ಸಿಂಧಗಿ

ಎಲ್ಲ ಸಮಾಜದೊಂದಿಗೆ ಬೇರೆಯಲು ಪ್ರಯತ್ನಿಸುತ್ತಿದ್ದೇವೆ: ಅಧ್ಯಕ್ಷ ಕೂಚಬಾಳ

ಎಲ್ಲ ಸಮಾಜದೊಂದಿಗೆ ಬೇರೆಯಲು ಪ್ರಯತ್ನಿಸುತ್ತಿದ್ದೇವೆ: ಅಧ್ಯಕ್ಷ ಕೂಚಬಾಳ

ಸಿಂದಗಿ 27: ಸಿಂದಗಿಯ ದಲಿತರ ಮೇಲೆ ನಡೆಸುತ್ತಿರುವ ಹಲ್ಲೆಗಳಾದರು ಜಾತಿ ನಿಂಧನೆಯ ದೂರುಗಳು ನಾವು ಸ್ವ-ಪ್ರೇರಿತವಾಗಿ ದಾಖಲೆ ಮಾಡುತ್ತಿಲ್ಲ, ನಾವು ಶಾಂತಿಯುತವಾಗಿ ಬಾಳಲು ಎಲ್ಲ ಸಮಾಜದೊಂದಿಗೆ ಬೇರೆಯಲು ಪ್ರಯತ್ನಿಸುತ್ತಿದ್ದೇವೆ ಕಸಾಪ ಅಧ್ಯಕ್ಷ ರಾಜಶೇಖರ ಕೂಚಬಾಳ ಹೇಳಿದರು. 

             ನಗರದ ಬಿ.ಆರ್‌.ಅಂಬೇಡ್ಕರ್ ಭವನದಲ್ಲಿ ಪೊಲೀಸ್ ಇಲಾಖೆಯ ವತಿಯಿಂದ ಹಮ್ಮಿಕೊಂಡ ದಲಿತ ಸಮುದಾಯದ ಕೊಂದು-ಕೊರತೆಗಳ ಸಭೆಯಲ್ಲಿ ಮಾತನಾಡಿದರು. ಜಿಲ್ಲಾ ಜಾಗೃತ ಸಮಿತಿ ಸದಸ್ಯನಾಗಿ ಐದು ವರ್ಷ ಕಳೆದರು ಇದುವರೆಗೂ ದಲಿತ ಸಭೆಗೆ ಒಂದು ಬಾರಿಯು ಆಹ್ವಾನಿಸದೇ ಇರುವುದು ಪೊಲೀಸ ಇಲಾಖೆ ವಿಪಲವಾಗಿದೆ ಎಂಬುದು ಸ್ಪಷ್ಟವಾಗಿ ಕಾಣಿಸುತ್ತದೆ. ಇದರ ಲಾಭ ತೆಗೆದುಕೊಳ್ಳುತ್ತಿರುವ ಹಲವು ವ್ಯಾಘ್ರ ಮನಸ್ಥಿತಿಯವರು ಅದರ ಲಾಭ ಪಡೆಯುತ್ತಿದ್ದು, ಅಂತಹವರನ್ನು ಗುರುತಿಸಿ ಬುಡ ಸಮೇತ ಕಿತ್ತೆಸೆಯಬೇಕು ಎಂದು ಆಗ್ರಹಿಸಿದರು. 

            ಇದೇ ಸಂದರ್ಭದಲ್ಲಿ ದಸಂಸ ಜಿಲ್ಲಾ ಸಂಚಾಲಕ ವಾಯ್‌.ಸಿ.ಮಯೂರ, ದಲಿತ ಮುಖಂಡ ಅಶೋಕ ಸುಲ್ಪಿ ಮಾತನಾಡಿ ದಲಿತರ ಮೇಲೆ ಹಲವು ರೀತಿಯ ಹಲ್ಲೆ ದೌರ್ಜನ್ಯಗಳು ನಡೆಯುತ್ತಿದ್ದು ಕಾನೂನು ಸುವ್ಯವಸ್ಥೆ ತಾಲೂಕಿನಲ್ಲಿ ಅಸ್ತಿತ್ವ ಕಳೆದುಕೊಂಡಿದೆ. ದಿನದಿಂದ ದಿನಕ್ಕೆ ಅಕ್ರಮ ಮಧ್ಯಪಾನ, ಮಾದಕ ವಸ್ತು ಸೇವನೆ ಮತ್ತು ಮಾರಟ ಹೇಚ್ಚಾಗುತ್ತಿದ್ದು ಅದಕ್ಕೆ ಕಡಿವಾಣ ಹಾಕದಿದ್ದರೆ ಸಮಾಜಕ್ಕೆ ಮಾರಕವಾಗುವ ಸಂಭವ ಹೆಚ್ಚಿದೆ. ಇದರಿಂದ ಬಹುತೇಕ ಜೀವ ಹಾನಿ ಸಂಭವಿಸಿವೆ ಇದರಿಂದ ಹಲವಾರು ಕುಟುಂಬಗಳು ಬೀದಿಗೆ ಬಂದಿವೆ. ಮುಂದಿನ ದಿನಮಾನಗಳಲ್ಲಿ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ ಎಲ್ಲ ಸಮುದಾಯದವರನ್ನು ದಲಿತ ಸಭೆಗೆ ಆಹ್ವಾನಿಸಬೇಕು ಎಂದರು. 

           ಇದೇ ಸಂದರ್ಭದಲ್ಲಿ ಸಿಪಿಐ ರವಿ ಉಕ್ಕುಂದ ಮಾತನಾಡಿ, ಸಮಾಜದ ಹಿರಿಯರು ಮತ್ತು ಮುಖಂಡರ ಮಾತಿನಂತೆ ಮುಂದಿನ ದಿನಮಾನಗಳಲ್ಲಿ ಎಲ್ಲ ಸಮುದಾಯದವರನ್ನು ಸಭೆಗೆ ಕರೆಯುವ ಪ್ರಯತ್ನ ಮಾಡುತ್ತೇವೆ ಮತ್ತು ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ದಲಿತಕೇರಿಗೆ ಆಗಮಿಸಿ ಸಭೆ ನಡೆಸುತ್ತಿರುವುದು ಸಂತಸ ತಂದಿದೆ. ಪೊಲೀಸ ಠಾಣೆಯಲ್ಲಿ ದಲಿತ ಸಭೆ ಕರೆದರೆ 50 ಜನರು ಸೇರುವುದು ಕಷ್ಟ, ಅದರೆ ನಾವು ನಿಮ್ಮ ಮನೆ ಬಾಗಿಲಿಗೆ ಬಂದ ಹಾಗಿರುವಾಗ ನೂರಾರು ಜನ ಭಾಗವಹಿಸಿದ್ದು ಸಂತೋಷದ ಸಂಗತಿ ಎಂದು ಹೇಳಿದರು. 

            ಇದೇ ಸಂದರ್ಭದಲ್ಲಿ ಪಿಎಸ್‌ಐ ಸೋಮೇಶ ಗೆಜ್ಜಿ ಮಾತನಾಡಿ, ಹಲವು ಸೂಕ್ಷ್ಮ ವಿಚಾರಗಳು ತಾಲೂಕಿನಲ್ಲಿ ನಡೆಯುತ್ತಿದ್ದು ನನ್ನ ಗಮನಕ್ಕೆ ಬಂದಿವೆ ಅವುಗಳನ್ನು ಬುಡ ಸಮೇತ ಕಿತ್ತು ಹಾಕಲಾಗುವುದು. ಆಲಮೇಲ ಬಾಗದಲ್ಲಿ 1ಕೆ.ಜಿ ಗಾಂಜಾ ಹಾಗೂ 8ಕೆ.ಜಿ ಗಾಂಜಾ ದೇ.ಹೀಪ್ಪರಗಿಯಲ್ಲಿ ವಶ ಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ. ಅಕ್ಕಲಕೋಟ, ಸೋಲ್ಲಾಪುರ ಭಾಗಗಳಿಂದ ಬರುತ್ತಿರುವ ಪ್ರಕರಣಗಳನ್ನು ಬೇದಿಸಲಾಗಿದೆ  ಎಂದರು. 

           ಈ ವೇಳೆ  ಸಮಾಜದ ಹಿರಿಯರಾದ ಸಂಗಪ್ಪ ಕೂಚಬಾಳ, ವಿಠ್ಠಲ ಹೊಸಮನಿ, ಮಾನಿಂಗಪ್ಪ ಪೂಜಾರಿ ಹರ್ಷವರ್ದನ ಪೂಜಾರಿ, ಮಹಾವೀರ ಸುಲ್ಪಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 


ಸುದ್ದಿ ಓದಿ