ಅಭಿವೃದ್ಧಿಗೆ ನಿಮ್ಮೆಲ್ಲರ ಸಹಕಾರಬೇಕು ; 12 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಶಾಸಕ ಸೋಮನಗೌಡ ಪಾಟೀಲ ಭೂಮಿ ಪೂಜೆ
ತಾಳಿಕೋಟಿ 16: ದೇ.ಹಿಪ್ಪರಗಿ ಮತಕ್ಷೇತ್ರದ 120 ಗ್ರಾಮಗಳ ರೈತರಿಗಾಗಿ ನಿರಾವರಿ ಯೋಜನೆಗಳ ಅನುಷ್ಟಾನ, ಕೆರೆ ತುಂಬುವುದು ಹಾಗೂ ಎಲ್ಲ ಗ್ರಾಮಗಳಿಗೂ ಸುಸಜ್ಜಿತವಾದ ರಸ್ತೆಗಳ ನಿರ್ಮಾಣಕ್ಕಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೆನೆ. ಇನ್ನೂ ಹೆಚ್ಚಿನ ಕೆಲಸಗಳನ್ನು ಮಾಡಲು ನಿಮ್ಮೆಲ್ಲರ ಸಹಕಾರ ನನಗೆ ಬೇಕು ಎಂಧು ಶಾಸಕ ಸೋಮನಗೌಡ ಪಾಟೀಲ(ಸಾಸನೂರ) ತಿಳಿಸಿದರು.
ತಾಲೂಕಿನ ಶರಣಸೋಮನಾಳ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ಉಪ ವಿಭಾಗ ಬಸವನ ಬಾಗೇವಾಡಿ ಇವರು ಹಮ್ಮಿಕೊಂಡ ವಿಜಯಪೂರ-ಉಕ್ಕಲಿ-ದಿಂಡವಾರ-ಸಾಸನೂರ ರಾಜ್ಯ ಹೆದ್ದಾರಿ ಕಿ.ಮೀ. 56.50 ರಿಂದ 62.97ವರೆಗಿನ ರೂ.12ಕೋಟಿ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ನಂತರ ಗ್ರಾಮಸ್ಥರು ಏರಿ್ಡಸಿದ ಸಮಾರಂಭದಲ್ಲಿ ಅವರು ಮಾತನಾಡಿದರು.
ಮತಕ್ಷೇತ್ರದಲ್ಲಿ ಈಗಾಗಲೇ 30 ಕೆರೆಗಳನ್ನು ಭರ್ತಿಮಾಡಲು ಕ್ರಮ ಕೈಗೋಳ್ಳಲಾಗಿದೆ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಸಿಗುವಂತಾಗಲು ಕೆಂದ್ರದ ಮಹತ್ವಾಕಂಕ್ಷೆಯ ಯೋಜನೆಯಾದ ಜೆಜೆಎಮ್ನ್ನು ಅನುಷ್ಟಾನದಲ್ಲಿ ತರಲಾಗಿದೆ. ಹುಣಶ್ಯಾಳ ಹಾಗೂ ಕುದರಗೊಂಡ ಕೆರೆ ತುಂಬಿಸುವ ಕಾಮಗಾರಿ ಪ್ರಗತಿ ಹಂತದಲ್ಲಿದೆ. ರೂ 796ಕೋಟಿಯ ಮಹತ್ವದ ಪೀರಾಪೂರ ಏತನೀರಾವರಿ ಯೋಜನೆ ಮಾರ್ಚ ಅಂತ್ಯೆಕ್ಕೆ ಮುಕ್ತಾಯಗೊಂಡು ರೈತರ ಜಮೀನುಗಳಿಗೆ ನೀರು ಹರಿಯಲಿದೆ. ಮುಂದಿನ ತಿಂಗಳು ಈ ಭಾಗದ ಅಗಸಬಾಳ ಕೆರೆ ತುಂಬಿಸುವ ಕೆಲಸ ಆರಂಭವಾಗುತ್ತದೆ ದಿಂಡವಾರ-ಕಣಕಾಲ ಗ್ರಾಮದಲ್ಲಿ 110/ಕೆ.ವಿ ವಿದ್ಯುತ್ ಸ್ಥಾವರ ಘಟಕ ಸ್ಥಾಪಿಸಲಾಗುವುದು ಎಂದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ರಮೇಶ ಮಸಬಿನಾಳ, ಲೋಕೋಪಯೋಗಿ ಇಲಾಖೆ ಎಇಇ ಜೆ ವಿ ಕಿರಸೂರ, ಮಾತನಾಡಿದರು. ಸಾನಿಧ್ಯ ವಹಿಸಿದ್ದ ಡಾ. ಶಿವಪುತ್ರ್ಪ ಮಹಾಸ್ವಾಮಿಗಳು ಹಾಗೂ ವೇ.ಮೂ. ಮಹಾದೇವಯ್ಯ ಶಾಸ್ತ್ರಿಗಳು ಆಶಿರ್ವಚನ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮದ ಗಣ್ಯರಾದ ಬಾಪುಗೌಡ ಧನ್ನೂರ, ರಾಮನಗೌಡ ಪಾಟೀಲ, ಮಲ್ಲನಗೌಡ ನಾಡಗೌಡರ, ಎಮ್ ಎನ್ ಬಿರಾದಾರ, ಮಲ್ಲಣ ಖಾನಾಪುರ, ಗುರುರಾಜ ಗುಡಿಮನಿ, ಭಿಮನಗೌಡ ಸಿದರಡ್ಡಿ, ಮಂಜುನಾಥ ಹೊಸಗೌಡರ, ಸಂಗನಗೌಡ ಧನ್ನೂರ, ಬಸಲಿಂಗಪ್ಪ ಇಂಗಳಗಿ, ಎಇಇ ಎಸ್ ಜಿ ದೊಡಮನಿ, ವೈದ್ಯಾಧಿಕಾರಿ ಡಾ. ಎನ್ ಎಸ್ ಬಿರಾದಾರ, ಸಿ ಎಸ್ ಕಚನೂರ, ಗುತ್ತಿಗೆದಾರ ಎ ಬಿ ನರಸರಡ್ಡಿ ಮತ್ತೀತರರು ಉಪಸ್ಥಿತರಿದ್ದರು.