ಶಿಗ್ಗಾವ್

ಶಿಗ್ಗಾವಿ ಪುರಸಭೆಗೆ ಸರ್ಜರಿ ಯಾವಾಗ ? ಸದಸ್ಯರ ಅಹವಾಲು

ಶಿಗ್ಗಾವಿ ಪುರಸಭೆಗೆ ಸರ್ಜರಿ ಯಾವಾಗ ? ಸದಸ್ಯರ ಅಹವಾಲು

ಶಿಗ್ಗಾವಿ 01: ಕೇಂದ್ರ ಮತ್ತು ರಾಜ್ಯದಲ್ಲಿ ಉತ್ತಮ ಆಡಳಿತ ಹಾಗೂ ಅಭಿವೃದ್ದಿಪರ ಕೆಲಸಗಳನ್ನು ನಿರ್ವಹಿಸಲು ಸಂಪುಟ ಸರ್ಜರಿ ಮಾಡಿದ್ದು ಮುಖ್ಯಮಂತ್ರಿ ಬೊಮ್ಮಾಯಿವರ ಕ್ಷೇತ್ರದ ಪಟ್ಟಣದ ಪುರಸಭೆಯ ಆಡಳಿತ ಮಂಡಳಿಯ ಅಧ್ಯಕ್ಷ ಸ್ಥಾನ ಬದಲಾವಣೆಗೆ ಸರ್ಜರಿ ಯಾವಾಗ ? ಅತಿ ಅವಶ್ಯವಾಗಿದೆ. 

ಕಳೆದ 28-10-2020 ರಂದು ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಸಂದರ್ಭದಲ್ಲಿ ಆಗಿನ ಗೃಹ ಸಚಿವ ಬಸವರಾಜ ಬೊಮ್ಮಾಯಿಯವರ ನೇತೃತ್ವದಲ್ಲಿ  9 ತಿಂಗಳ ಕಾಲಾವಧಿಗೆ ಒಳ ಒಪ್ಪಂದದ ಪ್ರಕಾರ  ಶ್ರೀಕಾಂತ ಬುಳ್ಳಕ್ಕನವರನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲಾಗಿತ್ತು ಆದರೆ ಈಗ ಅವರ ಅವಧಿ ಮುಕ್ತಾಯವಾಗಿದ್ದು, ಪುರಸಭೆ ಸದಸ್ಯರಲ್ಲಿ ಅಧ್ಯಕ್ಷ ಸ್ಥಾನದ ಲಾಭಿಗೆ ತುರುಸಿನ ಪೈಪೋಟಿ ಪ್ರಾರಂಭವಾಗಿದೆ. 

ಶ್ರೀಕಾಂತ ಬುಳ್ಳಕ್ಕನವರ ಬಗ್ಗೆ ಸದಸ್ಯರಿಗೆ  ಒಳ್ಳೆಯ ಅಭಿಪ್ರಾಯವಿಲ್ಲ ಹಾಗೂ ಅಧ್ಯಕ್ಷರಾಗಿ 9 ತಿಂಗಳು ಗತಿಸಿದರೂ ಅಭಿವೃದ್ದಿ ಶೂನ್ಯ ಅವರು ಅಂದುಕೊಂಡ ಹಾಗೇ ಅಭಿವೃದ್ದಿ ಮಾಡಲು ಆಗಲಿಲ್ಲ ಆದರೆ  ಬೊಮ್ಮಾಯಿಯವರ ಶ್ರೀರಕ್ಷೆ ಇದೆ ಏಕೆಂದರೆ ಇವರನ್ನು ಅಧ್ಯಕ್ಷರಾಗಿ ಮಾಡುವಾಗ 16 ಸದ್ಯಸರ ಬೆಂಬಲವಿರಲಿಲ್ಲ ಆದರೆ ಬೊಮ್ಮಾಯಿಯವರ ಒತ್ತಡಕ್ಕೆ ಮಣಿದ ಸದಸ್ಯರು ಒಲ್ಲದ ಮನಸ್ಸಿನಿಂದ 9 ತಿಂಗಳು ಅವಧಿಗೆ ಅಧ್ಯಕ್ಷರ ಆಯ್ಕೆಗೆ ಒಪ್ಪಿಗೆ ನೀಡಿದ್ದರು, ಅದ್ಯಕ್ಷ ಮತ್ತು ಕೆಲ ಸದಸ್ಯರ ನಡುವೆ ಭಿನ್ನಮತ ಉಂಟಾಗಿದೆ, ಅದ್ಯಕ್ಷರು ಕೆಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ನಿರ್ಣಯಗಳನ್ನು ಮಾಡುತ್ತಿದ್ದಾರೆ ಎಂದು ಆರೋಪ. 

ಪುರಸಭೆಯಲ್ಲಿ ಬಿಜೆಪಿ 9, ಕಾಂಗ್ರೇಸ 6, ಪಕ್ಷೇತರ 8 ಸದಸ್ಯರು ಆಯ್ಕೆಯಾಗಿದ್ದು, ಅದ್ಯಕ್ಷರಾಗಲು 13 ಸದಸ್ಯರ ಬೆಂಬಲಬೇಕು ಅಂದರೆ ಬಿಜೆಪಿಯವರು ಅಧಿಕಾರ ನೆಡೆಸಲು ಪಕ್ಷೇತರ ಸದಸ್ಯರ ಬೆಂಬಲ ಸಿಕ್ಕಾಗ ಮಾತ್ರ ಬಿಜೆಪಿಗೆ ಅಧಿಕಾರ ಇಲ್ಲದಿದ್ದರೆ ಅಧಿಕಾರ ಮಾಡಲು ಆಗುವುದಿಲ್ಲ ಆದ್ದರಿಂದ ಪಕ್ಷೇತರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸೂಕ್ತಸ್ಥಾನಮಾನ ನೀಡಿ ಆಡಳಿತ ನೆಡೆಸಬೇಕಾಗುತ್ತದೆ. ಅಧ್ಯಕ್ಷ ಸ್ಥಾನ ಸಾಮಾನ್ಯ ಇರುವ ಕಾರಣ ಬಿಜೆಪಿಯ ಮತ್ತು ಪಕ್ಷೇತರ ಎಲ್ಲ ಸದಸ್ಯರು ಪೈಪೋಟಿ ಏಕೆಂದರೆ ಮುಖ್ಯಮಂತ್ರಿ ಕ್ಷೇತ್ರ ಅನುಧಾನ ಹೆಚ್ಚಿಗೆ ಬರುತ್ತದೆ ಜೊತೆಗೆ ವಾರ್ಡನ ಅಭಿವೃದ್ದಿ ಮಾಡುವ ಕನಸು ಸದಸ್ಯರದ್ದಾಗಿದೆ. 

ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಆಕಾಂಕ್ಷೆಗಳು ಸದಸ್ಯ ಸಿದ್ದಾರ್ಥಗೌಡ ಪಾಟೀಲ, ದಯಾನಂದ ಅಕ್ಕಿ, ರಮೇಶ ವನಹಳ್ಳಿ ಹೆಸರು ಮುಂಚೂಣಿಯಲ್ಲಿ ಕೇಳಿಬಂದರೆ ತೆರೆಮರೆಯಲ್ಲಿ ಶಾಂತಾಬಾಯಿ ಸುಬೇದಾರ, ರೂಪಾ ಬನ್ನಿಕೊಪ್ಪ, ಜ್ಯೋತಿ ನಡೂರ, ರೇಖಾ ಕಂಕನವಾಡ, ಸಂಗೀತಾ ವಾಲ್ಮೀಕಿ ಹೆಸರು ಕೇಳಿ ಬರುತ್ತಿದ್ದು ಇವರಲ್ಲಿ ಯಾರಿಗೆ ಒಲಿಯಲಿದೆ ಅಧ್ಯಕ್ಷ ಸ್ಥಾನ ? ಪುರಷರಿಗೋ ಅಥವಾ ಮಹಿಳೆರಿಗೋ ?  

ಆದರೆ ಇಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಪ್ರಭಾವಿಯಾಗಿದ್ದು ಆದ್ದರಿಂದ ರಮೇಶ ವನಹಳ್ಳಿ , ದಯಾನಂದ ಅಕ್ಕಿ, ಜ್ಯೋತಿ ನಡೂರ, ರೇಖಾ ಕಂಕನವಾಡ ಅಥವಾ ಬಿಜೆಪಿ ಅಭ್ಯರ್ಥಿ ಸಿದ್ದಾರ್ಥಗೌಡ ಪಾಟೀಲ ಇದರಲ್ಲಿ ಯಾರಿಗೆ ಒಲಿಯಲಿದೆ ಅಧ್ಯಕ್ಷ ಸ್ಥಾನದ ಭಾಗ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಯಾರಿಗೆ ಆರ್ಶಿವದಿಸಲಿದ್ದಾರೆ ಕಾದುನೋಡಬೇಕಾಗಿದೆ. 

ಒಪ್ಪಂದದ ಪ್ರಕಾರ 9 ತಿಂಗಳು ಅದ್ಯಕ್ಷ ಸ್ಥಾನವನ್ನ ಅನುಭವಿಸಿ ಅವಧಿ ಮುಗಿದರೂ ಬಸವರಾಜ ಬೊಮ್ಮಾಯಿಯವರ ಮಾತನ್ನು ಪುರಸಭೆ ಅದ್ಯಕ್ಷರು ದಿಕ್ಕರಿಸಿ ತಮ್ಮ ಸ್ಥಾನವನ್ನ ಮುಂದುವರೆಸಿಕೊಂಡು ಹೊರಟಿದ್ದಾರೆ, ಇನ್ನೂ ರಾಜೀನಾಮೆ ನೀಡಿಲ್ಲ ಅದಷ್ಟು ಬೇಗ ರಾಜೀನಾಮೆ ನೀಡಿ ಬೇರೆಯವರಿಗೆ ಅವಕಾಶ ಮಾಡಿ ಕೊಡಬೇಕು. 

ಹೆಸರು ಹೇಳದ ಪುರಸಭೆ ಸದಸ್ಯ ಶಿಗ್ಗಾವಿ. 


ಸುದ್ದಿ ಓದಿ