ಮುದ್ದೆಬಿಹಾಲ್

ಸರ್ವರೂ ಒಂದೇ ಎಲ್ಲ ಜಾತಿಧರ್ಮಗಳು ಒಂದೇ ನಾವೇಲ್ಲ ಭಾರತೀಯರು

ಸರ್ವರೂ ಒಂದೇ ಎಲ್ಲ ಜಾತಿಧರ್ಮಗಳು ಒಂದೇ ನಾವೇಲ್ಲ ಭಾರತೀಯರು

ಮುದ್ದೇಬಿಹಾಳ: ಸರ್ವರೂ ಒಂದೇ ಎಲ್ಲ ಜಾತಿಧರ್ಮಗಳು ಒಂದೇ ನಾವೇಲ್ಲ ಭಾರತಿಯರು ಎಂದು ದೇಶಪ್ರೇಮ ಬಿತ್ತುವ  ಮೂಲಕ ಸಮಾನತೆ ಸಾರಿದ ಬಸವಣ್ಣವರು, ಸಂತ ಕನಕದಾಸರು, ಬುದ್ಧರು, ರಾಷ್ಟ್ರಕವಿ ಕುವೆಂಪುರವರು, ಡಾ, ಅಂಬೇಡ್ಕರ ರವರು ಸೇರಿದಂತೆ ಅನೇಕ ಶರಣರು ಸಂತರು,ನೆಲಸಿದ ಭಾರತದ ಪ್ರವಿತ್ರ ಭೂಮಿಯಲ್ಲಿ  ಜಾತಿ ಧರ್ಮಗಳ ಹಾಗೂ ರಾಷ್ಟ್ರಭಕ್ತಿ, ದೇಶಪ್ರೇಮದ ಹೆಸರಲ್ಲಿ ದೇಶಕ್ಕೆ  ಹೆಸರಲ್ಲಿ  ಬೆಂಕಿ ಹಚ್ಚುವ ಕಾರ್ಯ  ನಿರಂತರವಾಗಿ ನಡೆಯುತ್ತಿದೆ ಜನರು ಜಾಗೃತರಾಗಬೇಕು ಎಂದು ಮೈಸೂರಿನ ಗುರುಲಿಂಗಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮಿಜಿಗಳು ಹೇಳಿದರು. 

ಪಟ್ಟಣದ ಅಲ್ಪ ಸಂಖ್ಯಾತ ಬಾಂಧವರು ವಿಬಿಸಿ ಹೈಸ್ಕೂಲ ಮೈದಾನದಲ್ಲಿ ಗುರುವಾರ ಸಾಯಂಕಾಲ ಹಮ್ಮಿಕೊಂಡಿದ್ದ ಸರ್ವಧರ್ಮ ಸಮನ್ವಯ ಸೌಹಾರ್ಧ ಸಮಾವೇಶ ಕಾರ್ಯಕ್ರಮವನ್ನು ಸಸಿಗೆ ನೀರು ಸುರಿಯುವ ಮೂಲಕ ಉದ್ಘಾಟಿಸಿ ಮಾತನಾಡಿದರು. 

ಭಾರತದ ಸಂವಿದಾನ ಜಾತ್ಯಾತೀತ ನಿರಪೇಕ್ಷೆಯಾಗಿದೆ ಈ ಹಿನ್ನೇಲೆಯಲ್ಲಿ ಸರ್ವಧರ್ಮದವರು ಒಂದೇ ಎನ್ನುವ ಮೂಲಕ ಮುನ್ನಡೆಯಬೇಕು ಒಂದು  ವೇಳೆ ಜಾತಿಯ ಮೇಲು, ಧರ್ಮದ ಮೇಲು  ಧರ್ಮಾದಾರಿತ ದೇಶವನ್ನು ಕಟ್ಟಲು ಮುಂದಾದಲ್ಲಿ ಮತ್ತೆ ಈದೇಶ ಎರಡನೂರು ವರ್ಷಗಳ ಕಾಲ ಮತ್ತೆ ಗುಲಾಮಗಿರಿಗೆ ಹೋಗುತ್ತದೆ  ಎಂದು ಸಂವಿದಾನ ಶಿಲ್ಪಿ ಡಾ, ಬಾಬಾರಸಾಹೇಬ ಅಂಬೇಡ್ಕರ್ ರವರು ಎಚ್ಚರಿಕೆ ಕೊಟ್ಟಿದನ್ನು ಯಾರೂ ಕೂಡ ಮರೆಯಬಾರದು. 

  ಅಂದಿನ ತಿರುವಾಂಕರ ರಾಜದಾನಿಯಲ್ಲಿ ದಲಿತ ಮಹಿಳೆಯರು ಅರಬೆತ್ತಲೆ ಉಡುಪಗಳನ್ನು ಧರಿಸುತ್ತಿದ್ದನ್ನು ಗಮನಿಸಿದ ಟಿಪ್ಪು ಸುಲ್ತಾನರು ಅಲ್ಲಿನ ರಾಜನಿಗೆ ಪತ್ರ ಬರೆಯುವ ಮೂಲಕ ಎಚ್ಚರಿಕೆ ನೀಡಿ ದಲಿತ ಮಹಿಳೆಯರಿಗೆಸಂಪೂರ್ಣ ಮೈಮುಚ್ಚುವ ಉಡುಪಗಳನ್ನು ಧರಿಸುವಂತೆ ಮಾಡುವ ಮೂಲಕ ದಲಿತ ಮಹಿಳೆಯರ ಮಾನ ರಕ್ಷಣೆಗೆ ನಿಂತದ್ದು. ಭಾರತದಲ್ಲಿಯೇ ಮೊಟ್ಟ ಮೊದಲಬಾರಿ ರೇಷ್ಮೇ ಬಟ್ಟೆಯನ್ನು ಕಂಡುಹಿಡಿದದ್ದು, ಶ್ರೀಂಗೇರಿಮಠದ ಸ್ವಾಮಿಗಳನ್ನು ಮಾತ್ರವಲ್ಲದೇ ಮಠವನ್ನು ಕೂಡ ರಕ್ಷಣೆ ಮಾಡಿದ್ದು ಟಿಪ್ಪು ಸುಲ್ತಾನರು ಎಂಬುದನ್ನು ಟಿಪ್ಪುವನ್ನು ವಿರೋಧಿಸುವವರು ತಿಳಿದಿಕೊಳ್ಳಬೇಕು ಅದಲ್ಲದೇ ರಾಷ್ಟ್ರ ಪಿತಾಮಹ ಮಹಾತ್ಮಾ ಗಾಂಧೀಜಿವರು ಟಿಪ್ಪು ಸುಲ್ತಾನರು ಹಿಂದು ಮುಸ್ಲಿಂರ ಭಾವೈಕ್ಯತೆಯ ವಜ್ರ ಎಂದು ತಮ್ಮ ಲೇಖನದಲ್ಲಿ ಬರೆದಿದ್ದಾರೆ. ಅಂತಹ ವೀರ ಪರಾಕ್ರಮಿ ಅಪ್ಪಟ ದೇಶಪ್ರೇಮಿ ಟಿಪ್ಪು ಸುಲ್ತಾನರು ದೇಶದ್ರೋಹಿ ಪಟ್ಟುತ್ತಿರಲ್ಲ. ಇತಿಹಾಸವು ತಾಯಿಯಗರ್ಭ ಇದ್ದಹಾಗೆ ಇತಿಹಾಸವನ್ನು ತಿರುಚುವುದು ತಾಯಿಯ ಗರ್ಭವನ್ನೇ ತಿರುಚಿದಂತೆ ಎಂದು ಡಾ, ಬಿ ಆರ್ ಅಂಬೇಡ್ಕರವರು ಹೇಳಿದ್ದಾರೆ. 

 ಉಳುವವರಿಗೆ ಭೂಮಿಒಡೆಯ ಎನ್ನುವ ಕಾನೂನು ಜಾರಿಗೆ ತರುವ ಮೂಲಕ ದೇಶದಲ್ಲಿಯೇ ಮೊಟ್ಟಮೊದಲಬಾರಿಗೆ ದಲಿತರಿಗೆ 1400 ಎಕರೆ ಭೂಮಿ ದಾನವಾಗಿ ಕೊಟ್ಟಿದ್ದು ಅಂದಿನ ಪ್ರದಾನಿ ಇಂದಿತರಾ ಗಾಂಧಿಯವರಾದರೆ 1782ರಲ್ಲಿ 1400 ಎಕರೆ ಭೂಮಿಯನ್ನು ದಾನವಾಗಿ ಕೊಟ್ಟಿದ್ದು. ದೇಶಲ್ಲೇ ಮೊಟ್ಟಮೊದಲಬಾರಿಗೆ ಮದ್ಯಪಾನವನ್ನು ನಿಷೇಧ ಕಾಯ್ದೆ ತಂದವರು ಟಿಪ್ಪು ಸುಲ್ತಾನರು ಎಂಬುದನ್ನು  ತಿಳಿಯಬೇಕು ಇದನ್ನಾಕೆ ಯಾರೂ ಹೇಳೋದಿಲ್ಲ. ಇಂದೇನಾಗಿದೆ ಧರ್ಮಾಧಾರಿತ ದೇಶದಲ್ಲಿ ಮನುಷ್ಯ ಮನುಷ್ಯರನ್ನಾಗಿ ಕಾಣದೆ ಹಾಡು ಹಗಲೇ ಕೊಲೆ ಸುಲಿಗೆ ಧರೋಡೆಯಂತಹ ಕೃತ್ಯಗಳನ್ನು ನೋಡುವಂತಾಗಿದೆ. ಈ ನಿಟ್ಟಿನಲ್ಲಿ ಆಕಾರದಲ್ಲಿ ಮನುಷ್ಯರಾಗದೇ ಆಚಾರದಲ್ಲಿ ನಿಜವಾದ ಮಾನವಿಯ ಮೌಲ್ಯಗಳನ್ನು ಹೊಂದಿದ ಮನುಷ್ಯನಾಗಿ ಬಾಳಬೇಕು ಆಗ ಮಾತ್ರ ಮನುಷ್ಯ ಜನ್ಮ ಸಾರ್ಥಕವಾಗುತ್ತದೆ. ಭಾರತ ಆಯೂಧಗಳ ದೇಶವಾಗದೇ ಬುಧ್ಧ, ಬಸವ, ಅಂಬೇಡ್ಕರವರು ಹಾಗೂ ಶರಣರ ಸಂತರ ಸೌಹಾರ್ಧತೆಯ ಆದರ್ಶ ಗುಣಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಆದರ್ಶ ದೇಶವನ್ನಾಗಿ ಕಟ್ಟುವುದರ ಜೊತೆಗೆ  ಘನತೆ ಕಾಪಾಡುವ ನಿಟ್ಟಿನಲ್ಲಿ ದೇಶದ ಸಮಗ್ರತೆ, ಅಖಂಢತೆ ಕಾಪಾಡುವಂತ ಕೆಲಸದಲ್ಲಿ ಪ್ರತಿಯೋಬ್ಬ ಭಾರತಿಯರು ಮುಂದಾಗಬೇಕು ವಿನಃ ಧರ್ಮದ ಹೆಸರಲ್ಲಿ ಪರಸ್ಪರ ಕೆಸರನ್ನು ಎರಚುವಂತ ಕೆಲಸವನ್ನು ಮಾಡಬಾರದು ಎಂದರು. 


ಡಾ, ಬಿ ಆರ್ ಅಂಬೇಡ್ಕರವರು  ಪ್ರತಿಯೊಬ್ಬ ಭಾರತೀಯನು ಪ್ರಜಾಪ್ರಭುತ್ವ ಎನ್ನುವ ಸಂವಿದಾನ ರಚಿಸುವ ಮೂಲಕ ಮತದಾನದ ಹಕ್ಕನ್ನು ಕೊಟ್ಟು ತಮ್ಮನ್ನು ಆಳುವ ದೊರೆಯನ್ನು ತಾವೇ ಆಯ್ಕೆ ಮಾಡುವಂತಹ ಮಹತ್ವದ ಅತ್ಯಭ್ದುತವಾದ ಸಂವಿದಾನ ರಚಿಸಿದ್ದಾರೆ.ಆದರೇ ಇಂದು ಜನರು ತಮ್ಮ ಪವಿತ್ರ ಮತವನ್ನು ಮಾರಿಕೊಂಡ ಹಿನ್ನೇಲೆಯಲ್ಲಿ ದೇಶಕ್ಕೆ ಅ ಭದ್ರತೆ ಎದುರಾಗಿದೆ. ಜನರು ಹಣ, ಹೆಂಡ, ಹರಿದು ಹೋಗುವ ಸೀರೆಗೆ ತಮ್ಮ ಮತ ಮಾರಿಕೊಳ್ಳದೆ ನಿಜವಾದ ಧೇಶಾಭಿಮಾನ ಹೊಂದಿದ ಯೋಗ್ಯರನ್ನು ಆಯ್ಕೆ ಮಾಡಿದಾಗ ಮಾತ್ರ  ಪ್ರಜಾಪ್ರಭುತ್ವ ಹಾಗೂ ಸಂವಿದಾನ ಉಳಿಸಲು ಸಾಧ್ಯ. 

ಈ ವೇಳೆ ಮಾಜಿ ಸಚೀವ ಸಿ ಎಸ್ ನಾಡಗೌಡ (ಅಪ್ಪಾಜಿ) ಅವರು ಮಾತನಾಡಿ ಸಧ್ಯ ಪಟ್ಟಣದ ಅಲ್ಪಸಂಖ್ಯಾತ ಬಾಂಧವರು ಎಲ್ಲಧರ್ಮದವರನ್ನು ಒಂದೇ ವೇದಿಕೆಯಡಿಯಲ್ಲಿ ಕೂಡಿಸಿ ಸರ್ವಧರ್ಮ ಸಮ್ಮೇಳನ ನಡೆಸುವ ಮೂಲಕ ಭಾವೈಕ್ಯತೆ ಸಂದೇಶ ಸಾರಿದ್ದ7ಉ ನಿಜಕ್ಕೂ ಶ್ಲಾಘನಿಯ ಎಂದರು. 

ಜೆಡಿಎಸ್ ರಾಜ್ಯ ನಾಯಕಿ ನಜ್ಮಾ ನಜೀರ ಅವರು ಮಾತನಾಡಿ ನಾವ್ಯಾರು ಹುಟ್ಟುವಾಗ ಆಜಾತಿಯಲ್ಲಿ ಈ ಧರ್ಮದಲ್ಲಿ ಹುಟ್ಟಬೇಕು ಎಂದು ದೇವರಲ್ಲಿ ಅರ್ಜಿ ಹಾಕಿಕೊಂಡು ಹುಟ್ಟಿಬಂದಿಲ್ಲ ಎಂಬುದೆನ್ನು ಎಲ್ಲರೂ ಅರ್ಥೈಸಿಕೊಳ್ಳಬೇಕಿದೆ. ಈ ಹಿನ್ನೇಲೆಯಲ್ಲಿ ಹಿಂದೂ ಮುಸ್ಲಿಂ ಬೇಧಭಾವವನ್ನು ತೊರೆದು ನಾವೇಲ್ಲ ಒಂದೇ ಎನ್ನುವ ಮೂಲಕ ಸಹೋದರೆತೆಯಿಂದ ಬದುಕಿದಾಗ ಮಾತ್ರ ದೇಶವನ್ನು ಕಟ್ಟಲು ಸಾಧ್ಯ ಎಂದರು.  

ಈ ವೇಳೆ ಕುಂಟೋಜಿ ಹಿರೇಮಠದ ಚನ್ನವೀರ ದೇವರು ಆಶಿರ್ವಚನ ನೀಡಿದರು. ಆಮಿಯತ್ ಉಲ್ಮಾ ಎ ಹಿಂದ್ ನ ಅಧ್ಯಕ್ಷ ಇಸಾಕಿಅಹ್ಮದ ಮಾಗಿ, ವಿಜಯಪುರ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ, ಗಣ್ಯರಾದ ಬಿ ಸಿ ಮೋಟಗಿ, ಎಂ ಬಿ ನಾವದಗಿ, ತಾಲೂಕಾ ಕಸಾಪ ಅಧ್ಯಕ್ಷ ಎಂ ಎಚ್ ಹಾಲಣ್ಣವರ, ಪುರಸಭೆ ಅಧ್ಯಕ್ಷೇ ಪ್ರತಿಭಾ ಅಂಗಡಗೇರಿ, ತಾಲೂಕಾ ಕುರುಬ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಮದರಿ, ಶ್ರೀಕಾಂತ ಚಲವಾದಿ, ಪುರಸಭೆ ಸದಸ್ಯ ಶಿವು ಶಿವಪೂರ, ವೀರಶೈವ ಲಿಂಗಾಯತ್ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ, ಪುರಸಭೆ ಸದಸ್ಯ ಅಲ್ಲಾಭಕ್ಷ ಢವಳಗಿ, ಮೈಬೂಬಗೊಳಸಂಗಿ, ಯುವ ಮುಖಂಡರಾದ ಕಾಮರಾಜ ಬಿರಾದಾರ, ಪಿಂಟು ಸಾಲಿಮನಿ, ಅಲ್ಲಾಭಕ್ಷ ದೇಸಾಯಿ ಮುನ್ನಾ ಮಕಾಂನದಾರ ಸೇರಿದಂತೆ ಹಲವರು ಇದ್ದರು. ಎಪಿಎಂಸಿ ನಿರ್ದೇಶಕ ವಾಯ್ ಎಚ್ ವಿಜಯಕರ ಪಾರ್ಥಿಸಿದರು. ಬಸವರಾಜ ಹಂಚಲಿ ನೀರೂಪಿಸಿದರು, ಎಚ್ ಆರ್ ಬಾಗವಾನ ವಂದಿಸಿದರು. 

ಮುದ್ದೇಬಿಹಾಳ ಪಟ್ಟಣದ ಅಲ್ಪ ಸಂಖ್ಯಾತ ಬಾಂಧವರು ವಿಬಿಸಿ ಹೈಸ್ಕೂಲ ಮೈದಾನದಲ್ಲಿ ಗುರುವಾರ ಸಾಯಂಕಾಲ ಹಮ್ಮಿಕೊಂಡಿದ್ದ ಸರ್ವಧರ್ಮ ಸಮನ್ವಯ ಸೌಹಾರ್ಧ ಸಮಾವೇಶ ಕಾರ್ಯಕ್ರಮವನ್ನು ಮೈಸೂರಿನ ಗುರುಲಿಂಗಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮಿಜಿಗಳು ಹಾಗೂ ಮಾಜಿ ಸಚಿವ ಸಿ ಎಸ್ ನಾಡಗೌಡ ಅವರು ಸಸಿಗೆ ನೀರು ಸುರಿಯುವ ಮೂಲಕ ಉದ್ಘಾಟಿಸಿದರು. 


ಸುದ್ದಿ ಓದಿ