ಶಿಗ್ಗಾವ್

ವಾಲ್ ವಿತ್ ಇಂಟರ್‌ಲಾಕ್ ಕಾಮಗಾರಿ ಕಳಪೆ: ಆರೋಪ

ವಾಲ್ ವಿತ್ ಇಂಟರ್‌ಲಾಕ್ ಕಾಮಗಾರಿ ಕಳಪೆ: ಆರೋಪ

ಶಿಗ್ಗಾವಿ 28: ವನಹಳ್ಳಿ ಗ್ರಾಮ ಪಂಚಾಯತಿಯ ಎದುರು 15 ನೇ ಹಣಕಾಸು ಯೋಜನೆಯಲ್ಲಿ ನಿರ್ಮಿಸುತ್ತಿರುವ ಕಾಂಕ್ರೀಟ್ ವಾಲ್ ವಿತ್ ಇಂಟರ್‌ಲಾಕ್ ಕಾಮಗಾರಿಯು ಕಳಪೆಯಾಗಿದೆ ಎಂದು ಆರೋಪಿಸಿ ಕೆಲ ಗ್ರಾಮಸ್ಥರು ಪಂಚಾಯತ ಅಭಿವೃದ್ಧಿ ಅಧಿಕಾರಿ ಪರಶುರಾಮ ಹೊಸಮನಿ ಅವರಿಗೆ ಸೋಮವಾರ ಮನವಿ ಅರ​‍್ಿಸಿದ್ದಾರೆ.  

ಗುಣಮಟ್ಟದ ಸಾಮಗ್ರಿಗಳನ್ನು ಬಳಸಿ ಕಾಮಗಾರಿ ನಿರ್ಮಿಸದೇ ಕಳಪೆ ಮಟ್ಟದ ಸಾಮಗ್ರಿಗಳನ್ನು ಬಳಸುತ್ತಿದ್ದಾರೆ ಅಲ್ಲದೇ ಕಾಮಗಾರಿಯನ್ನು ಹಗಲಿನಲ್ಲಿ ಮಾಡದೇ ರಾತ್ರಿ ವೇಳೆಯಲ್ಲಿ ಮಾಡಲಾಗುತ್ತಿದ್ದು ಜನರಿಗೆ ಕಳಪೆ ಕಾಮಗಾರಿ ಮಾಡಲಾಗುತ್ತಿದೆ ಎಂದು ತಿಳಿಸಿದರೂ ಅಲ್ಲಿ ಜನಪ್ರತಿನಿಧಿಗಳು ಇಲ್ಲಿಯವರೆಗೂ ಯಾವುದೇ ಕ್ರಮ ಜರುಗಿಸಿಲ್ಲ ಅಲ್ಲದೇ ಎಷ್ಟಿಮೆಂಟ್ ಪ್ರಕಾರ ಕಾಮಗಾರಿ ಮಾಡುತ್ತಿಲ್ಲ ಆದ್ದರಿಂದ ಕೂಡಲೇ ಗುತ್ತಿಗೆದಾರರನ್ನು ಕೆಲಸದಿಂದ ವಜಾಗೊಳಿಸಿ ಬೇರೆಯವರಿಗೆ ನೀಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ. 

ಈ ಸಂದರ್ಭದಲ್ಲಿ ಸಂತೋಷ ಬಂಡಿವಡ್ಡರ, ಹಾಲಪ್ಪ ವಡ್ಡರ, ಮಂಜುನಾಥ ಎನ್ ವಡ್ಡರ, ಪ್ರಕಾಶ ವಡ್ಡರ, ಬಸವರಾಜ ವಡ್ಡರ ಸೇರಿದಂತೆ ಇತರರು ಇದ್ದರು. 


ಸುದ್ದಿ ಓದಿ