ವಿಕೇಂಡ್ ಕರ್ಫ್ಯೂ ನಿಯಮ ಪಾಲಿಸಿ ಸೋಂಕು ತಡೆಗಟ್ಟಲು ಮನವಿ
ಕಾರವಾರ 23: ಅತಿ ವೇಗವಾಗಿ ಹಬ್ಬುತ್ತಿರುವ ಕೊರೋನಾ ಸೊಂಕನ್ನು ಕಟ್ಟಿಹಾಕಲು ವೀಕೆಂಡ್ ಕರ್್ಯೂ ಹಾಗೂ ಸೆಮಿ ಲಾಕ್‌ಡೌನ್ ರೀತಿಯ ಮಾರ್ಗಸೂಚಿಗಳನ್ನು ಸರಕಾರ ಹೊರಡಿಸಿದ್ದು, ಸಾರ್ವಜನಿಕರು ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಸರಕಾರದ ಜೊತೆಗೆ ಸಹಕರಿಸಲು ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಮನವಿ ಮಾಡಿದ್ದಾರೆ.
ಕೊರೋನಾ ಸೋಂಕಿನ ಎರಡನೇ ಅಲೆ ಇಡೀ ದೇಶ-ರಾಜ್ಯ ಹಾಗೂ ಜಿಲ್ಲೆಯಾದ್ಯಂತ ಅತಿ ವೇಗವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವು ಅನಿವಾರ್ಯವಾಗಿ ಏಪ್ರಿಲ್ 21 ರಿಂದ ಮೇ 4ರವರೆಗೆ ಕಠಿಣ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ. ವಿಶೇಷವಾಗಿ 57 ಗಂಟೆಗಳ ಕಾಲ ಶುಕ್ರವಾರ ರಾತ್ರಿ 9 ರಿಂದ ಸೋಮವಾರ ಬೆಳಿಗ್ಗೆ 6 ಗಂಟೆವರೆಗೆ ವೀಕೆಂಡ್ ಕರ್್ಯೂ ಜಾರಿಯಾಗಿರುವುದು. ಆದ್ದರಿಂದ ಸಾರ್ವಜನಿಕರು ವಿನಾಕಾರಣ ಮನೆಯಿಂದ ಹೊರಗೆಬಾರದೇ ಕೊವಡ್ ನಿಯಂತ್ರಣದ 3 ಮಂತ್ರಗಳಾಗಿರುವ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು ಹಾಗೂ ಸ್ಯಾನಿಟೈಜರ್ ಬಳಸಲು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಮೇ 1 ರಿಂದ 18 ವರ್ಷದಿಂದ 44 ವರ್ಷದ ಒಳಗಿನವರು ಲಸಿಕೆ ತೆಗೆದುಕೊಳ್ಳಲು ಕೇಂದ್ರ ಸರ್ಕಾರ ಅನುಮತಿ ನೀಡಿರುವ ಈ ಹಿನ್ನೆಲೆಯಲ್ಲಿ ಏಪ್ರಿಲ್ 28 ರಿಂದ ಲಸಿಕೆ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ. ಕಾರಣ ಆನ್‌ಲೈನಲ್ಲಿ ಯುವ ಜನತೆಗೆ ನೋಂದಣಿ ಮಾಡಿಸಿಕೊಳ್ಳಲು ವಿಧಾನ ಪರಿಷತ್ ಸದಸ್ಯರಾದ ಎಸ್.ವಿ. ಸಂಕನೂರ ವಿನಂತಿಸಿಕೊಂಡಿದ್ದಾರೆ.