ಸನ್ಮತಿ ಕಾಲೇಜಿನಲ್ಲಿ ನೂತನ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ
ಕಾಗವಾಡ, 19 : ಶಿಕ್ಷಣ ಎಂದರೆ ಅಕ್ಷರಗಳನ್ನು ಕಲಿಯುವುದಲ್ಲ. ನಮ್ಮಲ್ಲಿರುವ ಅರಿವನ್ನು ವೃದ್ಧಿಸಿ, ಪ್ರಭುದ್ಧರಾಗಿ ಪರಿವರ್ತನೆ ಗೊಳ್ಳುವುದೇ ಶಿಕ್ಷಣದ ಸಾರವಾಗಿದೆ ಎಂದು ಅಥಣಿಯ ಖ್ಯಾತ ಸಾಹಿತಿಗಳಾದ ಡಾ. ಬಾಳಸಾಹೇಬ ಲೋಕಾಪುರೆ ಹೇಳಿದ್ದಾರೆ.
ಅವರು ಶುಕ್ರವಾರ ದಿ. 18 ರಂದು ತಾಲೂಕಿನ ಶೇಡಬಾಳ ಪಟ್ಟಣದ ಸನ್ಮತಿ ಶಿಕ್ಷಣ ಸಹಕಾರಿ ಸಮಿತಿಯ ಪದವಿ ಪೂರ್ವ ಮತ್ತು ಪದವಿ ಕಾಲೇಜಿನ ಸನ್ 2025-26 ನೇ ಸಾಲಿನ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಗಳ ಉದ್ಘಾಟನೆ ಹಾಗೂ ನೂತನ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದರು.
ಕಾರ್ಯಕ್ರಮವನ್ನು ಸರಸ್ವತಿ ದೇವಿ ಪೂಜೆಯೊಂದಿಗೆ ಸಸಿಗೆ ನೀರಿರದು ಚಾಲನೆ ನೀಡಲಾಯಿತು. ಬಳಿಕ ಗಣ್ಯರನ್ನು ಸನ್ಮಾನಿಸಲಾಯಿತು.
ಈ ಸಮಯದಲ್ಲಿ ಅತಿಥಿಗಳಾಗಿ ಡಾ. ಶೀತಲ ನ್ಯಾಮಗೌಡರ, ಸನ್ಮತಿ ಸಹಕಾರಿ ಶಿಕ್ಷಣ ಸಮಿತಿಯ ಅಧ್ಯಕ್ಷ ವಿನೋದ ಬರಗಾಲಿ, ಉಪಾಧ್ಯಕ್ಷ ಅಜೀತ ನಾಂದ್ರೆ, ಸನ್ಮತಿ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷರಾದ ರಾಘವೇಂದ್ರ ಸಂಗೋರಾಮ, ಸನ್ಮತಿ ಸಹಕಾರ ಶಿಕ್ಷಣ ಸಮಿತಿಯ ನಿರ್ದೇಶಕರಾದ ಡಾ. ಅಶೋಕ ಪಾಟೀಲ, ಅಶ್ವಥ ಪಾಟೀಲ, ಸನ್ಮತಿ ವಿದ್ಯಾಲಯದ ಗೌವರ್ನಿಂಗ್ ಬಾಡಿ ಸದಸ್ಯರಾದ ನೇಮಗೌಡಾ ಪಾಟೀಲ, ಯಶವಂತ ಜಾಧವ, ನಿವೃತ್ ಪ್ರಾಚಾರ್ಯ ಕೆ.ಬಿ. ಸಮಾಜ, ಹಾಲಿ ಪ್ರಾಚಾರ್ಯ ಬಾಹುಬಲಿ ಬಣಜವಾಡೆ, ಸಂಸ್ಥೆಯ ಸಿಇಓ ಸತೀಶ ಪಾಟೀಲ ಸೇರಿದಂತೆ ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.