ಯರಗಟ್ಟಿ

ಟ್ರಾಫಿಕ್ ಕಿರಿಕಿರಿಗೆ ಮುಕ್ತಿ ಯಾವಾಗ ??

ಟ್ರಾಫಿಕ್ ಕಿರಿಕಿರಿಗೆ ಮುಕ್ತಿ ಯಾವಾಗ ??

ಯರಗಟ್ಟಿ  06: ಪಟ್ಟಣದಲ್ಲಿ ಜನಸಂಖ್ಯೆ ಜತೆಗೆ ವಾಹನ ಸಂಚಾರ ದಟ್ಟಣೆಯೂ ಹೆಚ್ಚುತ್ತಿದೆ. ಆದರೆ, ಸಮಸ್ಯೆಗೆ ಶಾಶ್ವತವಾಗಿ ಪರಿಹಾರ ಕಲ್ಪಿಸುವ ಕೆಲಸ ಆಗುತ್ರಿಲ್ಲ. ಪಟ್ಟಣ ಪಂಚಾಯತಿ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಪೊಲೀಸರು, ಜನರ ಸಮಸ್ಯೆ ಹೈರಾಣ ಆಗುತ್ತಿದ್ದಾರೆ. ಪಟ್ಟಣದಲ್ಲಿ ಶನಿವಾರ ವಾರದ ಸಂತೆ ನಡೆಯುತ್ತಿರುವ ಹಿನ್ನೆಲೆ ಬೆಳಗ್ಗೆ 8 ಗಂಟೆಯಿಂದ ಸಂಚಾರ ದಟ್ಟಣೆ ಉಂಟಾಗಿದೆ. ಪರಿಣಾಮ ರಸ್ತೆಯ ಮೇಲೆ ವಾಹನಗಳು ಗಂಟೆಗಟ್ಟಲೆನಿಲ್ಲಬೇಕಾಯಿತು. ಅಲ್ಕದೆ,. ಶಾಲಾ ವಿದ್ಯಾರ್ಥಿಗಳು ಸಂಚಾರ ದಟ್ಟಣೆಗೆ ಸಿಲುಕಿ ಹೈರಾಣ ಆದ ಘಟನೆ ನಡೆಯಿತು. ಪಟ್ಟಣದಲ್ಲಿ ಓಡಾಡುವ ವಾಹನ ಸವಾರರು ಸಂಚಾರ ನಿಯಮಗಳನ್ನು ಪಾಲಿಸುತ್ತಿಲ್ಲ. ಮನಬಂದಂತೆ ವಾಹನಗಳನ್ನು ರಸ್ತೆ ಪಕ್ಕದಲ್ಲಿ, ಕೆಲವೊಮ್ಮೆ ರಸ್ತೆಯ ಮೇಲೆಯೇ ನಿಲ್ಲಿಸುತ್ತಾರೆ.ಎಲ್ಲಿಯೂ ನಿಲಗುಡೆ ಮಾರ್ಗ ಸೂಚಿಯು ಇಲ್ಲವೇ ಇಲ್ಲ. ಪರಿಣಾಮ ದಟ್ಟಣೆ ಹೆಚ್ಚಾಗಿ ಮಹಿಳೆಯರು, ಮಕ್ಕಳು, ವೃದ್ಧರು, ಶಾಲಾ ವಿದ್ಯಾರ್ಥಿಗಳ ಓಡಾಡಟಕ್ಕೆ ತೊಂದರೆ ಆಗುತ್ತಿದೆ.  

ಅಪಘಾತ ಸಂಖ್ಯೆಯ ಹೆಚ್ಚುತ್ತಿದೆ.ಈ ಕುರಿತು ಪೊಲೀಸರಿಗೆ, ಪಪಂ ಅಧಿಕಾರಿಗಳಿಗೆ ದೂರು ಕೊಟ್ಟರು ಪ್ರಯೋಜನವಾಗುತ್ತಿಲ್ಲ ಎಂದು ನಾಗರಿಕರು ದೂರಿದ್ದಾರೆ. ಪ್ರತಿ ಶನಿವಾರ ನಡೆಯುವ ವಾರದ ಸಂತೆಗೆ ಸುತ್ತಮುತ್ತಲಿನ ಗ್ರಾಮಗಳಿಂದ ರೈತರು, ವ್ಯಾಪಾರಿಗಳು ಬರುತ್ತಾರೆ. ವ್ಯಾಪಾರಸ್ಥರು ರಸ್ತೆಯ ಮೇಲೆಯೇ ತಮಗೆ ಬೇಕಾದ ಕಡೆ ಟೆಂಟ್ ಹಾಕಿ ವ್ಯಾಪಾರ ಮಾಡುತ್ತಾರೆ. ಇದು ಸಂಚಾರ ದಟ್ಟಣೆ ಗೆ ಮತ್ತಷ್ಟು ಕಾರಣ ಎನ್ನಲಾಗಿದೆ.  ಪಟ್ಟಣ ಪಂಚಾಯತಿ ಅಧಿಕಾರಿಗಳು ಪುಟ್ ಪಾತ್ ಗಳ ಮೇಲೆ, ರಸ್ತೆ ಬದಿಯಲ್ಲಿ ಬೇಕಾಬಿಟ್ಟಿ ಅಂಗಡಿಗಳಿಗೆ ಅವಕಾಶ ನೀಡಿದೆ. ಅಲ್ಲದೆ, ಯಾವುದೇ ವಾಣಿಜ್ಯ ಕಟ್ಟಡಗಳು ಪಾಕಿಂರ್ಗ್ ಸೌಲಭ್ಯ ಹೊಂದಿಲ್ಲ. ಪಟ್ಟಣದಲ್ಲಿ ಪರ್ಯಾಯ ಪಾಕಿಂರ್ಗ್ ವ್ಯವಸ್ಥೆ ಇಲ್ಲವೇ ಇಲ್ಲ.ಮೊದಲು ಪುಟ್ ಪಾತ್, ರಸ್ತೆ, ಚರಂಡಿಗಳ ಮೇಲಿರುವ ಅಂಗಡಿಗಳನ್ನು, ರಸ್ತೆಯ ಮೇಲೆ ಇಟ್ಟಿರುವ ಅಂಗಡಿಗಳ ನಾಮಫಲಕಗಳನ್ನು ತೆರವುಗೊಳಿಸುವ ಕೆಲಸವನ್ನು ಪಪಂ ಅಧಿಕಾರಿಗಳು ಮಾಡಬೇಕು. ಪೊಲೀಸರು ರಸ್ತೆ ಬದಿ ಪಾಕಿಂರ್ಗ್ ನಿಲ್ಲಿಸುವುದನ್ನು ತಡೆಯಬೇಕು ಎಂದು ಪಪಂ ನಾಗರಿಕರು ಆಗ್ರಹಿಸಿದ್ದಾರೆ.

ಯರಗಟ್ಟಿ ಶನಿವಾರದ ಸಂತೆಗೆ ಪಕ್ಕ ಜಿಲ್ಲೆಗಳಿಂದ ಸುತ್ತಮುತ್ತಲಿನ ಗ್ರಾಮಗಳ ಬರುವ ಜನರು ಜಾನುವಾರ, ಕೋಳಿ ಕುರಿ ವ್ಯಾಪಾರ ಜೋರಾಗಿರುತ್ತದೆ ಹಾಗಾಗಿ ಪದೇ ಪದೇ ಟ್ರಾಪಿಕ್ ಕಿರಿಕಿರಿ ಆಗುತ್ತಿದೆ ಹಾಗೂ ತಾಲೂಕು ಕೇಂದ್ರವಾದರೂ ಪೊಲೀಸ್ ಠಾಣೆ ಇಲ್ಲದ ಕಾರಣ ಸಿಬ್ಬಂದಿ ಸಮಸ್ಯೆ ಆಗುತ್ತಿದೆ ಈ ಕುರಿತು ಸರ್ಕಾರಕ್ಕೆ ಪೊಲೀಸ್ ಠಾಣೆ ಮಂಜೂರು ಮಾಡುವಂತೆ ಹಲವಾರು ಬಾರಿ ಪತ್ರ ಬರೆಯಲಾಗಿದೆ.

ಡಾ. ಬಿಮಾಶಂಕರ ಗುಳೆದ

ಎಸ್ ಪಿ ಬೆಳಗಾವಿ.   

ರಾಜ್ಯದಲ್ಲಿ ಅತಿ ದೊಡ್ಡ ಜಾನುವಾರ ಸಂತೆ ಗೆ ರಾಜ್ಯದ ವಿಜಯಪುರ, ಗದಗ, ಹುಬ್ಬಳ್ಳಿ ಧಾರವಾಡ, ಶಿವಮೊಗ್ಗ, ಯಾದಗಿರಿ, ದಾವಣಗೆರೆ, ಹಾವೇರಿ, ಜಿಲ್ಲೆಗಳಿಂದ ಹಾಗೂ ಪಕ್ಕದ ರಾಜ್ಯ ಗೋವಾ ಮಹಾರಾಷ್ಟ್ರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಗೆ ಜಾನುವಾರ ಸಂತೆಗೆ ಜನರು ಮತ್ತು ವಾಹನಗಳು ಆಗಮಿಸುವುದರಿಂದ ಅತಿಯಾದ ಟ್ರಾಫಿಕ್ ಜಾಮ್ ಕಂಡುಬರುತ್ತದೆ.

ಆಯ್‌. ಎಂ. ಮಠಪತಿ

ಸಿಪಿಐ ಮುರಗೋಡ 


ಸುದ್ದಿ ಓದಿ