ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ
ಲೋಕದರ್ಶನ ವರದಿ
ಶಿಗ್ಗಾವಿ 08: ಪದವಿ ಪೂರ್ವಕಾಲೇಜು ಸುಸಜ್ಜಿತ ಗ್ರಂಥಾಲಯ ಇಲ್ಲದ ಕಾರಣ ಮಕ್ಕಳಿಗೆ ಅವಶ್ಯಕ ಅಧ್ಯಯನಕ್ಕೆ ಪುಸ್ತಕಗಳು ಲಭ್ಯವಾಗುತ್ತಿಲ್ಲ. ವಿದ್ಯಾರ್ಥಿಗಳ ಶಿಕ್ಷಣಕ್ಕೆ ಗ್ರಂಥಾಲಯಕ್ಕೆ ಅವಶ್ಯಕ ಪುಸ್ತಕ ಪೂರೈಸುವದಾಗಿ ಸಿ.ಬಿ.ಯಲಿಗಾರ ಸೇವಾ ಸಂಸ್ಥೆ ಅಧ್ಯಕ್ಷ ಶಶಿಧರ ಯಲಿಗಾರ ವಾಗ್ದಾನ ಮಾಡಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜನಲ್ಲಿ ಕಾಲೇಜ ವತಿಯಿಂದ ಆಯೋಜಿಸಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಹಾಗೂ 2021-22ನೇ ಸಾಲಿನ ಸಾಂಸ್ಕ್ರತಿಕ ಹಾಗೂ ಕ್ರೀಡಾ ಸಂಘದ ಉದ್ಘಾಟನಾ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಮಾಡುವ ಸೇವಾ ಕಾಯಕ ಹೆಚ್ಚಿನ ತೃಪ್ತಿ ನೀಡಿದ್ದು, ಅದರಿಂದ ಇತರರಿಗೂ ಸ್ಪೂರ್ತಿಯಾಗಲಿ ಎಂಬ ಮಹದಾಸೆ ನಮ್ಮದಾಗಿದೆ, ಪ್ರಾಮಾಣಿಕವಾಗಿ ಗಳಿಸಿದ ಸಂಪತ್ತಿನಲ್ಲಿ ಅಲ್ಪಭಾಗವನ್ನು ದಾನ ಮಾಡುವುದು ಮುಖ್ಯವಾಗಿದೆ, ಕೆಎಸ್ಆರ್ಟಿಸಿ ಡೀಪೋ ಅಧಿಕಾರಿಗಳ ವಿಳಂಬ ಮತ್ತು ಕೆಲ ಶಾಲಾ ಕಾಲೇಜಗಳ ಪ್ರಾಚಾರ್ಯರ ನಿರಾಶಕ್ತಿಯಿಂದ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಪಾಸ್ ವಿತರಿಸಲು ಸಾಧ್ಯವಾಗುತ್ತಿಲ್ಲ ಎಂದರು.
ಉಪನ್ಯಾಸಕ ಎಂ.ಆರ್.ಚೂರಿ ಪ್ರಾಸ್ತಾವಿಕವಾಗಿ ಮಾತನಾಡಿ 2007 ರಲ್ಲಿ ಕೇವಲ 54 ವಿದ್ಯಾರ್ಥಿಗಳಿದ್ದ ಕಾಲೇಜು 675 ರಷ್ಟು ದಾಖಲಾತಿ ಪ್ರವೇಶ ಪಡೆದುಕೊಂಡಿದೆ. ಸರಕಾರವೇ ಎಲ್ಲಾ ಅವಶ್ಯಕತೆಯನ್ನು ಪೂರೈಲಾರದು ಆದ್ದರಿಂದ ದಾನಿಗಳು ಮಕ್ಕಳ ಶಿಕ್ಷಣಕ್ಕೆ ಸೌಲಭ್ಯತೆ ಕಲ್ಪಿಸಿದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ ಎಂದರು.
ಶಾಲಾ ಅಭಿವೃದ್ಧಿ ಅಧ್ಯಕ್ಷ ಫಕ್ಕೀರಜ್ಜ ಯಲಿಗಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಂಶುಪಾಲ ಉಮೇಶ ಪಾಟೀಲ, ಶಶಿಧರ ಯಲಿಗಾರ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ವಿನೋದಾ ಬೆನಕಣ್ಣವರ ಪ್ರಾಂಶುಪಾಲ ಲೋಕೇಶ ಬಿ.ರಂಜಾನಕಿಲ್ಲೇದಾರ. ಉಮೇಶ ಹೊನ್ನಣ್ಣವರ, ರಮೇಶ ಹಿತ್ತಲದವರ. ಭೂಷಣ, ಅಂಜಿನಪ್ಪ, ಉಪನ್ಯಾಸಕಿಅಕ್ಕಮ್ಮಾ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.