ವಿವಿಧ

ಯೋಚಿಸುತ್ತ ಕುಳಿತಿದ್ದೆ

ಯೋಚಿಸುತ್ತ  ಕುಳಿತಿದ್ದೆ

 ಕವನ 


ಯೋಚಿಸುತ್ತ  ಕುಳಿತಿದ್ದೆ 


ಹಾಗೇ ಯೋಚಿಸುತ್ತ   

ಕುಳಿತಿದ್ದೇನೆ  

ಏನನ್ನು ಯೋಚಿಸಲಿ   

ಎಂದು ತಿಳಿಯದೆ;  

ಯಾರೋ ಹೇಳಿದ್ದಾರೆ  

“ಯೋಚಿಸದಿರುವವರೇ   

ಸುಖಿಗಳು” ಎಂದು.   

ಯೋಚಿಸಿ ಯೋಚಿಸಿ ಕೆಟ್ಟರು   

ಬುದ್ಧಿ ಹೆಚ್ಚಾದವರು  

ಯೋಚಿಸದೇ ಕೆಟ್ಟರು  

ಬುದ್ಧಿಯಿಲ್ಲದವರು  

ಸಮಸ್ಯೆ ಇರುವುದೇ ಅಲ್ಲಿ;   

ಸಣ್ಣವನಿದ್ದಾಗ  

ಯೋಚಿಸಬೇಕೆಂಬುದೇ  

ಗೊತ್ತಿರಲಿಲ್ಲ,  

ದೊಡ್ಡವನಾದಾಗ   

ಯೋಚಿಸುತ್ತ   

ಕುಳಿತುಕೊಳ್ಳುವುದಕ್ಕೆ  

ಸಮಯವೇ ಇರಲಿಲ್ಲ.  

ವಯಸ್ಸಾದಾಗ   

ಯೋಚಿಸುವ ಅಗತ್ಯವೇ   

ಬೀಳಲಿಲ್ಲ;  

ಯೋಚಿಸಿ ಪ್ರಯೋಜನವೂ   

ಇರಲಿಲ್ಲ,   

ಏಕೆಂದರೆ ಯೋಚಿಸುವ ಕಾಲ   

ಮುಗಿದುಹೋಗಿತ್ತು.  

ಇಂದು   

ಯೋಚಿಸುವವರಿಗೂ  

ಯೋಚಿಸದಿರುವವರಿಗೂ  

ವ್ಯತ್ಯಾಸವೇನೂ ಉಳಿದಿಲ್ಲ.   

ಅದೇ ಸುಖದ ಸಂಗತಿ!  

                 - ಎಲ್‌. ಎಸ್‌. ಶಾಸ್ತ್ರಿ  

ಹಿರಿಯ ಸಾಹಿತಿಗಳು, ಪತ್ರಕರ್ತರು 

         ಬೆಳಗಾವಿ  


ಸುದ್ದಿ ಓದಿ