ದೇಶದ ಏಕತೆಗಾಗಿ ನಡಿಗೆ ಕಾರ್ಯಕ್ರಮ
ಶಿಗ್ಗಾವಿ 14: ಕಾಂಗ್ರೆಸ್ ಪಕ್ಷದ ಶಿಗ್ಗಾವಿ ಸವಣೂರ ಮುಖಂಡರು ಹಾಗೂ ಮಾಜಿ ಶಾಸಕ ಸೈಯದ್ ಅಜೀಮಪೀರ ಖಾದ್ರಿ ಯವರು ನೇತೃತ್ವದಲ್ಲಿ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ "ದೇಶದ ಏಕತೆಗಾಗಿ ನಡೆಗೆ" ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ತಾಲೂಕಿನ ಬಂಕಾಪುರ ಪಟ್ಟಣದ ಅಲ್ಲಾವುದ್ದಿನ ಶಾ ಖಾದ್ರಿ ದರ್ಗಾದಲ್ಲಿ ಆರ್ಶಿವಾದ ಪಡೆದ ನಂತರ ಸದಾಶಿವಪೇಟ, ನಾರಾಯಣಪುರ ಮಾರ್ಗವಾಗಿ ಬಾಡ ಗ್ರಾಮದಲ್ಲಿ ಶ್ರೀ ಭಕ್ತ ಕನಕದಾಸರ ಮೂರ್ತಿಗೆ ಮಾಲರೆ್ಣ ಮಾಡಿ ನಂತರ ಕಲ್ಯಾಣ, ಖುರ್ಷಾಪುರ ಮಾರ್ಗವಾಗಿ ಶಿಗ್ಗಾಂವ ನಗರದ ಶ್ರೀ ವೀರರಾಣಿ ಕಿತ್ತೂರ ರಾಣಿ ಚೆನ್ನಮ್ಮ ಮೂರ್ತಿಗೆ ಮಾಲರೆ್ಣ ಮಾಡಿ ನಂತರ ಪುರಸಭೆ ಆವರಣದಲ್ಲಿರುವ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಮೂರ್ತಿಗೆ ಮಾಲಾರೆ್ಣ ಮಾಡಿ ವಾಹನ ಜಾಥಾ ಮೂಲಕ ಜಾಗೃತಿ ಮೂಡಿಸಲಾಯಿತು
ಈ ಸಂದರ್ಭದಲ್ಲಿ ಡಾ.ಫಕ್ಕಿರಗೌಡ.ಜಿ.ಪಾಟೀಲ ಎಸ್ ವಿ ಪಾಟೀಲ, ಬಸವರಾಜ ಸಾಲಿ, ಎಸ್ ಎಫ್ ಮಣಕಟ್ಟಿ, ಗುಡ್ಡಪ್ಪ ಜಲದಿ, ಕೇದಾರ್ಪ ಬಗಾಡೆ, ಅಣ್ಣಪ್ಪ ಲಮಾಣಿ, ವಸಂತಾ ಬಾಗೂರ, ಅಯೂಬಖಾನ ಪಠಾಣ, ಎ.ಸಿ.ಜಮಾದರ, ರಬ್ಬಾನಿ ತರೀನ, ಅಶೋಕ ಮನ್ನಂಗಿ, ಪೀರಸಾಬ ಗವಾರಿ, ರಮೇಶ ದುಗ್ಗತ್ತಿ, ಗೀರಿಶ ಬೈಲವಾಳ, ಮಂಜುನಾಥ ಚಿನ್ನಪ್ಪನವರ, ಶರಣಪ್ಪ ಕಿವುಡನವರ, ಮಂಜುನಾಥ ತಿಮ್ಮಾಪುರ, ಶಬ್ಬಿರ ಮಕಾಂದರ್, ಶಂಭು ನೇರ್ತಿ, ಮಹಾಂತೇಶ ಸಾಲಿ, ಭಿರೇಶ ಜಟ್ಟೆಪ್ಪನವರ, ಅಣ್ಣಪ್ಪ ನಡಟ್ಟಿ ಮತ್ತಿತರರು ಉಪಸ್ಥಿತರಿದ್ದರು.