ನೀರು ಅತ್ಯಮೂಲ್ಯ - ಬೆಲೆ ಕಟ್ಟಲು ಸಾಧ್ಯವಿಲ್ಲ : ಡಾ. ನತಿನ್ ಪಿಕಳೆ
ಕಾರವಾರ 22: ನೀರು ತಾಯಿಯ ಹಾಲು ಇದ್ದಹಾಗೆ, ಅದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ನಗರಸಭೆ ಅಧ್ಯಕ್ಷ ಡಾ. ನಿತಿನ್ ಪಿಕಳೆ ಹೇಳಿದರು. ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ನಗರಸಭೆ ಕಾರವಾರ ಹಾಗೂ ಜಿಲ್ಲಾ ನ್ಯಾಯವಾದಿಗಳ ಸಂಘ ಕಾರವಾರ ಇವರ ಸಂಯುಕ್ತ ಆಶ್ರಯದಲ್ಲಿ ಮಾ 22 ಸೋಮವಾರ ದಂದು ಕಾರವಾರ ನಗರ ಸಭೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ವಿಶ್ವ ಜಲ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು. ನೀರಿನ ಸದ್ಬಳಕೆ ಮಾಡಿಕೊಳ್ಳುವ ಹಾಗೂ ನೀರು ಪೋಲಾಗದಂತೆ ನೋಡಿಕೊಳ್ಳುವ ಬಗ್ಗೆ ಹೇಳುವುದು ಸುಲಭ ಆದರೆ ಅದನ್ನು ಕಾರ್ಯ ರೂಪಕ್ಕೆ ತರುವುದು ಕಷ್ಟ. ಇದಕ್ಕೆ ಸಾರ್ವಜನಿಕರ ಸಹಕಾರವು ಮುಖ್ಯವಾಗುತ್ತದೆ ಎಂದರು. ಸಾರ್ವಜನಿಕರ, ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಒಮ್ಮತದ ಸಹಕಾರ ಇದ್ದಲ್ಲಿ ಮಾತ್ರ ನಗರದ ಅಭಿವೃದ್ಧಿ ಸಾಧ್ಯವಾಗುತ್ತದೆ. ಎಲ್ಲದಕ್ಕೂ ನಗರಸಭೆಯನ್ನ ದೂರುವುದು ಸರಿಯಲ್ಲ. ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಆಗುವ ನೀರಿನ ಬರವನ್ನ ನೀಗಿಸಲು ನಗರಸಭೆ ಸ್ಥಳೀಯ ನೀರಿನ ಮೂ¯ಗಳನ್ನು ಉಪಯೋಗಿಸಳಿಕೊಳ್ಳಲು ಇಂದಿನಿಂದಲೇ ಪೂರ್ವಭಾವಿಯಾಗಿ ವಿವಿಧ ಕ್ರಮ ತೆಗೆದುಕೊಳ್ಳುತ್ತಿದೆ, ಈ ಕುರಿತಾಗಿ ನಗರಲ್ಲಿ ಇರುವ ಬಾವಿಗಳಲ್ಲಿ ಇರುವ ಹೂಳನ್ನ ತೆಗೆದು ಸ್ವಚ್ಛಗೊಳಿಸಿ ಪಂಪಗಳನ್ನ ಅಳವಡಿಸಿ ನೀರಿನ ಬಳಕೆಗೆ ಅನುವು ಮಾಡಿ ಕೊಡಲಾಗುತ್ತಿದೆ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ, ಹಿರಿಯ ಸಿವಿಲ್ ನ್ಯಾಯಾದೀಶ ಹಾಗೂ ಜಿಲ್ಲಾ ಕಾನೂನುಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಟಿ ಗೋವಿಂದಯ್ಯ ಮಾತನಾಡಿ, ನೀರನ್ನು ಕೃತಕವಾಗಿ ಉತ್ಪಾದನೆಮಾಡಲು ಸಾಧ್ಯವಿಲ್ಲ, ನೀರಿಲ್ಲದೇ ಸಾವು ನೋವುಗಳು ಆಗುತ್ತಿರುವಾಗ ನೀರಿನ ಮಹತ್ವ ಅರಿತು ಮಿತವಾಗಿ ಬಳಸುವುದು ಸೂಕ್ತ. ಜಿಲ್ಲೆಯಲ್ಲಿ ಕಾಡು ಇರುವುದರಿಂದ ಇಲ್ಲಿನ ಜನರೇ ಪುಣ್ಯವಂತರು, ನೀರಿನ ಮಹತ್ವ ತಿಳಿಯಬೇಕಾದರೆ ಉತ್ತರ ಕರ್ನಾಟಕದ ಬಯಲು ಸೀಮೆ ಕಡೆ ಹೋಗಬೇಕು ಆಗ ನೀರಿನ ಮಹತ್ವ ತಿಳಿಯುತ್ತದೆ. ನಮಗೆ ಒಳ್ಳೆಯ ಗಾಳಿ ನೀರು ದೊರೆತು, ನಮ್ಮ ಮಕ್ಕಳು ಚೆನ್ನಾಗಿ ಬೆಳೆದು ಅವರ ಮುಂದಿನ ಜೀವನಕ್ಕೆ ನೀರು ದೊರೆಯಬೇಕೆಂದರೆ ನಾವು ಇಂದಿನಿಂದಲೇ ನೀರಿನ ಬಗ್ಗೆ ಎಚ್ಚರಿಕೆ ತೆಗೆದುಕೊಳ್ಳಬೇಕು. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಅಸ್ತಿ ದುಡ್ದು ಕೊಡುವುದಕಿಂತ, ಶುದ್ಧ ನೀರು ಕೊಡುವುದು ಮುಖ್ಯ ಇದಕ್ಕಾಗಿ ಈವಾಗಲೇ ಮನೆಯ ಸುತ್ತಲಿನ ಜಾಗದಲ್ಲಿ ಗಿಡಗಳನ್ನ ನೆಡಬೇಕು ಎಂದರು.
ನೀರಿನ ಸಮಸ್ಯೆಗೆ ಅಧಿಕಾರಿ ಅಥವಾ ನಗರಸಭೆಗಳ ಕೆಲಸ ಮಾತ್ರವಲ್ಲದೆ ಸಾರ್ವಜನಿಕರ ಪಾತ್ರವೂ ಇದ್ದು, ಇದರ ಬಗ್ಗೆ ಎಲ್ಲರೂ ಅರಿತು ಜಾಗೃತರಾಗಬೇಕು. ನೀರಿನ ಸಮಸ್ಯೆ ನಮ್ಮ ಊರಲ್ಲಿ ಇಲ್ಲವೆಂದು ಕೂಡುವುದಲ್ಲ. ಪ್ರಪಂಚವೇ ಒಂದು ಕುಟುಂಬ ಎಲ್ಲಿ ಹಾನಿಯಾದರು ಅದೂ ನಮ್ಮಮೇಲೆಯೂ ಪರಿಣಾಮಬೀರುತ್ತದೆ ಎಂದರು.
ಜಿಲ್ಲಾ ನ್ಯಾಯಾದೀಶರ ಸಂಘದ ಅಧ್ಯಕ್ಷ ಅನಿರುದ್ ಜಿ ಹಳದಿಪುರ ರವರು ಮಾತನಾಡಿ, ಜನರು ಮದುವೆ ಮತ್ತು ಸಮಾರಂಭಗಳಲ್ಲಿ ಹಾಗೂ ಪ್ರತಿನಿತ್ಯ ತಮ್ಮ ದೈನಂದಿನ ಬಳಕೆಯಲ್ಲಿ ನೀರಿ ಮಹತ್ವ ಅರಿಯದೇ ಬಳಕೆ ಮಾಡುತ್ತಾರೆ. ಪ್ರತಿ ಹನಿ ನೀರು ಪೋಲಾಗದಂತೆ ನೋಡಿಕೊಳ್ಳಬೇಕು ಎಂದರು. ನಗರಸಭೆಯ ಪೌರಯುಕ್ತ ಆರ್. ಪಿ. ನಾಯ್ಕ್ ಮಾತನಾಡಿ ಈ ವμರ್Àವೂ 1000 ಗಿಡಗಳನ್ನ ನೆಡುವ ಯೋಜನೆ ಹಮ್ಮಿಕೊಂಡಿದ್ದೇವೆ. ನಗರದ 8 ವಾರ್ಡ್ ನಿಂದ 15ಲಕ್ಷ ಲೀಟರ್ ಕೊಳಚೆ ನೀರು ಪ್ರತಿನಿತ್ಯ ಹರಿದುಹೋಗುತ್ತಿದ್ದು ಅದನ್ನ ಶುದ್ಧಿಕರಣ ಮಾಡಿ ನಗರದ ಉದ್ಯಾನವನಗಳಿಗೆ ಉಪಯೋಗಿಸುವ ಹಾಗೂ ನಗರದಲ್ಲಿ ನೆಟ್ಟಿರುವ ಗಿಡಗಳಿಗೆ ಬಳಸಲಾಗುವುದು ಇದಕ್ಕಾಗಿ ಈ ವμರ್Àದ ಬಜೆಟ್ನಲ್ಲಿ 2 ಕೋಟಿ ರೂಪಾಯಿಗಳನ್ನ ಮೀಸಲೀಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ನ್ಯಾಯವಾದಿ ರಾಜೇಶ್ವರಿ ನಾಯ್ಕ್, ನಗರಸಭೆಯ ಸ್ಥಾಯಿ ಸಮಿತಿಯ ಅಧ್ಯಕ್ಷೆ ಸಂದ್ಯಾ ಬಾಡಕರ್, ನಗರಸಭೆ ಉಪಾಧ್ಯಕ್ಷ, ಮತ್ತು ಸಿಬ್ಬಂದಿ , ಸಾರ್ವಜನಿಕರು ಉಪಸ್ಥಿತರಿದ್ದರು.