ನೇತ್ರ, ಅಂಗಾಂಗ ದಾನಗಳ ಜಾಗೃತಿಗಾಗಿ ವಾಕ್ಥಾನ್

ನೇತ್ರ, ಅಂಗಾಂಗ ದಾನಗಳ ಜಾಗೃತಿಗಾಗಿ ವಾಕ್ಥಾನ್

ಬಳ್ಳಾರಿ 24: ನೇತ್ರ ಮತ್ತು ಅಂಗಾಂಗ ದಾನಗಳ ಜಾಗೃತಿಗಾಗಿ ನಗರದ ಆರ್ಯ, ವೈಶ್ಯ ಅಸೋಸಿಎಷನ್ನಿಂದ ಭಾನುವಾರ ಬೆಳಗಿನಜಾವ 6 ಗಂಟೆಯಿಂದ ಹಮ್ಮಿಕೊಂಡಿದ್ದ ವಾಕ್ ಥಾನ್ ಓಟದಲ್ಲಿ ಸಂಘದ ಸಾವಿರಾರು ಜನ ಭಾಗವಹಿಸಿದ್ದರು. ಜೊತೆಗೆ ಎಸ್ಪಿ ಅರುಣ್ ರಂಗರಾಜನ್ ಕೂಡಾ ಭಾಗವಹಿಸಿದ್ದರು. ನಂತರ ಮಾತನಾಡಿದ ಸಂಘಸಂಸ್ಥೆಗಳು ಈ ರೀತಿ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಅಂಗಾಂಗಗಳ ದಾನದ ಬಗ್ಗೆ ಜಾಗೃತಿಯಿಂದ ಅನೇಕ ಜನ ಕೆಲ ಕಾರಣಗಳಿಂದ ಹೊಂದಿರುವ ಅಂಗಾಗಳ ದೋಷವನ್ನು ಚಿಕಿತ್ಸೆಗಳ ಮೂಲಕ ಸರಿಪಡಿಸಲು ಸಹಕರಿಸಿದರೆ ಅವರೂ ಸಹ ಇನ್ನಿತರರಂತೆ ಬಾಳಿ ಬದುಕಲು ಅನುಕೂಲವಾಗುತ್ತದೆ ಎಂದರು. 

ಮಾತನಾಡಿದ ಆರ್ಯ, ವೈಶ್ಯ ಅಸೋಸಿಎಷನ್ನ ಅಧ್ಯಕ್ಷ ರಮೇಶಗೋಪಾಲ ಮಾತನಾಡಿ ಹಲವು ದಶಕಗಳಿಂದ ಅನೇಕ ರೀತಿಯ ಸಾಮಾಜಿಕ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಬಂದಿರುವ ನಮ್ಮ ಆರ್ಯ, ವೈಶ್ಯ ಸಮಾಜದ ಆಲೋಚನೆ ಸದಾಜನಮುಖಿಯಾಗಿರುತ್ತದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು. ನಗರದ ಅಗಡಿಮಾರೆಪ್ಪ ಕಾಲೊನಿ ಹಿಂಬಾಗದಿಂದ ಆರಂಭಗೊಂಡ ವಾಕ್ಥಾನ್ ರಾಘವಕಲಾಮಂದಿರ, ಎಸ್.ಎನ್.ಪೇಟೆ, ಗಡಗಿ ಚನ್ನಪ್ಪವೃತ್ತ, ಬೆಂಗಳೂರು ರಸ್ತೆ, ತೇರುಬಜಾರ್, ಮೋತಿವೃತ್ತದ ಮಾರ್ಗವಾಗಿ ರೈಲ್ವೇ ಸ್ಟೇಷನ್ ಹತ್ತಿರದಿಂದ ರಾಘವಕಲಾಮಂದಿರಕ್ಕೆ ಬಂದು ವಿರಮಿಸಿತು. ವಿಜಯ ಸಾದಿಸಿದ ಸ್ಪಧರ್ಿಗಳಿಗೆ ಬೆಳ್ಳಿಯ ಪದಕವನ್ನು ಆರ್ಯ, ವೈಶ್ಯ ಸಂಘಟನೆಯ ಅಧ್ಯಕ್ಷ ಡಾ|| ಡಿ.ಎಲ್.ರಮೇಶಗೋಪಾಲ, ಕಾರ್ಯದಶರ್ಿ ಸ್ವಂತ ಗಿರಿದರ್, ಮೊದಲಾದ ಗಣ್ಯರು ವಿತರಿಸಿದರು. ನಂತರ ಕಲಾಮಂದಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. 

ಈ ಕಾರ್ಯಕ್ರಮದಲ್ಲಿ ವೈಶ್ಯ ಸಮೂದಾಯದ ಗಣ್ಯರಾದ ಮುತ್ಯಾಲಪ್ಪ ಅವರಿಗೆ ಆರ್ಯ, ವೈಶ್ಯ ಅಸೋಸಿಎಷನ್ ಪರವಾಗಿ ಗೌರವಿಸಿ ಸನ್ಮಾನಿಸಲಾಯಿತು. ಈ ಸಮಾರಂಭದಲ್ಲಿ ಸಮಾಜದ ಸಾವಿರಾರು ಭಾಂದವರು, ಭಾಗವಹಿಸಿದ್ದರು.


ಸುದ್ದಿ ಓದಿ