ಭಾರತ ಶಿಕ್ಷಣ ಸಂಸ್ಥೆಯಿಂದ ನೀರು ವಿತರಣೆ
ಲೋಕದರ್ಶನ ವರದಿ
ಯರಗಟ್ಟಿ 04: ಪಟ್ಟಣದ ಗಾಂಧಿ ವೃತ್ತದಲ್ಲಿ ಭಾರತ ಶಿಕ್ಷಣ ಹಾಗೂ ಸಮಾಜ ಸೇವಾ ಸಂಸ್ಥೆಯಿಂದ ನೀರು ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಉದ್ದೇಶಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಇಮ್ತಿಯಾಜ್ ಖಾದ್ರಿ ಅವರು, ಬಿರು ಬೇಸಿಗೆಯಲ್ಲಿ ಮನೆಯಿಂದ ಹೊರ ಬಂದ ಸಾರ್ವಜನಿಕರ ದಾಹ ತೀರಿಸುವ ನಿಟ್ಟಿನಲ್ಲಿ ನೀರನ್ನು ಕಳೆದ ವರ್ಷದಿಂದ ಸತತವಾಗಿ ಪಟ್ಟಣದ ಹಲವೆಡೆ ವಿತರಿಸಲಾಗುತ್ತಿದೆ ಎಂದರು.
ಜೈನ ಸಮಾಜದ ಅಜೀತ ಟೋಪನ್ನವರ, ಮಹಾಂತೇಶ ಢವಳೇಶ್ವರ, ಈರಣ್ಣ ಹುಲ್ಲೂರ, ಯುವ ಮುಖಂಡ ಅಣ್ಣಾಸಾಹೇಬ ಸುಭೇದಾರ, ಸತೀಶ ತಡಸಲೂರ, ಈರಣ್ಣ ಆಚಮಟ್ಟಿ, ರೋಹಿತ ಶೆಟ್ಟಿ, ಪ್ರಜ್ವಲ್ ಮದ್ದಾನಿ, ಅಡಿವೆಪ್ಪ ಹಾದಿಮನಿ ಸೇರಿದಂತೆ ಅನೇಕರು ಇದ್ದರು.