ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ
ಬ್ಯಾಡಗಿ 10: ಶಾಲಾ ಸಂಸತ್ತು ರಚಿಸುವ ಮೂಲಕ ಸಂಸದೀಯ ವ್ಯವಸ್ಥೆಯಲ್ಲಿ ಚುನಾವಣೆಯ ಪ್ರಾಮುಖ್ಯತೆ, ಚುನಾಯಿತ ಪ್ರತಿನಿಧಿಗಳ ಪಾತ್ರ ಸೇರಿದಂತೆ ಹಲವಾರು ಪ್ರಮುಖ ಪರಿಕಲ್ಪನೆಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಲು ಸರ್ಕಾರ ಅವ ಕಾಶ ಕಲ್ಪಿಸಿರುವುದು ಅತ್ಯಂತ ಸ್ವಾಗತಾರ್ಹ ನಿರ್ಧಾರವಾಗಿದೆ ಎಂದು ಕನ್ನಡ ಪ್ರಾಧ್ಯಾಪಕ ಜೀವರಾಜ ಛತ್ರದ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಎಸ್ಜೆಜೆಎಮ್ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಏರಿ್ಡಸಿದ್ದ ಶಾಲಾ ಸಂಸತ್ತು ಉದ್ಘಾಟನೆ ಮತ್ತು ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಜಾಸತ್ತಾತ್ಮಕವಾಗಿ ವಿದ್ಯಾರ್ಥಿ ಪ್ರತಿನಿಧಿಗಳನ್ನು ಆಯ್ಕೆ ಮಾಡಿ ಅವರಲ್ಲಿ ನಾಯಕತ್ವ ಗುಣಗಳು ಮತ್ತು ಸಂವಹನ ಕೌಶಲ್ಯ ಅಭಿವೃದ್ಧಿಪಡಿಸುವ ಮೂಲಕ ಶಾಲಾ ನೀತಿಗಳ ಕುರಿತು ಆಲೋಚನೆಗಳನ್ನು ಪ್ರಸ್ತುತಪಡಿಸಲು ಇದೊಂದು ಉತ್ತಮ ಅವಕಾಶವಾಗಿದೆ ಎಂದರು.
ಅಸೆಂಬ್ಲಿಯಲ್ಲಿ ಶಾಲೆಗಳ ಪ್ರಗತಿ ಕುರಿತು ಚರ್ಚೆಗಳು ಸಹಜ, ಆದರೆ ಶಾಲೆಯಲ್ಲೇ ವಿದ್ಯಾರ್ಥಿಗಳಿಂದ ಸಂಸತ್ತು ರಚಿ ಸುವ ಮೂಲಕ ಅಸೆಂಬ್ಲಿ ಬಗ್ಗೆ ಚರ್ಚೆ ನಡೆಸುವುದು ವಿದ್ಯಾರ್ಥಿಗಳಲ್ಲಿ ಸರ್ಕಾರದ ಕಲ್ಪನೆ ಮೂಡಲಿದೆ, ವಿದ್ಯಾರ್ಥಿಗಳಿಗೆ ಶಾಲಾ ಸಂಸತ್ತಿನ ಸ್ಥಾಪನೆ ಮತ್ತು ಕಾರಾ್ಯಚರಣೆ ನಡೆಸಲು ಶಿಕ್ಷಕರು ಸಂಪನ್ಮೂಲ ವ್ಯಕ್ತಿಗಳಾದಲ್ಲಿ ಇನ್ನೂ ಹೆಚ್ಚು ಪರಿಣಾ ಮಕಾರಿಯಾಗಲಿದೆ ಎಂದರು.
ಅಧಿವೇಶನಕ್ಕೆ ಮಕ್ಕಳು:ಅತಿಥಿಯಾಗಿ ಪಾಲ್ಗೊಂಡಿದ್ದ ಕ್ರೀಡಾರತ್ನ ಪ್ರಶಸ್ತಿ ಪುರಸ್ಕೃತೆ ಕಬಡ್ಡಿ ಕೋಚ್ ಮಂಜುಳ ಭಜಂತ್ರಿ ಮಾತನಾಡಿ, ಅಸೆಂಬ್ಲಿ ಶಿಕ್ಷಣ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಅತ್ಯಂತ ಸಹಕಾರಿ, ಅಣಕು ಚುನಾವಣೆಗಳು ವಿದ್ಯಾ ರ್ಥಿಗಳಲ್ಲಿ ಹೆಚ್ಚು ಕುತೂಹಲ ಮೂಡಿಸಲಿದೆ, ವಿಧಾನಸಭೆಯ ಸದಸ್ಯರೊಂದಿಗೆ (ಎಂಎಲ್ಎ) ಅಧಿವೇಶನಗಳಲ್ಲಿ ಭಾಗ ವಹಿಸಲು ಶಾಲೆ ಸಂಸತ್ತು ಸದಸ್ಯರನ್ನು ಸಿದ್ದಪಡಿಸಿದಲ್ಲಿ ಸದರಿ ಕಾರ್ಯಕ್ರಮ ಇನ್ನಷ್ಟು ಅರ್ಥಪೂರ್ಣವಾಗಲಿದೆ ಎಂದರು.
ಇದೇ ಸಂದರ್ಭದಲ್ಲಿ ಕ್ರೀಡಾರತ್ನ ಪ್ರಶಸ್ತಿ ಪುರಸ್ಕೃತೆ ಕಬಡ್ಡಿ ಕೋಚ್ ಮಂಜುಳ ಭಜಂತ್ರಿ ಅವರನ್ನು ಸನ್ಮಾನಿಸಿ ಗೌರ ವಿಸಲಾಯಿತು. ಪ್ರಾಚಾರ್ಯ ಮಾಲತೇಶ ಬಂಡೆಪ್ಪನರ ಅಧ್ಯಕ್ಷತೆ ವಹಿಸಿದ್ದರು, ಕಾರ್ಯಕ್ರಮದಲ್ಲಿ ಶಿಕ್ಷಕರಾದ ಡಿ.ಬಿ.ಕುಸಗೂರ, ಎನ್.ಎಲ್.ಬೆನ್ನೂರ, ಉಮೇಶ ಕ್ಷೌರದ, ಆರ್.ಎಂ.ಲಿಂಗದಳ್ಳಿ, ರತ್ನಮ್ಮ ಗುದಗಿ, ಸರೋಜ ಶೇತಸನದಿ, ವಿನಾಯಕ ತುಮರಿಕೊಪ್ಪ, ಜ್ಯೋತಿ ಜಾಧವ, ನಿಂಬವ್ವ ಚಕ್ಕಡಿ ಹಾಗೂ ಇನ್ನಿತರರರು ಉಪಸ್ಥಿತರಿದ್ದರು.