ಸೌಂದತ್ತಿ

ಕನ್ನಡ ಜ್ಯೋತಿ ರಥ ಯಾತ್ರೆಗೆ ಸ್ವಾಗತ

ಕನ್ನಡ ಜ್ಯೋತಿ ರಥ ಯಾತ್ರೆಗೆ ಸ್ವಾಗತ

ಸವದತ್ತಿ 06: ಕರ್ನಾಟಕ ಸುವರ್ಣ ಸಂಭ್ರಮ-50ರ ಅಂಗವಾಗಿ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಎಂಬ ಘೋಷವಾಕ್ಯದೊಂದಿಗೆ ರಾಜ್ಯಾದ್ಯಂತ ಸಂಚರಿಸುತ್ತಿರುವ ಕನ್ನಡ ಜ್ಯೋತಿ ರಥ ಯಾತ್ರೆಯನ್ನು ಇಲ್ಲಿನ ಎಪಿಎಂಸಿ ವೃತ್ತದಲ್ಲಿ ಬುಧವಾರ ತಾಲೂಕು ಆಡಳಿತದಿಂದ ಭುವನೇಶ್ವರಿ ಪ್ರತಿಮೆಗೆ ಪೂಜೆ ಸಲ್ಲಿಸಿ ಅದ್ದೂರಿ ಸ್ವಾಗತ ಕೋರಲಾಯಿತು.

ತಹಸೀಲ್ದಾರ ಎಮ್‌.ಎನ್‌.ಹೆಗ್ಗನ್ನವರ ಮಾತನಾಡಿ, ನವೆಂಬರ್ ನಲ್ಲಿ ಮಾತ್ರ ಕನ್ನಡ ಪ್ರೇಮ ಸೀಮಿತವಾಗದಿರಲಿ. ಕನ್ನಡ ನಮ್ಮಲ್ಲರ ಉಸಿರಾಗಿರಲಿ.ನಾಡು,ನುಡಿಗೆ ಎಲ್ಲರೂ ಗೌರವಿಸೋಣ ಎಂದರು. ಕಸಾಪ ಅದ್ಯಕ್ಷ ವಾಯ್‌.ಎಮ್‌.ಯಾಕೆಣಟಿಜಜಜಿಟಿಜಜಳ್ಳಿ ಮಾತನಾಡಿ, ಮಹಾತ್ಮಾ ಗಾಂಧೀಜಿ ಮತ್ತು ಶಾಸ್ತ್ರಿ ಅವರ ಜಯಂತಿಯಂದು ಕನ್ನಡ ಜ್ಯೋತಿ ರಥಯಾತ್ರೆ ಆಗಮನ ಸಂತಸ ತಂದಿದೆ ಎಂದರು.ಈ ವೇಳೆ ಮುರುಘೇಂದ್ರ ಶ್ರೀಗಳು,ತಾಪಂ ಇಓ ಆನಂದ ಬಡಕುಂದ್ರಿ, ಮುಖ್ಯಾಧಿಕಾರಿ ಸಂಗನಬಸಯ್ಯ ಗದಗಿಮಠ ,ಸಿಡಿಪಿಓ ಸುನೀತಾ ಪಾಟೀಲ,ವಕೀಲರ ಸಂಘದ ಅಧ್ಯಕ್ಷ ಎಮ್‌. ಎನ್ .ಮುತ್ತಿನ ,ಬಸವರಾಜ ಅಯ್ಯನಗೌಡ್ರ, ಆರ್‌.ಎ. ಪಾಟೀಲ, ಆರ್‌.ಬಿ. ರಕ್ಕಸಗಿ, ವಾಯ್‌.ಬಿ. ಕಡಕೋಳ ಹಾಗೂ ಪ್ರಮುಖರು ಇದ್ದರು. 


ಸುದ್ದಿ ಓದಿ