ಕಾರವಾರ

ವಿಕಲಚೇತನಳಿಗೆ ವೀಲ್ ಚೇರ್ ವಿತರಣೆ

ವಿಕಲಚೇತನಳಿಗೆ ವೀಲ್ ಚೇರ್ ವಿತರಣೆ


ಬನವಾಸಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ  ಜನಮಂಗಳ ಕಾರ್ಯಕ್ರಮ ಅಡಿಯಲ್ಲಿ ಸಮೀಪದ ಕಂತ್ರಾಜಿ ಗ್ರಾಮದ ಅಂಕಿತಾ ಎಂಬ ವಿಕಲ ಚೇತನಳಿಗೆ ವೀಲ್ ಚೇರ್  ವಿತರಣೆ ಮಾಡಲಾಯಿತು.     

 ಈ ಸಂದರ್ಭದಲ್ಲಿ ಕಂತ್ರಾಜಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಭಾರತಿ ಹೆಗಡೆ ಮಾತಾನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳದ  ಧರ್ಮಾಧಿಕಾರಿ ವೀರೇಂದ್ರ ಹೆಗಡೆಯವರು ಹಲವು ಜನಪರ  ಯೋಜನೆಗಳನ್ನು ಜಾರಿಗೆ ತಂದಿದ್ದು ಅದರಲ್ಲಿ “ಜನ ಮಂಗಳ” ಅಂಗವಿಕಲರ ಯೋಜನೆಯೂ ಒಂದಾಗಿದೆ. ಒಂದು ಸರ್ಕಾರ ಮಾಡುವಂತಹ ಕಾರ್ಯವನ್ನು ಧರ್ಮಸ್ಥಳ ಸಂಘವು ಮಾಡುತ್ತಿರುವುದು  ಶ್ಲಾಘನೀಯವಾಗಿದೆ ಎಂದರು.ವೀಲ್ ಚೇರ್ ಪಡೆದ ಪೋಷಕ ಬಂಗಾರ್ಯ ಮಾತನಾಡಿ, ಧರ್ಮಸ್ಥಳ ಸಂಘವು ನಮ್ಮಂತಹ ನೂರಾರು ಕುಟುಂಬಗಳ ಕಷ್ಟಗಳಿಗೆ ದಾರೀದೀಪವಾಗಿದೆ ಎಂದರು.ಗ್ರಾಮಾಭಿವೃದ್ದಿ ಯೋಜನೆಯ ಮೇಲ್ವಿಚಾರಕ ಉಮೇಶ್, ಜಿ.ಎಸ್‌.ಪಿಳ್ಳೈ ಗ್ರೂಪ್ಸ್‌ ನ ಅಧ್ಯಕ್ಷ ಸುಧೀರ ನಾಯರ್, ಶಿಕ್ಷಕಿ ಜ್ಯೋತಿ ಪಟಗಾರ ಇದ್ದರು. 



ಸುದ್ದಿ ಓದಿ