ಗೋಕರ್ಣದ 20 ಪ್ರವಾಸಿ ಬೋಟ್ಗಳಿಗೆ ಎನ್‌ಒಸಿ ನೀಡದಿದ್ದರೆ ಹೋರಾಟದ ಎಚ್ಚರಿಕೆ
ಕಾರವಾರ 09: ಗೋಕರ್ಣದಲ್ಲಿ ಪ್ರವಾಸಿ ಬೋಟ್ಗಳನ್ನು ನಡೆಸುವ ಸ್ಥಳೀಯ ಮೀನುಗಾರರಿಗೆ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ನೀಡದೆ ಸತಾಯಿಸಲಾಗುತ್ತಿದೆ. ಎನ್‌ಒಸಿ ಕೊಡಿಸುವ ನೆಪದಲ್ಲಿ ಮಧ್ಯವರ್ತಿಗಳ ಮೂಲಕ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಜಿ. ಪಂ. ಮಾಜಿ ಸದಸ್ಯ ಪ್ರದೀಪ ನಾಯಕ ಆರೋಪಿಸಿದರು.
ಕಾರವಾರ ನಗರದ ಜಿಲ್ಲಾ ಪತ್ರಿಕಾಭವನದಲ್ಲಿ ಶುಕ್ರವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಗೋಕರ್ಣದಲ್ಲಿ ಪರವಾನಿಗೆ ಸಿಗದ 20 ಬೋಟ್ಗಳಿಗೆ ಅನುಮತಿ ನೀಡದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಅವರು ಹೇಳಿದರು. ಗೋಕರ್ಣದ ಪ್ರವಾಸೋದ್ಯಮದಲ್ಲಿ ಸ್ಥಳೀಯ ಮೀನುಗಾರರು ಸಹಭಾಗಿತ್ವ ಇದೆ. 2002ರಿಂದ ಸಣ್ಣ ದೋಣಿಗಳ ಮೂಲಕ ಪ್ರವಾಸಿಗರಿಗೆ ಸೇವೆ ಒದಗಿಸುತ್ತಿದ್ದ ಮೀನುಗಾರರು, ನಂತರ ಬ್ಯಾಂಕ್ ಸಾಲ ಪಡೆದು, 15ರಿಂದ 30 ಲಕ್ಷ ರೂ.ವರೆಗೆ ಬಂಡವಾಳ ಹೂಡಿ ಸುಸಜ್ಜಿತ ಬೋಟ್ಗಳನ್ನು ಖರೀದಿಸಿದ್ದಾರೆ.
ದುಡಿಮೆ ಸಹ ಮಾಡಿದ್ದಾರೆ. 2010ರಿಂದ 2024ರವರೆಗೆ ಯಾವುದೇ ತೊಂದರೆ ಇಲ್ಲದೆ ಪರವಾನಿಗೆ ದೊರೆಯುತ್ತಿತ್ತು. ಆದರೆ 2025ರಿಂದ ಹೊಸ ಟೆಂಡರ್ ಪ್ರಕ್ರಿಯೆಯಲ್ಲಿ ಚೇತನ ಸಂಸ್ಥೆಗೆ ಪರವಾನಿಗೆ, ನೀಡಲಾಗಿದೆ. ಆ ಸಂಸ್ಥೆ ಪರೀಕ್ಷೆ ನೆಪದಲ್ಲಿ ಸ್ಥಳೀಯರಿಗೆ ತೊಂದರೆ ನೀಡುತ್ತಿದೆ ಎಂದು ಆರೋಪಿಸಿದರು. ಗೋಕರ್ಣದಲ್ಲಿ ಒಟ್ಟು 30 ಪ್ರವಾಸಿ ಬೋಟ್ಗಳಿದ್ದು, ಈ ಪೈಕಿ ಕೇವಲ 10 ಬೋಟ್ಗಳಿಗೆ ಮಾತ್ರ ಎನ್‌ಒಸಿ ನೀಡಲಾಗಿದೆ.
ಉಳಿದ 20 ಬೋಟ್ಗಳಿಗೆ ಕಳೆದ ಒಂದು ವರ್ಷದಿಂದ ಅನುಮತಿ ನೀಡದೆ ಮೀನುಗಾರರನ್ನು ಸಂಕಷ್ಟಕ್ಕೆ ದೂಡಲಾಗಿದೆ ಎಂದು ದೂರಿದರು. ಎನ್‌ಒಸಿ ಕೊಡಿಸುವ ನೆಪದಲ್ಲಿ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಣ ನೀಡಿದವರಿಗೆ ಮಾತ್ರ ಅನುಮತಿ ಸಿಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು ಪ್ರವಾಸೋದ್ಯಮ ಇಲಾಖೆಯ ಕಾರ್ಯವೈಖರಿಯ ಬಗ್ಗೆಯೂ ಪ್ರದೀಪ ಆಕ್ಷೇಪ ವ್ಯಕ್ತಪಡಿಸಿದರು.
ಸ್ಥಳೀಯ ಮೀನುಗಾರರ ಸಮಸ್ಯೆಗಳಿಗೆ ಇಲಾಖೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ ಅವರು, ಜಿಲ್ಲಾಡಳಿತ ಕೂಡಲೇ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು ಎಂದರು. ಮಹೇಶ ಮಾತನಾಡಿ, ಸ್ಥಳೀಯ ಮೀನುಗಾರರ ಬದುಕಿನೊಂದಿಗೆ ಚೆಲ್ಲಾಟವಾಡುವುದನ್ನು ಸಹಿಸುವುದಿಲ್ಲ. ಬಾಕಿ ಇರುವ 20 ಬೋಟ್ಗಳಿಗೆ ಎನ್‌ಒಸಿ ನೀಡದಿದ್ದರೆ ಸಂಬಂಧಪಟ್ಟ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಶಿವರಾಮ ಕಿಮಾಣಿ, ಗೋಪಾಲ, ನಾಗರಾಜ ನಾಯ್ಕ, ಗುಲಾಬಿ, ಸಂದೀಪ ಸೇರಿದಂತೆ ವಿವಿಧ ಮೀನುಗಾರ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.