ಬಣ್ಣ ಲೇಫನದ ಮೂರ್ತಿ ಮಾರಾಟ ಮಾಡಿದರೆ ಕಠಿಣ ಕ್ರಮದ ಎಚ್ಚರಿಕೆ
ಜಮಖಂಡಿ 10: ಗೌರಿ ಗಣೇಶ ಹಬ್ಬದ ದಿನದಂದು ಗಣೇಶನ ಮೂರ್ತಿ ತಯಾರಕರು, ಮಾರಾಟಗಾರರು ಪಿಯೋಫಿ ಗಣೇಶನ ಮೂರ್ತಿ ಹಾಗೂ ಬಣ್ಣ ಲೇಫನದ ಮೂರ್ತಿಗಳನ್ನು ಮಾರಾಟ ಮಾಡಿದರೆ ಅಂತವರ ಮೇಲೆ ನಿರ್ಧಾಕ್ಷಿಣ್ಯವಾಗಿ ಪ್ರಕರಣ ದಾಖಲಿಸಲಾಗುತ್ತದೆಂದು ಎಸಿ, ಶ್ವೇತಾ ಬೀಡೀಕರ ಖಡಕ್ಕಾಗಿ ಎಚ್ಚರಿಕೆಯನ್ನು ನೀಡಿದ್ದಾರೆ.
ನಗರದ ತಾಲೂಕಾಡಳಿತ ಸೌಧದದ ಉಪವಿಭಾಗ ಕಚೇರಿಯಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಜಮಖಂಡಿ ಉಪವಿಭಾಗದ ವ್ಯಾಪ್ತಿಯಗೆ ಸಂಬಂಧಿಸಿದಂತೆ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶದ ಮೇರೆಗೆ ಹಾಗೂ ಜಲಮೂಲಗಳ ರಕ್ಷಣೆಗಾಗಿ ಹಾನಿಯಾಗದಂತೆ ಮುಂಜಾಗ್ರತ ಕ್ರಮವಾಗಿ ಗೌರಿ ಗಣೇಶ ಹಬ್ಬದ ದಿನದಂದು ಗಣೇಶನ ಮೂರ್ತಿ ತಯಾರಿಕರು ಮತ್ತು ಮಾರಾಟಗಾರರು ಪಿಯೋಫಿಯಿಂದ ಗಣೇಶನ ಮೂರ್ತಿಯನ್ನು ತಯಾರಿಸಬಾರದು, ಮಾರಾಟವನ್ನು ಸಹ ಮಾಡಬಾರದು. ಯಾರಾದರು ಮಾರುಕಟ್ಟೆಯಲ್ಲಿ ಗಣೇಶನ ಮೂರ್ತಿ ಮಾರಾಟ ಮಾಡುತ್ತಿದ್ದರೆ. ಸಂಬಂಧ ಪಟ್ಟ ಅಧಿಕಾರಿಗಳು ಅಂಗಡಿಗಳನ್ನು ಪರೀಶೀಲನೆ ನಡೆಸಲಿದ್ದಾರೆ. ಯಾರಾದರು ಪಿಯೋಫಿಯಿಂದ ತಯಾರಿಸಿದ ಗಣೇಶನ ಮೂರ್ತಿಗಳನ್ನು ಮಾರಾಟ ಮಾಡಿದ್ದು ಕಂಡುಬಂದರೆ ಅಂತವರ ಮೇಲೆ ನಿರ್ಧಾಕ್ಷಿಣ್ಯವಾಗಿ ಪ್ರಕರಣವನ್ನು ದಾಖಲಿಸಲಾಗುತ್ತದೆ. ಕೇವಲ ಮಣ್ಣಿನ ಮೂರ್ತಿಗಳನ್ನು ಮಾರಾಟ ಮಾಡಬೇಕೆಂದು ತಿಳಿಸಿದರು.