ತಾಳಿಕೋಟಿ

ಹದಗೆಟ್ಟ ರಸ್ತೆ ದುರಸ್ತಿ ಯಾವಾಗ?

ಹದಗೆಟ್ಟ ರಸ್ತೆ ದುರಸ್ತಿ ಯಾವಾಗ?

ತಾಳಿಕೋಟಿ18: ಸಮೀಪದ ಗಡಿ ಸೋಮನಾಳ ತಾಂಡಾದ ಒಳಗಿನ ರಸ್ತೆಗಳು ಹದಗೆಟ್ಟು ಹಾಳಾಗಿ ಹೋಗಿದ್ದು ವಾಹನ ಸವಾರರು ಹಾಗೂ ಪಾದಚಾರಿಗಳು ನಿತ್ಯ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.  

ತಾಳಿಕೋಟಿ ಪಟ್ಟಣಕ್ಕೆ ಹೊಂದಿಕೊಂಡಿರುವ ಗಡಿ ಸೋಮನಾಳ ತಾಂಡಾದಲ್ಲಿ ಸುಮಾರು 70-80ಮನೆಗಳಿವೆ ತಾಂಡಾಕ್ಕೆ ಹೊಗಲು ಮುಖ್ಯ ರಸ್ತೆಗೆ ಸಿ.ಸಿ ರಸ್ತೆ ನಿರ್ಮಾಣ ಮಾಡಲಾಗಿದೆ, ಆದರೆ ತಾಂಡಾದ ಒಳಗಿರುವ ರಸ್ತೆಗಳು ಹಾಳಗಿ ಹೊಗಿವೆ. ಹೊಸ ರಸ್ತೆ ಮಾಡುವ ಉದ್ದೇಶದಿಂದ ಮೊದಲಿದ್ದ ಪರಸಿ ಕಲ್ಲಿನ ರಸ್ತೆಗಳನ್ನು ತೆಗೆದುಹಾಕಲಾಗಿದೆ. ಈಗ ಮಳೆಗಾಲ ಆರಂಭವಾಗಿ ಕಳೆದ ಕೆಲವು ದಿನಗಳಿಂದ ನಿತ್ಯ ಜಿಟಿ ಮಳೆಯಿಂದ ರಸ್ತೆಯಲ್ಲಿ ನೀರು ಸಂಗ್ರಹವಾಗಿ ಎಲ್ಲಿ ನೋಡಿದರಲ್ಲಿ ರಸ್ತೆಗಳು ಕೆಸರು ಗದ್ದೆಗಳಂತಾಗಿ ನಡೆಯಲು ಬಾರದಂತ ಪರಿಸ್ಥಿತಿ ನಿರ್ಮಾಣವಾಗಿದೆ. ತಾಂಡಾದ ಮಧ್ಯಭಾಗದಲ್ಲಿ ಶಾಲಾ ಕಟ್ಟಡವಿರುವುದರಿಂದ ಪ್ರತಿ ದಿನ ಶಾಲೆಗೆ ಬರುವ ಮಕ್ಕಳಿಗೆ ತುಂಬಾ ತೊಂದರೆಯಾಗಿದೆ. ಅವರು ಈ ರಸ್ತೆಯನ್ನೆ ಅವಲಂಭಿಸಿರುವುದರಿಂದ ಕೆಲವು ಅವಗಡಗಳು ಸಂಭವಿಸಿವೆ. ಅದೆಷ್ಟೋ ದ್ವಿಚಕ್ರ ವಾಹನ ಸವಾರರು ಉರುಳಿ ಬಿದ್ದು ಗಾಯಾಳುಗಳಾಗಿದ್ದಾರೆ.  

ದೇ. ಹಿಪ್ಪರಗಿ ಮತಕ್ಷೇತ್ರದ ಶಾಸಕರು ಕ್ಷೇತ್ರದಾದ್ಯಂತ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ, ಆದರೆ ಹಲವು ವರ್ಷಗಳಿಂದ ಈ ತಾಂಡಾದಲ್ಲಿ ಉತ್ತಮ ರಸ್ತೆಗಳು ನಿರ್ಮಾಣವಾಗಿಲ್ಲ. ಅಂಪೂರ್ಣವಾಗಿ ಹದಗೆಟ್ಟಿರುವ ಈ ತಾಂಡಾದ ಒಳಗಿನ ರಸ್ತೆಗಳನ್ನು ಕೆವಲ ದುರಸ್ತಿ ಮಾಡದೆ ಮರು ನಿರ್ಮಾಣ ಮಾಡಬೇಕೆಂದು ಜನರು ಶಾಸಕರಲ್ಲಿ ಕೇಳಿಕೊಳ್ಳುತ್ತಾರೆ. ತಮ್ಮ ಕ್ಷೇತ್ರ ವ್ಯಾಪ್ತಿಯ ಈ ತಾಂಡಾದ ರಸ್ತೆಗಳ ನಿರ್ಮಾಣಕ್ಕೆ ಶಾಸಕರು ಕೈ ಜೋಡಿಸಿದರೆ ಇಲ್ಲಿಯ ಜನರು ನೆಮ್ಮದಿಯ ನಿಟ್ಟುಸಿರು ಬಿಡುತ್ತಾರೆ. 


ಸುದ್ದಿ ಓದಿ