ಸ್ವಚ್ಛತೆಯಿಂದ ಕಾಪಾಡಿಕೊಳ್ಳುತ್ತಿಲ್ಲವೆಂದು ಅಂಗಡಿ ಮಳಿಗೆ ವ್ಯಾಪಾರಿಗಳಿಗೆ ಖಡಕ್ಕಾಗಿ ಎಚ್ಚರಿಕೆ
ಜಮಖಂಡಿ 17: ನಗರದ ಜಿ,ಜಿ,ಹೈಸ್ಕೂಲ್ ಎದುರುಗಡೆ ಇರುವ ಅಂಗಡಿ ವ್ಯಾಪಾರಿಗಳು ತಮ್ಮ ವ್ಯಾಪಾರ, ವಹಿವಾಟ ಮುಗಿಸಿದ ನಂತರ, ಎಲ್ಲ ಕಸವನ್ನು ರಸ್ತೆಯ ಬದಿಗೆ ಗೂಡಿಸಿ. ನಗರವನ್ನು ಸ್ವಚ್ಛತೆಯಿಂದ ಕಾಪಾಡಿಕೊಳ್ಳುತ್ತಿಲ್ಲವೆಂದು ಅಂಗಡಿ ಮಳಿಗೆ ವ್ಯಾಪಾರಿಗಳಿಗೆ ನಗರಸಭೆ ಪೌರಾಯುಕ್ತೆ ಲಕ್ಷ್ಮೀ ಅಸ್ಟಗಿ ಖಡಕ್ಕಾಗಿ ಎಚ್ಚರಿಕೆಯನ್ನು ನೀಡಿದರು.
ನಗರದಲ್ಲಿ ನಸುಕಿನ ಜಾವದಲ್ಲಿ ಕಸದವನ್ನು ಗೂಡಿಸು ಪೌರಕಾರ್ಮಿಕರ ಕೆಲಸವನ್ನು ಗಮನಿಸಲು ಬಂದ ಪೌರಾಯುಕ್ತೆ ಲಕ್ಷ್ಮೀ ಅಸ್ಟಗಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ನಮ್ಮ ಇಲಾಖೆಯ ಕಸವನ್ನು ಗೂಡಿಸುವ ಪೌರಕಾರ್ಮಿಕರು ರಸ್ತೆ ಬದಿಯಲ್ಲಿ. ಹಾಗೂ ಎಲ್ಲೆಂದರಲ್ಲಿ ಕಸವನ್ನು ಬಿಸಾಕಿದನ್ನು ಸ್ವಚ್ಛಗೊಳಿಸುತ್ತಾರೆ.
ಆದರೆ ವ್ಯಾಪಾರಸ್ಥರು ತಮ್ಮ ಅಂಗಡಿ,ಮುಂಗಟ್ಟನ್ನು ಬಂದು ಮಾಡುವ ಸಮಯದಲ್ಲಿ ಕಸದ ರಾಸಿಯನ್ನು ರಸ್ತೆ ಮೇಲೆ ಸುರಿದು ಹೋಗುತ್ತಾರೆ. ಅವರಿಗಾಗಿ ನಮ್ಮ ಇಲಾಖೆಯಿಂದ ಕಸದ ವಾಹನವನ್ನು ಪ್ರತಿ ದಿನ ಎರಡು ಸಮಯದಲ್ಲಿ ಕಳುಹಿಸಲಾಗುತ್ತದೆ. ಆದರೆ ವ್ಯಾಪಾರಿಗಳು ಮತ್ತು ಸಾರ್ವಜನಿಕರು ಮಾತ್ರ ಕಸದ ವಾಹದಲ್ಲಿ ಹಾಕದೆ ರಸ್ತೆ ಬದಿಗೆ ಸುರಿದು ಹೋಗುತ್ತಾರೆ. ನಗರದಲ್ಲಿನ ವ್ಯಾಪಾರಿಗಳು ಮತ್ತು ಸಾರ್ವಜನಿಕರು ಸ್ವಚ್ಛತೆಯಿಂದ ಕಾಪಾಡಿಕೊಂಡರೆ ನಗರ ಸುಂದರವಾಗಿ ಕಾಣಲು ಸಾಧ್ಯ ಎಂದರು