ರಾಣೆಬೆನ್ನೂರ

ಸಂವಿಧಾನ ಬದ್ಧವಾಗಿ ಮತದಾನ ಮಾಡುವ ಮೂಲಕ ದೇಶದ ಪ್ರಗತಿಗೆ ಸಹಕರಿಸಬೇಕು

ಸಂವಿಧಾನ ಬದ್ಧವಾಗಿ ಮತದಾನ ಮಾಡುವ ಮೂಲಕ ದೇಶದ ಪ್ರಗತಿಗೆ ಸಹಕರಿಸಬೇಕು

ರಾಣಿಬೆನ್ನೂರು 19:  ದೇಶದಲ್ಲಿರುವ ಪ್ರತಿಯೊಬ್ಬರೂ ಸಂವಿಧಾನ ಬದ್ಧವಾಗಿ ಮತದಾನ ಮಾಡುವ ಮೂಲಕ ದೇಶದ ಪ್ರಗತಿಗೆ ಸಹಕರಿಸಬೇಕು.  ಕನ್ಯಾ ದಾನಕ್ಕಿಂತ ಮತದಾನ ಶ್ರೇಷ್ಠವಾಗಿದ್ದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸರ್ವರೂ ಕಡ್ಡಾಯವಾಗಿ ಮತದಾನ ಮಾಡಬೇಕೆಂದು ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಜೆ.ಎಂ. ಮಠದ ಹೇಳಿದರು. 

ಸೋಮವಾರ ಇಲ್ಲಿನ ಶಿಕ್ಷಕರ ಸಂಘದಲ್ಲಿ ಏರಿ​‍್ಡಸಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮತದಾರರು ಆಸೆ, ಆಮೀಷಗಳಿಗೆ ಒಳಗಾಗದೆ, ಪಕ್ಷಾತೀತವಾಗಿ ಮತದಾನದಲ್ಲಿ ತೊಡಗಬೇಕು. ಪ್ರತಿಯೊಬ್ಬರು ಮತದ ಮಹತ್ವ ಅರಿತು ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಮನೋಭಾವ ಎಲ್ಲರಲ್ಲೂ ಬರಬೇಕು ಎಂದರು.  

ಸಂವಿಧಾನದಲ್ಲಿ ಪ್ರಜೆಯು ಮುಖ್ಯಪಾತ್ರ ವಹಿಸಲಿದ್ದು, ಮತದಾರ ಮತಿ ಭ್ರಮಣೆಯಾಗದೇ  ಸದಾ ದೇಶದ ಬಗ್ಗೆ ಕಳಕಳಿ ಹೊಂದಬೇಕು. ಆಯ್ಕೆಯಾಗುವ ಉತ್ತಮ ಸೇವಕನ ಬಗ್ಗೆ ಸದಾ ಚಿಂತನೆ ಮಾಡಬೇಕು. ಮತದಾರರು ಮತದಾನ ಮಾಡಲು ನಿರಾಶಕ್ತಿ, ನಿರ್ಲಕ್ಷ ತೋರಬಾರದು. ಸತ್ತವರ ಹೆಸರಿನಲ್ಲಿ ಹಾಗೂ ಬೇರೆಯವರ ಹೆಸರಿನಲ್ಲಿ ಮತ ಹಾಕುವುದು ಪ್ರಜಾತಂತ್ರಕ್ಕೆ ದ್ರೋಹ ಬಗೆದಂತೆ ಎಂದರು. 

ಪ್ರಜಾಪ್ರಭುತ್ವದಲ್ಲಿ ಉತ್ತಮ ನಾಯಕನನ್ನಾಗಿ ಆಯ್ಕೆ ಮಾಡುವ ಗುರುತರವಾದ ಜವಾಬ್ದಾರಿ ಮತದಾರರಲ್ಲಿದ್ದು, ಮಹಾತ್ಮಾ ಗಾಂಧಿ, ಬಸವೇಶ್ವರ, ಪೈಗಂಬರ, ಬುದ್ಧ, ಏಸುಕ್ರಿಸ್ತ ಮತ್ತು ಮಹಾತ್ಮರ ಆದರ್ಶಗಳನ್ನು ಸರ್ವರೂ ಪಾಲಿಸಿ ಈ ದೇಶದ ಉಳಿವಿಗಾಗಿ, ಉತ್ತಮ ನಾಯಕನ ಆಯ್ಕೆಗಾಗಿ ಸರ್ವರೂ ಮತ ಹಾಕುವ ಮೂಲಕ ದೇಶದ ಪ್ರಗತಿಗೆ ಸಹಕರಿಸಬೇಕು ಎಂದರು. 

ಯುವ ನ್ಯಾಯವಾದಿ ಜಯಶ್ರೀ ಜಂಬಿಗಿ ಮಾತನಾಡಿ, ಪ್ರತಿಯೊಬ್ಬರೂ ಮತದಾನ ಮಾಡುವುದು ಕಡ್ಡಾಯವಾಗಿದೆ. ಭಾರತೀಯ ಪ್ರತಿಯೊಬ್ಬ ಪ್ರಜೆಗಳಲ್ಲೂ ಜಾಗೃತಿ ಮೂಡಿಸುವ ಕಾಯಕವನ್ನು  ಮಾಡಬೇಕು. ರಾಮರಾಜ್ಯದ ಕನಸು ನನಸಾಗಿಸಲು ಸರ್ವರೂ ಮತದಾನ ಮಾಡಿ ದೇಶದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ವಿನಂತಿಸಿದರು 


ಸುದ್ದಿ ಓದಿ