ಅರಬ್ಬೀ ಸಮುದ್ರದಲ್ಲಿ ಐದಾರು ಮೀಟರ್ ಎತ್ತರದ ಅಲೆಗಳು; ಕಾರಣ ಏನು ಗೋತ್ತಾ?
ಕಾರವಾರ 28 : ಈ ಸಲದ ಮುಂಗಾರಿನಲ್ಲಿ ಕಾರವಾರದ ರವೀಂದ್ರನಾಥ ಠಾಗೋರ್ ಕಡಲು , ಅಲಿಗದ್ದಾ, ಹಾರವಾಡ, ಕುಮಟಾ, ಮುರುಡೇಶ್ವರ, ಭಟ್ಕಳ, ಗುಣವಂತೆ , ಮಂಗಳೂರು ಭಾಗದ ಕಡಲತೀರದಲ್ಲಿ ಆಳೆತ್ತರದ ಅಲೆಗಳು ಎದ್ದವು. ಜೂ. ಎರಡನೇ ವಾರದಲ್ಲಿ ಅಲೆಗಳ ಎತ್ತರ ನಾಲ್ಕರಿಂದ ಐದು ಮೀಟರ್, ಕೆಲವು ಕಡೆ ಆರು ಮೀಟರ್ ತನಕ ಎದ್ದಿದ್ದವು. ಸಮಾನ್ಯವಾಗಿ ಈಚಿನ ವರ್ಷಗಳಿಗೆ ಹೋಲಿಸಿದರೆ, 2025 ರಲ್ಲಿ ಐದಾರು ಮೀಟರ್ ಎತ್ತರದ ಅಲೆಗಳು ಸೃಷ್ಟಿಯಾದವು.
ಇದಕ್ಕೆ ಕಡಲ ಜೀವಶಾಸ್ತ್ರ ವಿಭಾಗದ ಸಂಶೋಧಕರು ಹೇಳುವ ಕಾರಣಗಳು ಮೂರು.ಅಲೆಗಳ ಎತ್ತರ ಅರಬ್ಬೀ ಸಮುದ್ರದಲ್ಲಿ ಈ ಸಲ ದಾಖಲೆಯ ಎತ್ತರ ಬರೆದವು. ಇದಕ್ಕೆ ಒಂದನೇ ಕಾರಣ ಮಾನ್ಸೂನ್ ಬೇಗ ಆಗಮಿಸಿ, ಅತಿಯಾದ ಮಳೆಯಾದುದು.ಎರಡನೇ ಕಾರಣ ಸಮುದ್ರದ ಆಡಂರ್ ಕರೆಂಟ್ ಹೆಚ್ಚಾಗಿರುವುದು. ಅಂದರೆ ಸಮುದ್ರದ ಆಳದಲ್ಲಿ ಒತ್ತಡ ಸೃಷ್ಟಿಯಾಗಿ ಸಮುದ್ರವನ್ನು ಪ್ರಕ್ಷುಬ್ಧ ಮಾಡುತ್ತದೆ. ಇದರಿಂದ ಸಮುದ್ರದ ಆಳ ಕಡಿಮೆ ಇದ್ದಲ್ಲಿ ಅಲೆಗಳ ಎತ್ತರ ಹೆಚ್ಚಾಗುತ್ತದೆ ಎನ್ನುತ್ತಾರೆ ಕಡಲ ವಿಜ್ಞಾನಿಗಳು.ಮೂರನೇ ಕಾರಣ ಅತೀಯದ ಗಾಳಿ ದಕ್ಷಿಣ ದಿಂದ ಪೂರ್ವ ಹಾಗೂ ಪೂರ್ವತ್ತರಕ್ಕೆ ಬೀಸುವ ಗಾಳಿ ಹಾಗೂ ಮಾನ್ಸೂನ್.ಭಾರತದಲ್ಲಿ ಜೂನ್ ನಿಂದ ಅಗಸ್ಟತನಕ ಅರಬ್ಬೀ ಸಮುದ್ರದ ಕಡೆಯಿಂದ ಬಂಗಾಳ ಮತ್ತು ಉತ್ತರ ಭಾರತದ ಕಡೆಗೆ ಬೀಸುವ ಗಾಳಿ ಸಹಿತ ಮಳೆ ಕಾರಣ ,ಸಮುದ್ರದ ದಡದಲ್ಲಿ, ಆಳ ಕಡಿಮೆ ಇರುವಲ್ಲಿ ಬೃಹತ್ ಅಲೆಗಳು ಏಳುತ್ತವೆ. ಅಲ್ಲದೆ ದಿನ ಒಂದರಲ್ಲಿ ಕರಾವಳಿಯ ಅಲ್ಲಲ್ಲಿ ಸುರಿವ 17 ರಿಂದ 20 ಸೆಂ.ಮೀಟರ್ ಮಳೆ ಸುರಿದು ನೀರು ಕಡಲು ಸೇರಿದಾಗ ಸಮುದ್ರದ ಮಟ್ಟ ಹೆಚ್ಚಿ ಅಂತರಿಕ ಒತ್ತಡ ಹೆಚ್ಚುತ್ತದೆ. ಆಗ ಸಹಜವಾಗಿ ಅಲೆಗಳು ದೊಡ್ಡದಾಗಿ ದಂಡೆಗೆ ಬಡಿಯುತ್ತವೆ.
ಅಲೆ ತಡೆಗೋಡೆ ಕಾರಣ ಬೃಹತ್ ಅಲೆ ಸೃಷ್ಟಿಗೆ ಕಾರಣ ಅಲ್ಲ ಎಂದು ಕಡಲ ವಿಜ್ಞಾನಿಗಳು ಸ್ಪಷ್ಟವಾಗಿ ಹೇಳುತ್ತಾರೆ.ಇನ್ನು ಅಕ್ಟೋಬರ್ ನಿಂದ ಡಿಸೆಂಬರ್ ತನಕ ಹಿಂಗಾರು ಸಮಯದಲ್ಲಿ ಉತ್ತರ ದಿಂದ ದಕ್ಷಿಣಕ್ಕೆ ಬೀಸುವ ಗಾಳಿ ಒಮ್ಮೊಮ್ಮೆ ಸಮುದ್ರದ ಅಲೆ ಪ್ರಕ್ಷುಬ್ಧತೆಗೆ ಕಾರಣ ವಾಗುತ್ತವೆ ಎನ್ನುತ್ತಾರೆ ವಿಜ್ಞಾನಿಗಳು.ಈ ಸಲ ರವೀಂದ್ರನಾಥ ಠಾಗೋರ್ ಕಡಲತೀರದಲ್ಲಿ ಐದು ಮೀಟರ್ ಎತ್ತರದ ತನಕ ಅಲೆ ಎದ್ದವು. ಇದಕ್ಕೆ ಕಾರಣ ಅತಿಯಾದ ಗಾಳಿ ಮಳೆ ಕಾರಣ ಎಂದು ಹವಾಮಾನ ಇಲಾಖೆ ಸಹ ಹೇಳಿದೆ. ಇನ್ನೂ ಅರವತ್ತು ದಿನ ಮಳೆ ಇದ್ದು, ಮಾನ್ಸೂನ್ ತೀವ್ರತೆ ಮತ್ತೇನು ಮಾಡಲಿದೆ ಎಂದು ಕಾದು ನೋಡಬೇಕಿದೆ ಕೋಟ್ ರವೀಂದ್ರನಾಥ ಠಾಗೋರ್ ಕಡಲತೀರದಲ್ಲಿ ಐದು ಮೀಟರ್ ಎತ್ತರದ ತನಕ ಅಲೆ ಎದ್ದವು. ಇದಕ್ಕೆ ಕಾರಣ ಅತಿಯಾದ ಗಾಳಿ ಮಳೆ ಕಾರಣ. ಹಾಗೂ ಸಮುದ್ರದ ತಳದ ಒತ್ತಡವೂ ಕಾರಣ. ಮಾನ್ಸೂನ್ ಅಂದರೆ ಗಾಳಿ ಸಹಿತ ಮಳೆ. ಇದು ಪ್ರಕೃತಿ ಸಹಜ. ಭಯಪಡಬೇಕಿಲ್ಲ. ಸಮುದ್ರದ ಮಳೆಗಾಲದಲ್ಲಿ ಪ್ರಕ್ಷುಬ್ಧವಾಗಿರುತ್ತದೆ. ಈ ಕಾರಣಕ್ಕೆ ಮೀನುಗಾರಿಕೆಗೆ ನಿಷೇಧ ಹೇರುವುದು. ಅಲೆ ಎತ್ತರ ಹೆಚ್ಚುವುದು ವೈಜ್ಞಾನಿಕ. ನದಿ ನೀರು ಹೆಚ್ಚಾಗಿ ಸಮುದ್ರ ಸೇರುತ್ತಿದೆ. ಇದು ಸಮುದ್ರದ ಆರೋಗ್ಯ ಕಾಪಾಡುತ್ತದೆ.-ಡಾ.ಶಿವಕುಮಾರ್ ಹರಗಿ. ಕಡಲ ಜಿವವಿಜ್ಞಾನಿ, ಪ್ರಾಧ್ಯಾಪಕರುಕಡಲ ಜೀವಶಾಸ್ತ್ರ ವಿಭಾಗಕಾರವಾರ.