ವಿವಿಧ

ಕಣ್ಣು ತೇವಗೊಳಿಸುವ ಪುಟ್ಟ ಮಗುವಿನ ಪಿತೃಸೇವೆ

ಕಣ್ಣು ತೇವಗೊಳಿಸುವ ಪುಟ್ಟ ಮಗುವಿನ ಪಿತೃಸೇವೆ

ಬೆಂಗಳೂರು: ಆಗಸ್ಟ್ 28 : ಮಕ್ಕಳು ತಮ್ಮ ತಂದೆತಾಯಿಯ ಸೇವೆ ಮಾಡುವುದು ಹೊಸ ವಿಷಯವೇನೂ ಅಲ್ಲ; ಅದು ಅತಿಶಯದ ವಿಷಯವೂ ಅಲ್ಲ, ಪುಟ್ಟ ಮಗುವೊಂದು ಹೀಗೆ ಮಾಡಿದರೆ ಅದು ಅತಿಶಯವಾದ ವಿಷಯವಲ್ಲವೇ ?

ಅದಿನ್ನೂ ಅಂಬೆಗಾಲಿಡುತ್ತಿರುವ ಪುಟ್ಟ ಮಗು. ಬಹುಶ: ಎರಡು ವರ್ಷವಿರಬಹುದು. ಅದು ತನ್ನ ತಂದೆಯ ನೆರವಿಗೆ ಧಾವಿಸುವ ಪರಿ ಅಚ್ಚರಿ ಮೂಡಿಸುತ್ತದೆ. ಆ ಮಗುವಿನ ತಂದೆಯ ಕಾಲಿಗೆ ಪೆಟ್ಟಾಗಿದೆ. ಎರಡು ಊರುಗೋಲುಗಳ ಸಹಾಯದಿಂದ ನಡೆಯುತ್ತಿದ್ದಾರೆ.

ತನ್ನ ತಂದೆ ಬರುವ ಮೊದಲೇ ಓಡೋಡಿ ಬರುವ ಮಗು ಆತ ಆರಾಮವಾಗಿ ಕುಳಿತುಕೊಳ್ಳುವಂತೆ ಕುರ್ಚಿ ಸರಿ ಮಾಡಿ ಇಡುತ್ತದೆ. ಆತನನ್ನು ಕೂರಿಸಿದ ನಂತರ ಪಕ್ಕದಲ್ಲಿರಿಸಲು ಆತನ ಊರುಗೋಲುಗಳನ್ನು ತೆಗೆದುಕೊಳ್ಳುತ್ತದೆ.

ನೋಡಿದರೆ ಕಣ್ಣು ತೇವಗೊಳಿಸುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೀವೂ ಅದನ್ನು ನೋಡುವ ಸಲುವಾಗಿ ಅದರ ಲಿಂಕ್ ಹಾಕಲಾಗಿದೆ

ಸುದ್ದಿ ಓದಿ