ವೀಕ್ಎಂಡ್ ಕರ್ಫ್ಯೂಗೆ ಸ್ಥಬ್ದವಾದ ಬನವಾಸಿ
ಬನವಾಸಿ 24: ಕರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಕೋವಿಡ್ ನಿಯಂತ್ರಣಕ್ಕಾಗಿ ಆದೇಶಿಸಿರುವ ವೀಕ್ ಎಂಡ್ ಕರ್್ಯೂಗೆ ಬನವಾಸಿ ಪಟ್ಟಣವೂ ಶನಿವಾರ ಸ್ಥಬ್ದವಾಗಿ ಎಲ್ಲ ವ್ಯಾಪಾರ ವಾಹಿವಾಟುಗಳು ಸಂಪೂರ್ಣ ಬಂದ್ ಆಗಿದ್ದವು.
ಕರ್ಫ್ಯೂ ಹಿನ್ನಲೆಯಲ್ಲಿ ಮುಂಜಾನೆ 6 ಗಂಟೆಯಿಂದ 10ರ ತನಕ ದಿನಬಳಕೆಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿತ್ತು. ನಂತರ ಅಗತ್ಯ ಸೇವೆಯಾದ ಓಷಧಿ ಅಂಗಡಿಯನ್ನು ಹೊರತು ಪಡಿಸಿ ಉಳಿದ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಲಾಗಿತ್ತು. ವಾಹನ ಸಂಚಾರವಿಲ್ಲದೇ ರಸ್ತೆಗಳು ಬಿಕೋ ಎನ್ನುತ್ತಿತ್ತು. ಬನವಾಸಿ ಪೊಲೀಸ್ ಠಾಣೆಯ ಪಿಎಸ್ಐ ಹನುಮಂತ ಬಿರಾದರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳು ಅನಗತ್ಯವಾಗಿ ಹೊರಗಡೆ ತಿರುಗಾಡುವವರಿಗೆ, ಮಾಸ್ಕ್ ಧರಿಸದೇ ಬಂದವರಿಗೆ ಎಚ್ಚರಿಕೆ ನೀಡಿದರು.
ಬನವಾಸಿಯಲ್ಲಿ ಕೊರೋನ ಸೊಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಗ್ರಾಮ ಪಂಚಾಯಿತಿ ಹಾಗೂ ಆರೋಗ್ಯ ಇಲಾಖೆ ಯಾವೂದೇ ತರಹದ ಜಾಗೃತಿ ಮೂಡಿಸುವ ಕಾರ್ಯ ಕೈಗೊಳ್ಳದೇ ಮೌನವಹಿಸಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.