ಯರಗಟ್ಟಿ

ಮತದಾನ ಜಾಗೃತಿ ಅಭಿಯಾನ: ವಿಶೇಷ ಚೇತನರ ಬೈಕ್ ರಾ​‍್ಯಲಿ

ಮತದಾನ ಜಾಗೃತಿ ಅಭಿಯಾನ: ವಿಶೇಷ ಚೇತನರ ಬೈಕ್ ರಾ​‍್ಯಲಿ

ಯರಗಟ್ಟಿ : ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಶನಿವಾರ ಸವದತ್ತಿ ತಾಲೂಕಾ ಸ್ವೀಪ್ ಸಮಿತಿ ಹಾಗೂ ಯರಗಟ್ಟಿ ಪಟ್ಟಣ ಪಂಚಾಯತ ಸಹಯೋಗದಲ್ಲಿ ಹಮ್ಮಿಕೊಂಡಿರುವ ಮತದಾನ ಜಾಗೃತಿ ಅಭಿಯಾನದ ಅಂಗವಾಗಿ ವಿಶೇಷ ಚೇತನರ ಬೈಕ್ ರ್ಯಾಲಿಗೆ ತಾಪಂ ಸಹಾಯಕ ನಿರ್ದೇಶಕ (ಪಂ.ರಾ) ಆರ್ ಎ ಪಾಟೀಲ ಚಾಲನೆಯನ್ನು ನೀಡಿದರು. ಇದೇ ವೇಳೆ ಮತದಾರರಿಗೆ ಪ್ರತಿಜ್ಞಾ ವಿಧಿಯನ್ನು ಭೋದಿಸಲಾಯಿತು. ಬಳಿಕ ಯರಗಟ್ಟಿ ಪ್ರವಾಸಿ ಮಂದಿರದಿಂದ ಪ್ರಾರಂಭವಾದ ಬೈಕ್ ರ್ಯಾಲಿಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ, ಬಸನಿಲ್ಧಾಣದಲ್ಲಿ ಸಂಚರಿಸಿ ಮತದಾರರಿಗೆ ಮತದಾನದ ಕುರಿತು ಜಾಗೃತಿಯನ್ನು ಮೂಡಿಸಲಾಯಿತು. 

ಯರಗಟ್ಟಿ ತಾಲೂಕಾ ತಹಶಿಲ್ದಾರರಾದ ಚಂದ್ರಶೇಖರ ನಾಯ್ಕ, ತಾಪಂ ವ್ಯವಸ್ಥಾಪಕ ಜಿ ಎಸ್ ಬಡೆಮ್ಮಿ,  ಪಟ್ಟಣ ಪಂಚಾಯತ ಪ್ರಭಾರಿ ಮುಖ್ಯಾಧಿಕಾರಿ ಕೆ ಬಿ ಬೆಣ್ಣಿ, ಪಿಎಸ್‌ಐ ಆಯ್‌. ಎಮ್‌. ಹಿರೇಗೌಡ, ತಾ. ಪಂ ಐಇಸಿ ಸಂಯೋಜಕ ಮಲೀಕಜಾನ ಮೋಮಿನ, ತಾಪಂ ಸಿಬ್ಬಂದಿ ಬಸವರಾಜ ಹಂಕಪ್ಪನವರ, ಎಂಆರ್ ಡಬ್ಲ್ಯೂ ಎಸ್ ಎಸ್ ಹೂಲಿಕಟ್ಟಿ, ಬಿ. ಎಫ್ ಟಿ ಉಮೇಶ ಗೊರವನಕೊಳ್ಳ ವಿ. ಆರ್ ಡಬ್ಲ್ಯೂಗಳು, ಸಿಬ್ಬಂದಿಗಳು, ಇನ್ನಿತರರು ಉಪಸ್ಥಿತರಿದ್ದರು. 


ಸುದ್ದಿ ಓದಿ