ದುಷ್ಟಶಕ್ತಿಗಳ ವಿರುದ್ಧ ನಾವೆಲ್ಲರೂ ಒಗ್ಗಟ್ಟಾಗಿ ಹೋರಾಡಬೇಕಿದೆ: ಸಾಹಿತಿ ಬಿರಾದಾರ
ಯರಗಟ್ಟಿ 16: ಭಾರತ ಹೆಚ್ಚು ಬಲಿಷ್ಠವಾಗುತ್ತಿದೆ. ಆದರೂ ಆಂತರಿಕವಾಗಿ ನಮ್ಮ ದೇಶವನ್ನು ಅಸ್ಥಿರಗೊಳಿಸಬೇಕೆಂದು ಕೆಲವು ಭಯೋತ್ಪಾದಕರು ಹಾಗೂ ದೇಶದ್ರೋಹಿಗಳು ಹುನ್ನಾರ ನಡೆಸುತ್ತಿದ್ದು, ಇಂತಹ ದುಷ್ಟಶಕ್ತಿಗಳ ವಿರುದ್ಧ ನಾವೆಲ್ಲರೂ ಒಗ್ಗಟ್ಟಾಗಿ ಹೋರಾಡಬೇಕು ಎಂದು ಸಾಹಿತಿ ಡಾ. ರಾಜಶೇಖರ ಬಿರಾದಾರ ಹೇಳಿದರು.ತಾಲ್ಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಆಶ್ರಯದಲ್ಲಿ ಪ್ರಾಥಮಿಕ ಶಾಲಾ ಆವರಣದಲ್ಲಿ ಏರಿ್ಡಸಿದ್ದ 78ನೇ ದಿನಾಚರಣೆ ಸಮಾರಂಭದಲ್ಲಿ ಅವರು ದೇಶದ ರಕ್ಷಣೆ ಕುರಿತು ಮಾತನಾಡಿದರು.ತಹಶೀಲ್ದಾರ್ ಮಹಾಂತೇಶ ಮಠದಧ್ವಜಾರೋಹಣ ನೆರವೇರಿಸಿದರು.ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದವರಿಗೆ ಗೌರವಿಸಲಾಯಿತು. ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಪೊಲೀಸ್, ಸಂಚಾರ ಪೊಲೀಸ್, ಎನ್.ಸಿ.ಸಿ, ಸೇವಾದಳ, ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ವಾದ್ಯಗೋಷ್ಠಿ ತಂಡಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರ ಗಮನ ಸೆಳೆದವು.ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಡಿ. ಎನ್ ತಹಶೀಲ್ದಾರ, ವೈದ್ಯಾಧಿಕಾರಿ ಬಿ. ಎಸ್. ಬಳ್ಳೂರ, ಸಿಪಿಐ ಆಯ್ ಮಠಪತಿ, ಪಿಎಸ್ಐ ಲಕ್ಷ್ಮಣ ಮಾಳಿ, ತಾಲೂಕು ಪಶುವೈದ್ಯಾಧಿಕಾರಿ ಎಮ್. ವಿ. ಪಾಟೀಲ, ಮಾಜಿ ಜಿ. ಪಂ. ಸದಸ್ಯರಾದ ಅಜೀತಕುಮಾರ ದೇಸಾಯಿ, ಎಪಿಎಂಸಿ ಅಧ್ಯಕ್ಷ ನೀಲಕಂಠ ಸಿದ್ದಬಸನವರ, ಭೂ ನ್ಯಾಯ ಮಂಡಳಿ ಸದಸ್ಯ ಆಯ್. ಬಿ. ಗೌಡರ, ಪ್ರಾಂಶುಪಾಲರಾದ ಆರ್. ಎಸ್. ಮರಿಗೌಡರ, ಶಾಲಾ ಪ್ರಧಾನ ಗುರುಗಳಾದ ಎ. ಎ. ಮಕ್ತುಮನವರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.