿದ್ಧಿ ಪಡೆದಿದೆ. ದೇಶದ ವಿವಿಧ ಭಾಗದಿಂದ ಕೃಷ್ಣಮೃಗಗಳನ್ನು ವೀಕ್ಷಿಸಲು ಧಾವಿಸುವ ಪ್ರವಾಸಿಗರಿದ್ದಾರೆ. ಹಿತ್ತಲ ಗಿಡ ಮದ್ದಲ್ಲ ಎನ್ನುವ ಗ್ರಾಮೀಣ ನಾಗರೀಕರ ಗಾದೆ ಮಾತಿನಂತೆ ನಮ್ಮ ಪಕ್ಕದಲ್ಲೇ ಇರುವ ಅತೀ ಮಹತ್ವನ್ನು ಪಡೆದಿರುವ ಕೃಷ್ಣಮೃಗ ಅಭಯಾರಣ್ಯದ ಬಗ್ಗೆ ಕೇಳಿದರೆ ಸರಿಯಾದ ಮಾಹಿತಿ ಬಹುತೇಕರಲ್ಲಿ ಸಿಗದಂತ ಪರಿಸ್ಥಿತಿ ಇದೆ. ನಮ್ಮ ಅರಣ್ಯ ಸಂಪತ್ತಿನ ಜೊತೆಗೆ ನಮ್ಮ ತಾಲೂಕಿನಲ್ಲಿರುವ ಐತಿಹಾಸಿಕ ದೇಗುಲಗಳು ಸ್ವಾತಂತ್ರ್ಯ ಯೋಧರರು ಮತ್ತು ದೇಶದ ಸ್ವಾತಂತ್ರ್ಯಕ್ಕೆ ತಾಲೂಕಿನ ಕೊಡುಗೆ ಏನು? ಎನ್ನುವ ಸಾಮಾನ್ಯ ಜ್ಞಾನ ನಾವು ಅರಿಯದೇ ಹೋದರೆ ನಾಡು ದೇಶ ಕಟ್ಟಲು ಹೇಗೆ ಸಾಧ್ಯ ಎಂದು ಮಾರ್ಮಿಕವಾಗಿ  ಹೇಳಿದರು.  

     ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ರಾಜ್ಯ ರೈತ ಸಂಘ ಹಸಿರು ಸೇನೆ. ಗೌರವಾಧ್ಯಕ್ಷ ಬಸವನಗೌಡ ಗಂಗನಗೌಡ್ರ ಅವರು, ರೈತ ಜಾಗೃತಿ ವಿಷಯ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯರಾದ ಲಕ್ಷ್ಮೀ ರಮೇಶ ಚಟ್ನಿ, ಪ್ರೊ. ರೇಖಾ ಎಸ್, ಪ್ರೊ. ಬೀಮಾರತಿ ತೀರ್ಥ, ದೀಲೀಪ್ ವಗ್ಗಣ್ಣನವರ, ಹಾಲೇಶ, ಪ್ರಾಚಾರ್ಯ ನಾರಾಯಣ ನಾಯಕ್ ಎ, ಪ್ರೊ.ವಿರೇಶ್ ಕುರಹಟ್ಟಿ, ಡಾ. ಕವಿತಾ ಗಡ್ಡದಗೋಳಿ ಸೇರಿದಂತೆ ಮತ್ತಿತರ ಗಣ್ಯರು, ಗ್ರಾಮದ ಮುಖಂಡರು, ಉಪನ್ಯಾಸಕರು, ಶಿಬಿರದ ನೂರಾರು ವಿದ್ಯಾರ್ಥಿಗಳು, ಉಪಸ್ಥಿತರಿದ್ದರು.  ಶಿಬಿರಾರ್ಥಿಗಳು ಪ್ರಾರ್ಥಿಸಿ, ರೈತ ಗೀತೆ ಹಾಡಿದರು. 


ಸುದ್ದಿ ಓದಿ